ರಾಜಕೀಯ

ಮಾಟ ಮಂತ್ರ ವಿರುದ್ಧ ಹೋಮ!

ಜೆಡಿಎಸ್‍ನಿಂದ ಕೈವಶವಾಗಿರುವ ರೇಸ್‍ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನಿಗೂಢವಾಗಿ ನಡೆದ ಮಾಟ, ಮಂತ್ರಗಳ ವಿರುದ್ದ ...

ಮಾಟ ಮಂತ್ರ ವಿರುದ್ಧ ಹೋಮ!
ಜಿ. ಪರಮೇಶ್ವರ್
Published On :

ಬೆಂಗಳೂರು: ಜೆಡಿಎಸ್‍ನಿಂದ ಕೈವಶವಾಗಿರುವ ರೇಸ್‍ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನಿಗೂಢವಾಗಿ ನಡೆದ ಮಾಟ, ಮಂತ್ರಗಳ ವಿರುದ್ದ ಹೋಮ ನಡೆಸಲಾಗುವು
ದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಭವನವನ್ನು ಜೆಡಿಎಸ್ ಪಕ್ಷದವರು ತೆರವುಗೊಳಿಸಿದ ನಂತರ ಸ್ವಚ್ಛತೆ ಕಾರ್ಯಕ್ಕೆ ಹೋದಾಗ ಸಿಬ್ಬಂದಿಗೆ ಅಲ್ಲಿ ನಿಂಬೆ ಹಣ್ಣು ಹಾಗೂ ಕೆಂಪು ಬಟ್ಟೆಗಳು ಕಾಣುತ್ತಿವೆ. ಈ ರೀತಿ ಅಲ್ಲಿ ಮಾಟ, ಮಂತ್ರದ ನಿಂಬೆ ಹಣ್ಣು, ಕೆಂಪು ಬಟ್ಟೆಗಳನ್ನು ಯಾರು ತಂದು ಹಾಕುತ್ತಿದ್ದಾರೋ ಗೊತ್ತಿಲ್ಲ. ಹೀಗಾಗಿ ಕಚೇರಿ ಸುತ್ತಮುತ್ತ ಸ್ವಚ್ಛ ಮÁಡಿ ಹೋಮ ಮಾಡಿಸಲಾಗುವುದು ಎಂದರು.
 ದೇವೇಗೌಡ ಕಟಕಿ
ಇದೇ ವೇಳೆ, ಪರಮೇಶ್ವರ್ ಹೇಳಿಕೆಗೆ ಮಾ ಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ತೀಕ್ಷ್ಣ ವಾಗಿ ಪ್ರತಿಕ್ರಿಯಿಸಿದ್ದಾರೆ. `ಪರಮೇಶ್ವರ್
ಅವರಿಂದ ಇಂತಹ ಹೇಳಿಕೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಅವರು ಅಲ್ಲಿ ಹೋಮ ಮಾಡಿಸುವುದಾದರೆ ಮುಖ್ಯಮಂತ್ರಿ ಜತೆ ಸೇರಿಸಿಕೊಂಡೇ ನಡೆಸಲಿ. ಹಿಂದೆ ಮುಖ್ಯ
ಮಂತ್ರಿ ಸಿದ್ದರಾಮಯ್ಯ ಕೂಡ ಅದೇ ಕಚೇರಿಯಲ್ಲಿದ್ದರು' ಎಂದು ಕಟಕಿಯಾಡಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.