ಶಿಕ್ಷಕ ವರ್ಗ ನಿಯಂತ್ರಣ ವಿಧೇಯಕಕ್ಕೆ ತಿದ್ದುಪಡಿ
ಬಹು ನಿರೀಕ್ಷಿತ ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕ ತಿದ್ದುಪಡಿಗೆ ವಿಧಾನಸಭೆಯು ಸೋಮವಾರ ಒಪ್ಪಿಗೆ ಸೂಚಿಸಿದೆ...

ವಿಧಾನಸಭೆ: ಬಹು ನಿರೀಕ್ಷಿತ ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕ ತಿದ್ದುಪಡಿಗೆ ವಿಧಾನಸಭೆಯು ಸೋಮವಾರ ಒಪ್ಪಿಗೆ ಸೂಚಿಸಿದೆ. ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆಗಳ ಮಿತಿಯನ್ನು ಶೇ.5ರಿಂದ 8ಕ್ಕೆ ಏರಿಕೆ, ಹಾಗೆಯೇ ಪತಿ-ಪತ್ನಿ ಮತ್ತು ಪರಸ್ಪರ ವರ್ಗಾ ವಣೆ ಸಂದರ್ಭದಲ್ಲಿ ಒಂದು ಜ್ಯೇಷ್ಠತಾ ಘಟಕದಿಂದ ಮತ್ತೊಂದು ಜ್ಯೇಷ್ಠತಾ ಘಟಕಕ್ಕೆ ಶಿಕ್ಷಕರ ವರ್ಗಾವಣೆಯ ನಿಷೇಧ ವನ್ನು ಸಡಿಲಿಕೆ ಹಾಗೂ ಮೇ 42005ಕ್ಕೆ 5 ವರ್ಷ ಸೇವೆ ಸಲ್ಲಿಸಿ ರಬೇಕು ಎಂಬ ಮೂರು ಅಂಶಗಳಿಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದು ವಿಧಾನ ಸಭೆಯ ಅನುಮತಿ ಪಡೆದುಕೊಂಡಿದೆ. ವಿಧಾನಪರಿಷತ್ ನಲ್ಲಿ ಅನುಮತಿ ದೊರೆತರೆ ಮೇ ಅಂತ್ಯ ಅಥವಾ ಜೂನ್‍ನಲ್ಲಿ ನಡೆಯಲಿರುವ ಕೌನ್ಸೆಲಿಂಗ್‍ನಲ್ಲಿ ಶಿಕ್ಷಕರಿಗೆ ನೆರವಾಗಲಿದೆ.
ಐದು ವರ್ಷಗಳಿಂದ ಶಿಕ್ಷಕರ ವಲಯದಿಂದ ಈ ಸಂಬಂಧ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ಆದರೆ, ನಿಯಮ ಸಡಿಲಿಕೆಯಿಂದ ಉತ್ತರ-ಕರ್ನಾಟಕ ಭಾಗದಲ್ಲಿ ಸಾಕಷ್ಟು ಶಿಕ್ಷಕರ ಹುದ್ದೆ ಖಾಲಿ ಬೀಳುತ್ತದೆ ಎಂಬ ಆತಂಕ ಸರ್ಕಾರವನ್ನು ಕಾಡುತ್ತಿತ್ತು. ತಿದ್ದುಪಡಿ ವಿಧೇಯಕ ಕುರಿತ ಚರ್ಚೆಯ ಸಂದರ್ಭದಲ್ಲಿಯೂ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ,
ವೈ.ಎಸ್.ವಿ.ದತ್ತ, ಬಿ.ಆರ್.ಪಾಟೀಲ್ ಅವರು ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಿದ್ದಾರೆ. ಆದರೆ ಉತ್ತರ ಕರ್ನಾಟಕ ಭಾಗದ ಶಾಸಕರ ವಿರೋಧದ ನಡುವೆಯೂ ತಿದ್ದುಪಡಿಗೆ
ಅನುಮತಿ ದೊರೆತಿದೆ. ಇದರಿಂದ ವರ್ಗಾವಣೆ ಮಿತಿಯು ಶೇ.5 ರಿಂದ 8ಕ್ಕೆ ಏರಲಿದೆ. ಆದರೆ ಖಾಲಿ ಹುದ್ದೆಯಿದ್ದರೆ ಮಾತ್ರ ವರ್ಗಾವಣೆಯಾಗಲಿದೆ. ಇನ್ನು ಪರಸ್ಪರ ವರ್ಗಾವಣೆಗೆ
ಕನಿಷ್ಟ 3 ವರ್ಷ ಸೇವೆ ಕಡ್ಡಾಯ ಎಂದು ಹೇಳಲಾಗಿದೆ. ಹಾಗೆಯೇ ಇಂತಹ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ವರ್ಗಾವಣೆಗೆ ಅವಕಾಶವಿರುವುದಿಲ್ಲ.
ಏಕಕಾಲದಲ್ಲಿ ಪ್ರವೇಶ ಪರೀಕ್ಷೆ
ಸುಮಾರು 11 ಸಾವಿರ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿ ಮೇ 25ಕ್ಕೆ ಪ್ರವೇಶ ಪರೀಕ್ಷೆ ನಡೆಯಲಿದೆ. ಶಿಕ್ಷಕರ ವರ್ಗಾವಣೆಯ ಒತ್ತಡ ನಿಯಂತ್ರಿಸುವ ಸಲುವಾಗಿ ಏಕಕಾಲದಲ್ಲಿ ಎಲ್ಲ 30 ಜಿಲ್ಲೆಗಳಲ್ಲಿಯೂ ಪ್ರವೇಶ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ. ಇದರಿಂದ ಯಾವುದೇ ಅಭ್ಯರ್ಥಿಯು ಎರಡು ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಇದರಿಂದ ಒಬ್ಬ ಅಭ್ಯರ್ಥಿಯು ಬೇರೆ ಜಿಲ್ಲೆಯಲ್ಲಿ ನೇಮಕಗೊಂಡು ಬಳಿಕ ವರ್ಗಾವಣೆಗೆ ಒತ್ತಡ ಹೇರುವ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂದು ಸಚಿವ ಕಿಮ್ಮನೆ ರತ್ನಾಕರ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಸುಮಾರು 82 ಸಾವಿರ ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ.
ಈಗಿನ ನಿಯಮದ ಪ್ರಕಾರ ಇಷ್ಟೊಂದು ಅರ್ಜಿದಾರರ ಮನವಿಗೆ ಸ್ಪಂದಿಸಲು ಆಗುತ್ತಿಲ್ಲ. ಇದರಲ್ಲಿ 15 ಸಾವಿರಕ್ಕೂ ಅಧಿಕ ಪತಿ-ಪತ್ನಿ ಪ್ರಕರಣಗಳಿವೆ. ಈ ಹಿನ್ನೆಲೆಯಲ್ಲಿ ತಿದ್ದುಪಡಿ
ಅನಿವಾರ್ಯವಾಗಿದೆ. ಆದರೆ ಉತ್ತರ ಕರ್ನಾಟಕ ಜಿಲ್ಲೆಗಳ ಬಗ್ಗೆ ಎಚ್ಚರಿಕೆ ವಹಿಸಲಾಗುವುದು. ಖಾಲಿ ಇಲ್ಲದ ಹುದ್ದೆಗಳಿಗೆ ಯಾವುದೇ ವರ್ಗಾವಣೆ ನಿಯಮ ಅನ್ವಯವಾಗುವುದಿಲ್ಲ
ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


