ರಾಜಕೀಯ

ಬೆಂಗಳೂರು- ಮೈಸೂರು ಅಷ್ಟಪಥ ಕಾರ್ಯ ಚುರುಕು

ಬೆಂಗಳೂರು- ಮೈಸೂರು ಅಷ್ಟ ಪಥ ರಸ್ತೆ ನಿರ್ಮಾಣ ಕಾರ್ಯ ಚುರುಕುಗೊಳಿಸಿರುವ ರಾಜ್ಯ ಸರ್ಕಾರ, ಮಂಡ್ಯ ಬಳಿ ...

ಬೆಂಗಳೂರು- ಮೈಸೂರು ಅಷ್ಟಪಥ ಕಾರ್ಯ ಚುರುಕು
ಬೆಂಗಳೂರು- ಮೈಸೂರು ರಸ್ತೆ
Published On :

ಬೆಂಗಳೂರು: ಬೆಂಗಳೂರು- ಮೈಸೂರು ಅಷ್ಟ ಪಥ ರಸ್ತೆ ನಿರ್ಮಾಣ ಕಾರ್ಯ ಚುರುಕುಗೊಳಿಸಿರುವ ರಾಜ್ಯ ಸರ್ಕಾರ, ಮಂಡ್ಯ ಬಳಿ ರು. 1200 ಕೋಟಿ ವೆಚ್ಚ ದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಮುಂದಾಗಿದೆ. ಲೋಕೋಪಯೋಗಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಪತ್ರಿಕಾಗೋಷ್ಠಿ ಯಲ್ಲಿ ಗುರುವಾರ ಈ ವಿಷಯ ತಿಳಿಸಿದ್ದು,ಈ ಹಿಂದೆ ಮಂಡ್ಯ ಬಳಿ ಪ್ಲೈ ಓವರ್ ನಿರ್ಮಿಸಲು ತೀರ್ಮಾನಿಸಲಾಗಿತ್ತು.ಆದರೆ ಈಗ ಅದನ್ನು ಕೈ ಬಿಟ್ಟು ಬೈಪಾಸ್ ರಸ್ತೆ ನಿರ್ಮಿಸಲು ಯೋಚಿಸಲಾಗುತ್ತದೆ. ಬಿಡದಿ  , ರಾಮನಗರ ಚನ್ನಪಟ್ಟ ಣ ಗಳಲ್ಲಿ  ಮಂಡ್ಯದ ತನಕ ಬೈಪಾಸ್ ರಸ್ತೆ  ನಿರ್ಮಾಣವಾಗಲಿದೆ ಎಂದು ಹೇಳಿ ದರು.ಈ ಮುಂಚೆ ತೀರ್ಮಾನಿಸಿ ದಂತೆ ಫ್ಲೈ ಓವರ್ ನಿರ್ಮಿಉದ್ದೇಶಿಸಿರುವುದರಿಂದ ರು. 12,000 ಕೋಟಿ ವೆಚ್ಚವಾಗಲಿದೆ. ಅಷ್ಟಪಥದ ಜತೆಗೆ ಸರ್ವಿಸ್ ರಸ್ತೆಯೂ ಇರುತ್ತದೆ. ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟು ಕೊಂಡು ಪ್ರಯಾಣಿಕರ ಬಳಿ ಟೋಲ್ ಸಂಗ್ರಹಿಸಲಾಗುವುದು ಎಂದ ಅವರು, ಮೈಸೂರು- ಬೆಂಗಳೂರು ನಡುವೆ ಪರ್ಯಾಯ ರಸ್ತೆ ನಿರ್ಮಿಸುವುದಕ್ಕೆ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.  ಅಶೋಕ್ ಖೇಣಿ ಕೇಂದ್ರ ಸರ್ಕಾರಕ್ಕೆ ಮನವಿ ನೀಡಿರುವ ಬಗ್ಗೆ ಸಂಸದರ ಜತೆ ನಡೆದ ಚರ್ಚೆ ಸಂದರ್ಭದಲ್ಲಿ ಪ್ರಸ್ತಾಪವಾಗಿಲ್ಲ. ಈ ಯೋಜನೆ ಮುಂದುವರಿಸು ವಂತೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನುಮಂಗಳವಾರ ದೆಹಲಿಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ನಿರಾತಂಕವಾಗಿ ಕೆಲಸ ಮಾಡಿಕೊಂಡು ಹೋಗುವಂತೆ ಅಭಯ ನೀಡಿದ್ದಾರೆ ಎಂದರುಬಂಟ್ವಾಳ- ಮಡಿಕೇರಿ, ಜೇವರ್ಗಿ-ಚಾಮರಾಜನಗರ ಸೇರಿದಂತೆ ಹಲವು ರಸ್ತೆಕಾಮಗಾರಿಗಳು ಪ್ರಗತಿಯಲ್ಲಿವೆ. ಶಿರಾಡಿರಸ್ತೆಯನ್ನು ಜೈಕೋ ಕಂಪನಿಯ ವತಿಯಿಂದಪರಿಸರ ಸ್ನೇಹಿ ರಸ್ತೆಯನ್ನಾಗಿ ಅಬಿsವೃದಿಟಛಿಪಡಿಸಲಾಗುವುದು.ಬೆಂಗಳೂರಿನಿಂದ ಕನಕಪುರದವರೆಗೆನಾಲ್ಕು ಪಥದ ರಸ್ತೆ ಹಾಗೂ ಮಳವಳ್ಳಿ,ಸತ್ಯಮಂಗಲ ಹಾಗೂ ಕೊಳ್ಳೆಗಾಲದ ತನಕಎರಡು ಪಥದ ರಸ್ತೆಯನ್ನು ನಿರ್ಮಿ ಸಲಾಗುವುದು ಎಂದು ವಿವರಿಸಿದರು.ಶಿರಾಡಿ ಘಾಟ್‍ನ 29 ಕಿಮೀ ರಸ್ತೆಯ ನಿರ್ಮಾ ಣ ಕಾರ್ಯಕ್ಕೆ ಹತ್ತು ಸಾವಿರ ಕೋಟಿ ರು. ವೆಚ್ಚವಾಗಲಿದೆ. ಯಾವುದೇ ಮರಗಳನ್ನು ಕಡಿಯದೆ ಪರಿಸರ ಸ್ನೇಹಿ ವಾತಾವರಣವನ್ನು ಉಳಿಸಿಕೊಳ್ಳಲಾ ಗುವುದು ಎಂದು ಸಚಿವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.