ಎಂಎಲ್‌ಸಿ ಟಿ.ಎ.ಶರವಣಗೆ ಡಿಮ್ಯಾಂಡ್ ಮಾಡಿದ್ದ ಅಶ್ವಿನ್ ರಾವ್
ಆಭರಣ ವ್ಯಾಪಾರಿಯಾಗಿರುವ ಮೇಲ್ಮನೆ ಸದಸ್ಯ ಟಿ.ಎ.ಶರವಣ ಅವರಿಗೆ ಲೋಕಾಯುಕ್ತ ನ್ಯಾಯಮೂರ್ತಿ ವೈ ಭಾಸ್ಕರ್‌ರಾವ್ ಅವರ ಮಗ...

ಬೆಂಗಳೂರು/ವಿಧಾನಪರಿಷತ್: ಆಭರಣ ವ್ಯಾಪಾರಿಯಾಗಿರುವ ಮೇಲ್ಮನೆ ಸದಸ್ಯ ಟಿ.ಎ.ಶರವಣ ಅವರಿಗೆ ಲೋಕಾಯುಕ್ತ ನ್ಯಾಯಮೂರ್ತಿ ವೈ ಭಾಸ್ಕರ್‌ರಾವ್ ಅವರ ಮಗ ಅಶ್ವಿನ್ ರಾವ್ ಅವರು 25 ಲಕ್ಷ ಮೌಲ್ಯದ ವಜ್ರದಾಭರಣಕ್ಕೆ ಡಿಮ್ಯಾಂಡ್ ಮಾಡಿಗ ಸಂಗತ ಸದನದಲ್ಲಿ ಪ್ರಸ್ತಾಪಗೊಂಡಿತು.
ಲೋಕಾಯುಕ್ತ ಮೇಲೆನಿ ಚರ್ಚೆ ವೇಳೆ ಮಾತನಾಡಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅವರು, ಕೆಲವು ತಿಂಗಳ ಹಿಂದೆ(ಏಪ್ರಿಲ್ 18) ಶರವಣ ಅವರು ಕರೆ ಮಾಡಿ ಲೋಕಾಯುಕ್ತರ ಕಚೇರಿಯಿಂದ ಕರೆ ಬಂದಿದೆ. ಕುಮಾರ ಕೃಪಾ ಗೆಸ್ಟ್ ಹೌಸ್‌ಗೆ ಬರುವಂತೆ ಹೇಳುತ್ತಿದ್ದಾರೆ ಏನು ಮಾಡಲಿ ಎಂದು ಕೇಳಿದರು. ನಾನು ಅನುಮಾನ ವ್ಯಕ್ತಪಡಿಸಿ ಅಲ್ಲಿಗೆ ಹೋಗುವಂತೆ ತಿಳಿಸಿದೆ.
ಶರವಣ ಅವರು ಅಲ್ಲಿಗೆ ಹೋದಾಗ ಲೋಕಾಯುಕ್ತರ ಮಗ 25 ಲಕ್ಷ ರುಪಾಯಿ ಮೌಲ್ಯದ ವಜ್ರದಾಭರಣ ಮಾಡಿಸಿಕೊಡುವಂತೆ ಕೋರಿಕೆ ಇಟ್ಟಿದ್ದಾರೆ. ಏಕೆ ಮಾಡಿಕೊಡಬೇಕೆಂದು ಕೇಳಿದ್ದಾರೆ. ನಂತರ ಕರೆ ಮಾಡಿದರೂ ಶರವಣ ಹೋಗಲಿಲ್ಲ ಎಂದರು. ಈ ಪ್ರಕರಣದ ವಿಷಯ ಕೇಳಿ ಇಡೀ ಸದನ ಹೌಹಾರಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


