ನಗರಸಭೆ ಸದಸ್ಯನ ಮೇಲೆ ಅಂಬಿ ಬೆಂಬಲಿಗರ ಹಲ್ಲೆ
ನಗರಸಭೆ ಅಧ್ಯಕ್ಷ ಸಿದ್ದರಾಜು ಮತ್ತು ಉಪಾಧ್ಯಕ್ಷೆ ಚಂದ್ರಕಲಾ ಬೆಂಬಲಿಗ ಸದಸ್ಯ ಅನಿಲ್ಕುಮಾರ್ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಬೆಂಬಲಿಗರು ಹಲ್ಲೆ ನಡೆಸಿರುವ...

ಮಂಡ್ಯ: ನಗರಸಭೆ ಅಧ್ಯಕ್ಷ ಸಿದ್ದರಾಜು ಮತ್ತು ಉಪಾಧ್ಯಕ್ಷೆ ಚಂದ್ರಕಲಾ ಬೆಂಬಲಿಗ ಸದಸ್ಯ ಅನಿಲ್ಕುಮಾರ್ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಬೆಂಬಲಿಗರು ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ.
ನಗರದ ಚಾಮುಂಡೇಶ್ವರಿ ನಗರ ಬಡಾವಣೆಯಲ್ಲಿರುವ ಸಚಿವ ಅಂಬರೀಷ್ ನಿವಾಸದಲ್ಲಿ ನಗರಸಭೆ ಅಧ್ಯಕ್ಷ ಸಿದ್ದರಾಜು ಮತ್ತು ಉಪಾಧ್ಯಕ್ಷೆ ಚಂದ್ರಕಲಾ ವಿರುದ್ಧ ಅವಿಶ್ವಾಸ ಮಂಡಿಸುವ ಕುರಿತಂತೆ ಕಾಂಗ್ರೆಸ್ ವೀಕ್ಷಕ ನಾರಾಯಣಪ್ಪ ಸದಸ್ಯರೊಂದಿಗೆ ಸಭೆ ನಡೆಸುತ್ತಿದ್ದ ವೇಳೆ ಘಟನೆ ಜರುಗಿದೆ.
ಅಧ್ಯಕ್ಷ ಸಿದ್ದರಾಜು ಬೆಂಬಲಿಗರಾದ ಕಾಂಗ್ರೆಸ್ ಸದಸ್ಯ ಅನಿಲ್ಕುಮಾರ್ ಸಭೆಗೆ ಆಗಮಿಸಿದರು. ವೀಕ್ಷಕ ನಾರಾಯಣಪ್ಪ ಬಳಿ ಬಂದ ಅನಿಲ್ಕುಮಾರ್, `ಇವತ್ತು ಕಾಂಗ್ರೆಸ್ ಸಭೆ ಇದೆ ಅಂತ ನಮಗೆ ವಿಷಯ ತಿಳಿಸಲಿಲ್ಲ ಎಂದರು. ಆಗ ಮಾತಿಗೆ ಮಾತು ಬೆಳೆದು ವಾಗ್ವಾದ ಉಂಟಾಯಿತು. ಒಂದು ಹಂತದಲ್ಲಿ ಅನಿಲ್ಕುಮಾರ್ ಮೇಲೆ ಹಲ್ಲೆ ನಡೆಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


