ದಲಿತರಲ್ಲ, ಅಸ್ಪೃಶ್ಯರಿಗೆ ಅಧಿಕಾರ ಕೊಡಿ
ನಾನೂ ದಲಿತನೇ' ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಯಾಗಿ ದಲಿತ ಸಂಘಟನೆ ಗಳು ತಮ್ಮ ಹೋರಾಟದ ...

ಬಳ್ಳಾರಿ: `ನಾನೂ ದಲಿತನೇ' ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಯಾಗಿ ದಲಿತ ಸಂಘಟನೆ ಗಳು ತಮ್ಮ ಹೋರಾಟದ ಘೋಷವಾಕ್ಯ ಬದಲಿಸಿ `ಅಸ್ಪೃಶ್ಯ ಮುಖ್ಯಮಂತ್ರಿ' ಪರ ಜನಾಂದೋಲನಕ್ಕೆ ಬಳ್ಳಾರಿಯಿಂದಲೇ ಚಾಲನೆ ನೀಡಿವೆ.ದಲಿತರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ತಾವು ಸಹ ದಲಿತನೇ ಎಂದು ಟಾಂಗ್ ನೀಡಿದ್ದರು. ಹೀಗಾಗಿ ಪಟ್ಟು ಬಿಡದ ಸಂಘಟನೆಗಳು`ಅಸ್ಪೃಶ್ಯ' ಎಂಬ ಪದ ಬಳಕೆಯ ಮೂಲಕ ಪ್ರತಿ ಸವಾಲು ಒಡ್ಡಲಾಗಿದೆ. ಮಾತ್ರವಲ್ಲ, ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ನಡೆಸಿದ್ದ ಪಾದ ಯಾತ್ರೆಯ ಮಹತ್ವ ಹೊಂದಿರುವ ಬಳ್ಳಾರಿಯಿಂದಲೇ ಈಗ ದಲಿತ ಸಂಘಟನೆಗಳೂ ಜನಾಂದೋಲನಕ್ಕೆ ಚಾಲನೆ ನೀಡಿರುವುದು ಕುತೂಹಲ ಮೂಡಿಸಿದೆ. ಆಯಾ ಜಿಲ್ಲಾ ಮಟ್ಟ ಗಳಲ್ಲೂ `ಅಸ್ಪೃಶ್ಯ ಮುಖ್ಯಮಂತ್ರಿ ಜನಾಂದೋಲನ ಕ್ರಿಯಾ ಸಮಿತಿ'ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಕಾಂಗ್ರೆಸ್ ತಮ್ಮನ್ನು ಕಾಪಾಡುತ್ತದೆ ಎಂದು ದಲಿತರು ನಂಬಿದ್ದರು. ದಲಿತರಿಗೆ ಕಾಂಗ್ರೆಸ್ ಪರ ಒಲವು ರಕ್ತಗತ ವಾಗಿದೆ ಎಂಬುದನ್ನು ಅರಿತು ಅಧಿಕಾರಕ್ಕಾಗಿ ಮುಗ್ದರನ್ನು ಬಳಸಿಕೊಂಡರು. ಈ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಅಂತ್ಯ ಹಾಡಬೇಕಿದೆ. ಮೋಸಗಾರ ಕಾಂಗ್ರೆಸ್‍ಗೆ ಬುದ್ಧಿ ಕಲಿಸಬೇಕು ಎಂಬ ಸಂದೇಶವನ್ನು ನಮ್ಮ ಕಾರ್ಯಕರ್ತರು ಮನೆ ಮನೆಗೆ ಮುಟ್ಟಿಸಲಿದ್ದಾರೆ. ಹೊಲೆಯ, ಮಾದಿಗರು ಒಂದಾದರೆ, 60-70 ಶಾಸಕರು ಗೆದ್ದು, ನಾವೇ ಸಿಎಂ ಆಗಬಹುದೆಂದು ಮುಖಂಡರು ಅಭಿಪ್ರಾಯಪಟ್ಟರು.
ಪರಮೇಶ್ವರ್ ಅವರೇ ಮುಖ್ಯಮಂತ್ರಿ ಆಗಬೇಕೆಂಬ ಹಠವಿಲ್ಲ. ಅಸ್ಪೃಶ್ಯ ಸಮುದಾಯದ ಖರ್ಗೆ, ಮಹಾದೇವ ಪ್ರಸಾದ್, ಶ್ರೀನಿವಾಸ್ ಪ್ರಸಾದ್, ಆಂಜನೇಯ ಪೈಕಿ
ಯಾರೇ ಸಿಎಂ ಆದರೂ ಸಂತೋಷ. ಶೇ.16ರಷ್ಟಿರುವ ಲಿಂಗಾಯತರು 23 ವರ್ಷ, ಶೇ.14ರಷ್ಟಿ ರುವ ಒಕ್ಕಲಿಗರು 18 ವರ್ಷ ರಾಜ್ಯ ಆಳಿದ್ದಾರೆ. ಬೆರಳೆಣಿಕೆಯ ಕ್ಷತ್ರಿಯರು 8 ವರ್ಷ ಇದ್ದರು. ಶೇ. 11ರಷ್ಟಿರುವ ಮುಸ್ಲಿಮರು , ಶೇ. 3ರಷ್ಟಿರುವ ಅಲ್ಪ ಸಂಖ್ಯಾತರು, ಶೇ. 18 ರಷ್ಟಿರುವ ಪರಿಶಿಷ್ಟರು ರಾಜ್ಯವನ್ನು ಆಳಿಲ್ಲ ಎಂದರೆ ದುರ್ದೈವ. ಅಸ್ಪೃಶ್ಯರನ್ನು ಸಿಎಂ ಮಾಡದಿದ್ದರೆ 10 ಸಾವಿರ ಜನರೊಂದಿಗೆ ದೆಹಲಿ ಚಲೋ ಹಮ್ಮಿಕೊಳ್ಳಲಾಗುತ್ತದೆಂದು ಎಚ್ಚರಿಸಿದರು.
ಮುಖಂಡರಾದ ಎನ್. ಮೂರ್ತಿ, ಕೆ. ಶಿವರಾಂ, ಹನುಮಂತ, ಸಿದ್ದರಾಜು, ಆನಕಲ್ ಬಸವರಾಜ್,ಜಗನ್ನಾಥ್, ಪಂಪಾಪತಿ, ಪಿ. ಮೂರ್ತಿ, ಮೂರ್ತಿ
ಲಕ್ಕಣ್ಣನವರ್ ಪಾಲ್ಗೊಂಡಿದ್ದರು.
ಇಳಿಯದಿದ್ದರೆ ಇಳಿಸುತ್ತೇವೆ
ಹುಲಿಯಂತಿದ್ದ ಸಚಿವ ಶ್ರೀನಿವಾಸ ಪ್ರಸಾದ್, ಸಿದ್ದರಾಮಯ್ಯ ಮುಂದೆ ಇಲಿಯಾಗಿದ್ದಾರೆ. ಸಿದ್ದರಾಮಯ್ಯ ಅವರದ್ದು ಕಾಂಗ್ರೆಸ್ ರಕ್ತವಲ್ಲ. ಖರ್ಗೆ, ಪರಮ್ ಮೂಲ ಕಾಂಗ್ರೆಸಿಗರು. ಸಿದ್ದ ರಾಮಯ್ಯ ಇಳಿಯದಿದ್ದರೆ ಇಳಿಸಬೇಕಾಗುತ್ತದೆ.
- ಬಸವರಾಜ ಹಾನಗಲ್, ದಲಿತ ಮುಖಂಡ
ಸದಸ್ಯತ್ವ ಪಡೆಯಲಿ
ದಲಿತ ಮುಖ್ಯ ಮಂತ್ರಿಗಾಗಿ ವಾದ ಮಾಡು ವವರು ಮತ್ತು ಪರಮೇಶ್ವರ್ ಬಗ್ಗೆ ಪ್ರೀತಿ ಇರುವವರು ಮೊದಲುಕಾಂಗ್ರೆಸ್‍ನ ಪ್ರಾಥಮಿಕ ಸದಸ್ಯತ್ವ ಪಡೆಯಲಿ
-ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ
ಪರಂಗೆ ಗೊತ್ತೇ ಇಲ್ಲ !
ದಲಿತ ಮುಖ್ಯಮಂತ್ರಿ ಪರ ರಾಜ್ಯದಲ್ಲಿನಡೆಯು ತ್ತಿರುವ ಆಂದೋಲನದ ಬಗ್ಗೆ ನನಗೆ ಗೊತ್ತಿಲ್ಲ. ಕಾಂಗ್ರೆಸ್‍ನವರು ಯಾರು ಅದನ್ನು ಮಾಡಿಲ್ಲ. ನನ್ನ ಮೇಲೆ ಇರುವ ಅಭಿಮಾನದಿಂದ ಹೊರಗಿನವರು ಆ ರೀತಿ ಮಾಡಿರಬಹುದು
ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ (ದೆಹಲಿಯಲ್ಲಿ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


