ಸಿಬಿಐ ಇನ್ನೂ ಒಂದಂಕಿ ಲಾಟರಿ ತನಿಖೆ ಆರಂಭಿಸಿಲ್ಲ: ಜಾರ್ಜ್
ರಾಜ್ಯದ ಒಂದಂಕಿ ಲಾಟರಿ ಪ್ರಕರಣದ ಸಿಬಿಐ ತನಿಖೆ ಈವರೆಗೆ ಆರಂಭವಾಗಿಲ್ಲ. ಇನ್ನೂ ಅಚ್ಚರಿ ಎಂದರೆ ಸಿಬಿಐ ಈ ತನಿಖೆಯನ್ನು ತೆಗೆದುಕೊಳ್ಳುವ ಬಗ್ಗೆ ಒಪ್ಪಿಗೆಯನ್ನೇ ಸೂಚಿಸಿಲ್ಲ! ಈ ಮಾಹಿತಿಯನ್ನು ರಾಜ್ಯ ಸರ್ಕಾರವೇ ನೀಡಿದೆ...

ವಿಧಾನ ಪರಿಷತ್: ರಾಜ್ಯದ ಒಂದಂಕಿ ಲಾಟರಿ ಪ್ರಕರಣದ ಸಿಬಿಐ ತನಿಖೆ ಈವರೆಗೆ ಆರಂಭವಾಗಿಲ್ಲ. ಇನ್ನೂ ಅಚ್ಚರಿ ಎಂದರೆ ಸಿಬಿಐ ಈ ತನಿಖೆಯನ್ನು ತೆಗೆದುಕೊಳ್ಳುವ ಬಗ್ಗೆ ಒಪ್ಪಿಗೆಯನ್ನೇ ಸೂಚಿಸಿಲ್ಲ! ಈ ಮಾಹಿತಿಯನ್ನು ರಾಜ್ಯ ಸರ್ಕಾರವೇ ನೀಡಿದೆ.
ಸಿಐಡಿ ತನಿಖಾಧಿಕಾರಿಗಳು ಜೂ.29ರಂದು ನ್ಯಾಯಾಲಯಕ್ಕೆ ಮಧ್ಯಂತರ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದರೂ, ಈ ಮಧ್ಯೆಯೇ ಪ್ರತಿಪಕ್ಷಗಳು ಮತ್ತು ಸಾರ್ವಜನಿಕ ಸಂಘ ಸಂಸ್ಥೆಗಳ ಒತ್ತಾಸೆಯಂತೆ ಮತ್ತು ಪ್ರಕರಣದ ತೀವ್ರತೆ ಅರಿತ ಸರ್ಕಾರ ಜೂ.28ರಂದು ಸಿಬಿಐ ತನಿಖೆಗೆ ವಹಿಸಿತ್ತು. ರಾಜ್ಯಪತ್ರ ಬರೆದು ಒಂದು ತಿಂಗಳು ಸಮೀಪಿಸುತ್ತಿದ್ದರೂ, ಸಿಬಿಐ ರಾಜ್ಯದ ಕೋರಿಕೆಯನ್ನು ಒಪ್ಪಿ ತನಿಖೆ ಆರಂಭಿಸಿಲ್ಲ. ತನಿಖೆ ನಡೆಸುವುದಿಲ್ಲ ಎಂಬ ಸಂದೇಶವನ್ನೂ ನೀಡಿಲ್ಲ. ಈ ಸಂಗತಿ ಮೇಲ್ಮನೆಯಲ್ಲಿ ಪ್ರಸ್ತಾಪವಾಯಿತು. `ಸಿಐಬಿ ಈವರೆಗೆ ಪ್ರಕರಣವನ್ನು ಒಪ್ಪಿ ಕೇಸ್ ತೆಗೆದುಕೊಂಡಿಲ್ಲ' ಎಂದು ಗೃಹ ಸಚಿವ ಕೆ.ಜೆ. ಜಾರ್ಜ್, ಪ್ರಶ್ನೋತ್ತರ ವೇಳೆಯಲ್ಲಿ ಟಿ.ಎ. ಶರವಣ ಉತ್ತರಿಸಿದರು.
ಈ ಮುಂಚೆ ಮಾತನಾಡಿದ ಶರವಣ, ಸರ್ಕಾರ ನೀಡಿದ ಉತ್ತರದಲ್ಲಿ ಬೆಂಗಳೂರು ನಗರ, ಕೋಲಾರ, ರಾಮನಗರ, ಕೆಜಿಎಫ್ ನಲ್ಲಿ ಒಂದಂಕಿ ಲಾಟರಿ ಪ್ರಕರಣ ದಾಖಲಾಗಿದೆ ಎಂದಿದೆ. ವಾಸ್ತವವಾಗಿ ಕರ್ನಾಟಕದ ಗಡಿ ಪ್ರದೇಶದ ಜಿಲ್ಲೆಗಳಲ್ಲಿ ಇಂದಿಗೂ ಒಂದಂಕಿ ಲಾಟರಿ ರಾಜಾರೋಷವಾಗಿ ನಡೆಯುತ್ತಿದೆ. ಇದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸರು ಚಿನ್ನದ ನಾಣ್ಯ ಗಿಫ್ಟ್ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


