ಲಾಟರಿ ಹಗರಣದಲ್ಲಿ ಭಾಗಿ ಆರೋಪ; ಶಾಸಕನಿಂದ ಆತ್ಮಹತ್ಯೆ ಯತ್ನ?
ಅಕ್ರಮ ಲಾಟರಿ ಹಗರಣದಲ್ಲಿ ಆರೋಪಿ ಪಾರಿರಾಜನ್ ಜತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ವಿಧಾನ ಪರಿಷತ್‍ನ ಪಕ್ಷೇತರ ಸದಸ್ಯ...

ಬೆಂಗಳೂರು: ಅಕ್ರಮ ಲಾಟರಿ ಹಗರಣದಲ್ಲಿ ಆರೋಪಿ ಪಾರಿರಾಜನ್ ಜತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ವಿಧಾನ ಪರಿಷತ್‍ನ ಪಕ್ಷೇತರ ಸದಸ್ಯ ಯು.ಡಿ. ಮಲ್ಲಿಕಾರ್ಜುನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವದಂತಿ ನಗರದಲ್ಲಿ ಮಂಗಳವಾರ ಹಬ್ಬಿತ್ತು.
ಈ ಬಗ್ಗೆ ಮಾತನಾಡಿರುವ ಅವರು ಇದೊಂದು ವದಂತಿ. ಅಂಥ ಕೃತ್ಯ ಮಾಡಿಕೊಳ್ಳುವ ಅಗತ್ಯ ತಮಗಿಲ್ಲ ಎಂದಿದ್ದಾರೆ. ``ಅಕ್ರಮ ಲಾಟರಿ ಹಗರಣದಲ್ಲಿ ನಾನು ಭಾಗಿಯಾಗಿಲ್ಲ. ಹಗರಣದ ಕಿಂಗ್‍ಪಿನ್ ಎಂದು ಹೇಳಲಾಗುತ್ತಿರುವ ಪಾರಿರಾಜನ್ ಜತೆಗೆ ಸಂಪರ್ಕ ಹೊಂದಿಲ್ಲ. ಒಂದು ವೇಳೆ ಆತನ ಜತೆಗೆ ಸಂಪರ್ಕ ಹೊಂದಿದ್ದರೆ ಯಾವುದೇ ರೀತಿಯ ಶಿಕ್ಷೆಗೆ ಒಳಗಾಗಲು ಸಿದ್ಧ. ಆರೋಪಕ್ಕೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿಲ್ಲ. ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿಲ್ಲ'' ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


