ರಾಜಕೀಯ

ಸಿದ್ದರಾಮಯ್ಯಗೆ ತೊಗಾಡಿಯಾ ಪತ್ರ

ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸುವುದನ್ನು ನಿಷೇಧಿಸಿರುವ ರಾಜ್ಯ ಸರ್ಕಾರ ದ ಕ್ರಮದ ವಿರುದ್ದ ವಿಶ್ವಹಿಂದು ಪರಿಷತ್‌ನ ಅಂತಾರಾಷ್ಟ್ರೀಯ...

ಸಿದ್ದರಾಮಯ್ಯಗೆ ತೊಗಾಡಿಯಾ ಪತ್ರ
ಪ್ರವೀಣ್‌ ತೊಗಾಡಿಯಾ
Published On :

ಬೆಂಗಳೂರು: ಹಿಂದೂ ಸಮಾಜೋತ್ಸವದಲ್ಲಿ  ಭಾಗವಹಿಸುವುದನ್ನು ನಿಷೇಧಿಸಿರುವ ರಾಜ್ಯ ಸರ್ಕಾರ ದ ಕ್ರಮದ ವಿರುದ್ದ ವಿಶ್ವಹಿಂದು ಪರಿಷತ್‌ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ  ಡಾ. ಪ್ರವೀಣ್‌ ತೊಗಾಡಿಯಾ ತೀವ್ರ ಅಸಮಧಾನ ವ್ಯಕ್ತ ಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ  ಬರೆದಿದ್ದಾರೆ.

ಮೈಸೂರಿನಲ್ಲಿ  ನಾನು ಭಾಷಣ ಮಾಡುತ್ತೇನೆ ಎಂದು  ವೈಯಕ್ತಿಕ ಹಿತಾಸಕ್ತಿಯಿಂದ ನನಗೆ  ನಿರ್ಬಂಧ ವಿಧಿಸಲಾಗಿದೆ. ಮಾರ್ಚ್‌ 9 ರಂದು ಕರ್ನಾಟಕದ  ಪೊಲೀಸರನ್ನು ಅಹಮದಾಬಾದ್‌ನಲ್ಲಿ ನಾನು ಹತ್ತು ವರ್ಷದ ಹಿಂದೆ ತೊರೆದಿರುವ ನನ್ನ ನಿವಾಸ ,ಕಾರ್ನಾವತಿಯಲ್ಲಿ ನನ್ನ ಟ್ರಸ್ಟ್‌ನಲ್ಲಿ ನಡೆಯುತ್ತಿರುವ ಆಸ್ಪತ್ರೆ ಮತ್ತು ವಿಎಚ್‌ಪಿ ಕಚೇರಿಗೆ  ಕೇವಲ ನನಗೆ ನೊಟೀಸ್‌ ನೀಡುವ ಸಲುವಾಗಿ  ಕಳುಹಿಸಲಾಗಿದೆ.  ನನ್ನನ್ನು ನಿಷೇಧಿಸುವ ಸಲವಾಗಿ ಪೊಲೀಸರನ್ನು ಗುಜರಾತ್‌ಗೆ ಕಳುಹಿಸುವ ಅಗತ್ಯವಿರಲ್ಲಿಲ್ಲ. ಕರ್ನಾಟಕದ ವಿಎಚ್‌ಪಿ ಕಚೇರಿಗೆ ನೊಟೀಸ್‌ ನೀಡಬಹುದಿತ್ತಲ್ಲ ಎಂದು ತೊಗಾಡಿಯಾ ಪತ್ರದಲ್ಲಿ ಬರೆದಿದ್ದಾರೆ.

ಹೊಸೂರಿನಿಂದ ನಾನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಕರ್ನಾಟಕ ಪೊಲೀಸರು  ತೊಂದರೆ ನೀಡಿದ್ದಾರೆ. ರಾಜಕೀಯ ಪ್ರೇರೆಪಿತ ವಾಗಿರುವ ಸಿದ್ದರಾಮಯ್ಯ ನಡೆ ನನಗೆ ಅಚ್ಚರಿ ತಂದಿದೆ ಎಂದು ಹೇಳಿರುವ ಅವರು ಪತ್ರದ ಕೊನೆಯಲ್ಲಿ ಒಳ್ಳೆಯದು...ಇದು ಕಲಿಯುಗ ಎಂದು ಬರೆದಿದ್ದಾರೆ.

 ತೊಗಾಡಿಯಾ ಅವರಿಗೆ ರಾಜ್ಯ ಸರ್ಕಾರ  ಬೆಂಗಳೂರು,ಉಡುಪಿ, ಚಿಕ್ಕಮಗಳೂರು ಮತ್ತು ಮೈಸೂರು ಹಿಂದೂ ಸಮಾಜೋತ್ಸವದಲ್ಲಿ  ಪಾಲ್ಗೊಳ್ಳದಂತೆ ನಿರ್ಬಂಧ ವಿಧಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.