ರಾಜಕೀಯ

ರೇವಣ್ಣಾ ನಿನ್ ತಮ್ಮ ನೇಗಿಲು ಹಿಡದಿದ್ನಾ...?

ಏನ್ ರೇವಣ್ಣಾ ನಿನ್ನ ತಮ್ಮ ನೇಗಿಲು ಹಿಡಿದಿದ್ನಾ? ಕುಮಾರಸ್ವಾಮಿಗೆ ಕೃಷಿ ಮಾಡಿ ಅಭ್ಯಾಸ ಇದೆಯಾ? ಶೆಟ್ಟರ್ ಅಂತೂ ಬರಿ ವ್ಯಾಪಾರ ಮಾಡಿದ್ದಾರೆ. ಅವ್ರಿಗೆ ರೈತರ ಸಮಸ್ಯೆ ಗೊತ್ತಿಲ್ಲ ಬಿಡಿ. ಮಾಡಿ ಮುಖ್ಯಮಂತ್ರಿಗಳಾದ...

ರೇವಣ್ಣಾ ನಿನ್ ತಮ್ಮ ನೇಗಿಲು ಹಿಡದಿದ್ನಾ...?
ಮುಖ್ಯಮಂತ್ರಿ ಸಿದ್ದರಾಮಯ್ಯ
Published On :

ವಿಧಾನಸಭೆ: ಏನ್ ರೇವಣ್ಣಾ ನಿನ್ನ ತಮ್ಮ ನೇಗಿಲು ಹಿಡಿದಿದ್ನಾ? ಕುಮಾರಸ್ವಾಮಿಗೆ ಕೃಷಿ ಮಾಡಿ ಅಭ್ಯಾಸ ಇದೆಯಾ? ಶೆಟ್ಟರ್ ಅಂತೂ ಬರಿ ವ್ಯಾಪಾರ ಮಾಡಿದ್ದಾರೆ. ಅವ್ರಿಗೆ ರೈತರ ಸಮಸ್ಯೆ ಗೊತ್ತಿಲ್ಲ ಬಿಡಿ. ಮಾಡಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ ಪರಿ ಇದು.

ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಮಾತನಾಡುತ್ತಾ, ನಾನು ಕಾನೂನು ವ್ಯಾಸಂಗ ಮುಗಿಸಿ ವಕೀಲಿ ವ್ಯಕ್ತಿ ಮುಗಿಸುವವರೆಗೂ ನಮ್ಮ ತಂದೆ ಕೃಷಿ ಮಾಡಿಸುತ್ತಿದ್ದರು. ನಾನೂ ನೇಗಿಲು ಹಿಡಿದವನೇ. ಹೀಗಾಗಿ ಅವರ ಕಷ್ಟ ಗೊತ್ತು. ಶೆಟ್ಟರೆ ನೀವು ನೇಗಿಲು ಹಿಡಿದಿಲ್ಲಾ ಅಂತ ಕಾಣ್ತದೆ. ದೇವೇಗೌಡರು ಕೃಷಿ ಮಾಡಿದ್ದಾರೆ. ಆದರೆ ನಮ್ ಕುಮಾರಸ್ವಾಮಿಗೆ ಅದೆಲ್ಲ ಅನುಭವ ಇಲ್ಲ ಎಂದರು.

ಆಗ ಮಧ್ಯಪ್ರವೇಶ ಮಾಡಿದ ಕುಮಾರಸ್ವಾಮಿ, ದೇವೇಗೌಡರು 1969ರಲ್ಲಿ ಶಾಸಕರಾಗಿ ಬೆಂಗಳೂರಿಗೆ ಬಂದರೂ ನಮ್ಮ ಕುಟುಂಬ ಹಾಸನದಲ್ಲೇ ಇತ್ತು. ಆಗ ಎಲ್ಲ ಮಾಡಿದ್ದೇವೆ ಎಂದರು. ಆದರೆ ಇದಕ್ಕೆ ಒಪ್ಪದ ಸಿದ್ದರಾಮಯ್ಯ, `ದೇವೇಗೌಡರು ಕೃಷಿಕರು. ನಾನು ನಿಮ್ಮನ್ನೆಲ್ಲ ನೋಡಿಲ್ವೇ? ಇನ್ನು ರೇವಣ್ಣ ಕೃಷಿ ಮಾಡಿರುವ ಸಾಧ್ಯತೆ ಇದೆ. ರೇವಣ್ಣ ನೀನೇ ಹೇಳು. ನಿನ್ ತಮ್ಮ ನೇಗಿಲು ಹಿಡಿದಿದ್ನಾ' ಎಂದು ಮತ್ತೆ ಕುಟುಕಿದರು. ನನ್ನ ಮಗನಿಗೆ ಕೃಷಿ ಗೊತ್ತಿಲ್ಲ ಎಂದರೆ ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನಾನು ಕೃಷಿ ಮಾಡಿಲ್ಲ ಎಂದರೆ ಒಪ್ಪಿಕೊಳ್ಳುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದಾಗ, ನೀವು ಕೃಷಿ ಮಾಡಿದ್ದರೆ ಸಂತೋಷ ಎಂದಾಗ ಸದನ ನಗೆಗಡಲಲ್ಲಿ ತೇಲಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.