ವಿರೇಶ್ ಸಮಿತಿ ಶಿಫಾರಸು ಜಾರಿಗೆ ತಂದಿಲ್ಲ: ಸಿದ್ದರಾಮಯ್ಯ
ರೈತರ ವಿರೋಧದ ಹಿನ್ನಲೆಯಲ್ಲಿ ವಿರೇಶ್ ಸಮಿತಿ ಶಿಫಾರಸು ಜಾರಿಗೆ ತಂದಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ...

ಮಂಡ್ಯ: ರೈತರ ವಿರೋಧದ ಹಿನ್ನಲೆಯಲ್ಲಿ ವಿರೇಶ್ ಸಮಿತಿ ಶಿಫಾರಸು ಜಾರಿಗೆ ತಂದಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಎಸ್ ಎಂ ಕೃಷ್ಣಾಗೆ ಟಾಂಗ್ ನೀಡಿದ್ದಾರೆ.
ನಿನ್ನೆ ಎಸ್ ಎಂ ಕೃಷ್ಣಾ ಸಾವನ್ನಪ್ಪಿದ್ದ ರೈತರ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ವೀರೇಶ್ ಸಮಿತಿ ಶಿಫಾರಸ್ಸು ತಂದಿದ್ದರೇ, ರೈತರ ಆತ್ಮಹತ್ಯೆ ತಡೆಯಬಹುದಾಗಿತ್ತು ಎಂದು ಹೇಳಿದ್ದರು.
ಆದರೆ, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ತಿರುಗೇಟು ನೀಡಿದ್ದು, ಇದಕ್ಕೆ ರೈತರ ವಿರೋಧ ವ್ಯಕ್ತಪಡಿಸಿದ್ದರಿಂದ ಸಮಿತಿ ಶಿಫಾರಸನ್ನು ಜಾರಿ ಮಾಡಿಲ್ಲ ಎಂಬ ವಿಷಯವನ್ನು ಕೃಷ್ಣ ಅವರು ಮರೆತಿರಬಹುದು ಎಂದು ಹೇಳಿದ್ದಾರೆ.
ಕೃಷ್ಣ ಅವರ ಅವಧಿಯಲ್ಲೇ ವಿರೇಶ್ ಎಂಬ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಕೆಲವು ಶಿಫಾರಸುಗಳನ್ನು ಮಾಡಿತ್ತು. ಆದರೆ, ಇದಕ್ಕೆ ಅಂದೇ ರೈತರಿಂದ ವಿರೋಧ ವ್ಯಕ್ತವಾಗಿತ್ತು. ಪ್ರತಿಭಟನೆ ಕೈಗೊಂಡಿದ್ದರು. ಈ ಹಿನ್ನಲೆಯಲ್ಲಿ ಅಂದಿನಿಂದಲೂ ಈ ಸಮಿತಿ ಶಿಫಾರಸು ಜಾರಿಯಾಗಿಲ್ಲ ಎಂದು ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ಇನ್ನೂ ರೈತರ ಆತ್ಮಹತ್ಯೆ ತಡೆಗಟ್ಟಲು ಸಾಂತ್ವಾನ ಯಾತ್ರೆ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ರೈತರ ಕುಟುಂಬಗಳಿಗೆ ಭೇಟಿ ನೀಡುತ್ತಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚಿನ್ನೇನಹಳ್ಳಿಗೆ ತೆರಳಿರುವ ಸಿದ್ದರಾಮಯ್ಯ ಮೃತ ರೈತ ರಾಜೇಂದ್ರ ನಿವಾಸಕ್ಕೆ ಭೇಟಿ ನೀಡಿ, ರೈತನ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಲ್ಲದೇ, 1 ಲಕ್ಷದ ಚೆಕ್ ನ್ನು ರಾಜೇಂದ್ರ ಕುಟಂಬದವರಿಗೆ ನೀಡಿದ್ದಾರೆ.
ಈ ಮೊದಲು ಸಿದ್ದರಾಮಯ್ಯನವರು ಮಂಡ್ಯ ಜಿಲ್ಲೆಯ ಹೊನ್ನನಾಯಕನಹಳ್ಳಿಗೆ ತೆರಳಿದ ಸಿದ್ದರಾಮಯ್ಯ ನವರು ಮೃತ ರೈತ ಶಿವಲಿಂಗೇಗೌಡ ಕುಟಂಬಸ್ಥರಿಗೆ ಸಾಂತ್ವನ ಹೇಳಿದ್ದು, ಅವರಿಗೂ ಕೂಡ ಪರಿಹಾರವಾಗಿ 1 ಲಕ್ಷದ ಚೆಕ್ ನ್ನು ನೀಡಿದ್ದಾರೆ. ಜೊತೆಗೆ ಶಿವಲಿಂಗೇಗೌಡ ಪತ್ನಿಗೆ ಡಿಸಿ ಕಚೇರಿಯಲ್ಲಿ ಕೆಲಸ, ಮಕ್ಕಳಿಗೆ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲೇ ಶಿಕ್ಷಣವನ್ನಾ ಒದಗಿಸುವ ಭರವಸೆಯನ್ನು ಮುಖಮಂತ್ರಿಗಳು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


