ಕಾಂಗ್ರೆಸ್‍ನಿಂದ ಅರ್ಕಾವತಿ ವಾಸ್ತವ ವರದಿ ಬಿಡುಗಡೆ
ಅರ್ಕಾವತಿ ಡಿನೋಟಿಫಿ ಕೇಷ ನ್ ಕುರಿತಂತೆ ಜೆಡಿಎಸ್- ಬಿಜೆಪಿಯ ಆರೋಪಕ್ಕೆ ಪ್ರತಿಯಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು...

ಬೆಂಗಳೂರು: ಅರ್ಕಾವತಿ ಡಿನೋಟಿಫಿ ಕೇಷ ನ್ ಕುರಿತಂತೆ ಜೆಡಿಎಸ್- ಬಿಜೆಪಿಯ ಆರೋಪಕ್ಕೆ ಪ್ರತಿಯಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗವು `ಅರ್ಕಾವತಿ ವಾಸ್ತವ ವರದಿ' ಬಿಡುಗಡೆ ಮಾಡಿದೆ. ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಭಾನುವಾರ ಕೆಪಿಸಿಸಿಕಾನೂನು ವಿಭಾಗದ ಅಧ್ಯಕ್ಷ ಸಿ.ಎಂ. ಧನಂಜಯ ಅವರು 38 ಅಂಶಗಳನ್ನೊಳಗೊಂಡ 22 ಪುಟಗಳಿರುವ ಹೊತ್ತಿಗೆಯನ್ನು ಭಾನುವಾರ ಬಿಡುಗಡೆ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿ ಕಿಂಚಿತ್ ಡಿನೋಟಿಫಿಕೇಷನ್ ನಡೆದಿಲ್ಲ, ಪ್ರತಿಪಕ್ಷಗಳ ನಾಯಕರು ಮಾಡಿರುವ ಆರೋಪದಲ್ಲಿ ಸತ್ಯಾಂಶಲ್ಲಎಂದು ತಿಳಿಸಿದ ಅವರು, ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣನವರ ಆಯೋ ಗಕ್ಕೆ ಈ ಪುಸ್ತಕವನ್ನು ಸಲ್ಲಿಸಲಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಯವರು ಬಿಡುಗಡೆ ಮಾಡಿರುವ `ಅರ್ಕಾವತಿ ಕರ್ಮಕಾಂಡ' ಪುಸ್ತಕದಲ್ಲಿ ಯಾವುದೇ ಹುರುಳಿಲ್ಲ. ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸಲೆಂದು ಅನಗತ್ಯವಾಗಿ ಪುಸ್ತಕ ಬಿಡುಗಡೆ ಮಾಡಿದ್ದಾರೆ ಎಂದು ಟೀಕಿಸಿದ ಅವರು, ಬಿಜೆಪಿ ನಾಯಕರ ಬಳಿ ಅರ್ಕಾವತಿ ಡಿನೋಟಿಫಿಕೇಷ ನ್ ಬಗ್ಗೆ ಪೂರಕ ದಾಖಲೆಗಳಿಲ್ಲ.
ಸತ್ಯಕ್ಕೆ ದೂರವಾದ ಅಂಶಗಳನ್ನಿಟ್ಟುಕೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆಪಾದಿಸಿದರು. ಇದೀಗ ವೆಬ್‍ಸೈಟ್ ಸೃಷ್ಟಿಸಿ ಅರ್ಕಾವತಿ
ವಿಚಾರದಲ್ಲಿ ಅನಗತ್ಯ ಗೊಂದಲವನ್ನುಂಟು ಮಾಡುತ್ತಿದ್ದಾರೆ. ತಕ್ಷಣವೇ ನಿಲ್ಲಿಸದಿದ್ದರೆ ಸೈಬರ್ ಕ್ರೈಂಗೆ ದೂರು ನೀಡುವುದಾಗಿ ಎಚ್ಚರಿಸಿದ ಧನಂಜಯ, ಬಿಜೆಪಿ ಕಾನೂನು ಘಟಕದ ಸೂರ್ಯ ನಟರಾಜ್ ಆರ್.ಟಿ.ಐ. ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದರು. ತಮ್ಮ ಆರೋಪದ ಬಗ್ಗೆ ವಿಪಕ್ಷಗಳಿಗೆ ಖಚಿತತೆ ಇದ್ದಿದ್ದರೆ ಕಾನೂನಿನ ಮೂಲಕ ಪ್ರಶ್ನಿಸಬಹುದಿತ್ತು, ಕೆಂಪಣ್ಣ ಆಯೋಗಕ್ಕೆ ದಾಖಲೆ ನೀಡಬಹುದಿತ್ತು ಇಲ್ಲವೇ ರಾಜ್ಯಪಾಲರ ಮೂಲಕವಾದರೂ ಕ್ರಮಕ್ಕೆ ಮುಂದಾಗಬಹುದಿತ್ತು. ಆದರೆ, ಯಾವುದೇ ಪ್ರಯತ್ನ ಮಾಡದೇ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದರು. ಅರ್ಕಾವತಿ ಬಡಾವಣೆ ನಿರ್ಮಾಣ ಸಂಬಂಧ ಜಮೀನು ಸ್ವಾಧೀನಕ್ಕೆ 2003ರಲ್ಲಿ ಅಂದಿನ ಸರ್ಕಾರ ಹೊರಡಿಸಿದ ಅಧಿಸೂಚನೆ ನಂತರ ಬೆಳವಣಿಗೆಗಳು ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿ ಯೂರಪ್ಪ, ಡಿ.ವಿ. ಸದಾನಂದಗೌಡ ಹಾಗೂ ರಾಷ್ಟ್ರಪತಿಯವರ ಆಡಳಿತದಲ್ಲಿ ಭೂಸ್ವಾಧೀನದಿಂದ ಕೈಬಿಟ್ಟ ಭೂಮಿ ಮರು ಪರಿಷ್ಕೃತ ಯೋಜನೆ ವಿವರಗಳನ್ನು ಪುಸ್ತಕ ಒಳಗೊಂಡಿದೆ. ನ್ಯಾಯಾಲಯ ಆದೇಶಕ್ಕೆ ಅನುಗುಣವಾಗಿಯೇ ಮುಖ್ಯಮಂತ್ರಿ ಸಿದ್ದರಾಮ ಯ್ಯ ಪ್ರಸ್ತುತ ನಿರ್ಧಾರ ಕೈಗೊಳ್ಳದಿದ್ದಲ್ಲಿ ನ್ಯಾಯಾಂಗ ನಿಂದನೆಗೊಳಗಾಗ ಬೇಕಿತ್ತು. ಹಾಗಾಗಿ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ ಎಂದು ಪುಸ್ತಕದಲ್ಲಿ ಸಮರ್ಥಿಸಿಕೊಳ್ಳಲಾಗಿದೆ. 11 ವರ್ಷಗಳ ಗೊಂದಲವನ್ನು ಸರಿಪಡಿಸಲು ನ್ಯಾಯಮೂರ್ತಿ ಕೆಂಪಣ್ಣ ಆಯೋಗವನ್ನು ರಚಿಸಲಾಗಿದೆ. ಆದರೂ ವಿ ನಾಕಾರಣ ಬೊಗಳೆ ಬಿಡುತ್ತಿರುವ ಪ್ರತಿಪಕ್ಷಗಳು ಈ ಆಯೋಗಕ್ಕೆ ದಾಖಲೆ ಸಲ್ಲಿಸಲು ಹಿಂದೆ ನೋಡುತ್ತಿರುವುದಕ್ಕೂಪುಸ್ತಕದಲ್ಲಿ ಟೀಕಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


