ಟಿಪ್ಪು ಜಯಂತಿ ಆಚರಣೆ ತಪ್ಪಲ್ಲ: ಖರ್ಗೆ
ದೇಶದಲ್ಲಿ ಅನೇಕ ರಾಜ ಹಾಗೂ ಮಹಾರಾಜರು ಜನಿಸಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ಟಿಪ್ಪು ಸುಲ್ತಾನ್ ಸಹ ಒಬ್ಬರು. ಅವರ ಜಯಂತಿ ಆಚರಿಸಿದರೆ ತಪ್ಪೇನಲ್ಲ.

ಬೆಂಗಳೂರು: 'ದೇಶದಲ್ಲಿ ಅನೇಕ ರಾಜ ಹಾಗೂ ಮಹಾರಾಜರು ಜನಿಸಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ಟಿಪ್ಪು ಸುಲ್ತಾನ್ ಸಹ ಒಬ್ಬರು. ಅವರ ಜಯಂತಿ ಆಚರಿಸಿದರೆ ತಪ್ಪೇನಲ್ಲ' ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ,
ನಮ್ಮಲ್ಲಿ ನೂರೆಂಟು ಜಾತಿಗಳಿವೆ. ಪ್ರತಿಯೊಬ್ಬ ನಾಯಕನೂ ಒಂದೊಂದು ಜಾತಿಯಲ್ಲಿ ಹುಟ್ಟಿರುತ್ತಾರೆ. ಅಂತಹ ಮಹಾನ್ ನಾಯಕರ ಜಯಂತಿ ಮಾಡುವುದು ತಪ್ಪೇನಲ್ಲ. ಅದಕ್ಕೆ ವಿರೋಧ ಸಲ್ಲದು ಎಂದರು.
ಮೋದಿಗೆ ಪೂರ್ಣ ವಿರಾಮ: ಪ್ರಧಾನಿ ನರೇಂದ್ರ ಮೋದಿ ಅವರ ಶರವೇಗಕ್ಕೆ ದೆಹಲಿ ಚುನಾವಣೆಯಲ್ಲೇ ಅಲ್ಪವಿರಾಮ ಹಾಕಲಾಗಿತ್ತು, ಈಗ ಬಿಹಾರದ ಚುನಾವಣೆಯಲ್ಲಿ ಮೂರು ಪಕ್ಷದವರು ಸೇರಿ ಪೂರ್ಣ ವಿರಾಮಹಾಕಿದ್ದೇವೆ. ಅವರು ಇನ್ನು ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಕುಟುಕಿದ್ದಾರೆ. ಬಿಹಾರದಲ್ಲಿ ಜೆಡಿಯು, ಆರ್‍ಜೆಡಿ, ಕಾಂಗ್ರೆಸ್ ಪಕ್ಷಗಳು ಸೇರಿ ಬಿಜೆಪಿಯನ್ನು ಸೋಲಿಸಿವೆ. ಮುಂದಿನ ದಿನಗಳಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲೇ ಸರ್ಕಾರ ನಡೆಯಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


