ಕೆಂಪಣ್ಣ ಆಯೋಗಕ್ಕೆ ಕೊನೆಗೂ ಕಡತ ಸಲ್ಲಿಕೆ
ಅರ್ಕಾವತಿ ಡಿನೋಟಿಫಿ ಕೇಷನ್ ಪ್ರಕರಣದ ತನಿಖೆಗೆ ನೇಮಿಸಲಾಗಿರುವ ನ್ಯಾ. ಕೆಂಪಣ್ಣ ಆಯೋಗಕ್ಕೆ ಕೊನೆಗೂ ರಾಜ್ಯ ...

ಬೆಂಗಳೂರು: ಅರ್ಕಾವತಿ ಡಿನೋಟಿಫಿ ಕೇಷನ್ ಪ್ರಕರಣದ ತನಿಖೆಗೆ ನೇಮಿಸಲಾಗಿರುವ ನ್ಯಾ. ಕೆಂಪಣ್ಣ ಆಯೋಗಕ್ಕೆ ಕೊನೆಗೂ ರಾಜ್ಯ ಸರ್ಕಾರ ಕಡತವನ್ನು ಸಲ್ಲಿಸಿದೆ. ಆಯೋಗದ ಅವಧಿ ಮುಕ್ತಾಯ ಗೊಳ್ಳುತ್ತಾ ಬಂದಿದ್ದರೂ ಬಿಡಿಎ ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ ಯಾವುದೇ ಕಡತ ಸಲ್ಲಿಕೆಯಾಗಿರಲಿಲ್ಲ. ಹೀಗಾಗಿ ನೆಪ ಮಾತ್ರಕ್ಕೆ ತನಿಖೆ ನಡೆಸುವ ಪ್ರಯತ್ನ ನಡೆ ಯುತ್ತಿದೆ ಎಂಬ ಆರೋಪ ವ್ಯಕ್ತವಾಗಿತ್ತು. ಜತೆಗೆ ಅವಧಿ ವಿಸ್ತರಿಸುವಂತೆ ಆಯೋ ಗ ಪತ್ರ
ಬರೆದಿತ್ತು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ತಮ್ಮ ದೆಹಲಿ ಭೇಟಿ ಸಂದರ್ಭದಲ್ಲಿ ಮಾಧ್ಯಮದ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸೋಮವಾರ ಆಯೋಗಕ್ಕೆ ಕಡತ ಸಲ್ಲಿಕೆ ಮಾಡಲಾಗುವುದು ಎಂದು ಕಳೆದ ಶನಿವಾರ ಹೇಳಿಕೆ ನೀಡಿದ್ದರು. ಆದರೆ ಕಡತ ಬಿಡಿಎ ಕಚೇರಿಯಿಂದ ರವಾನೆಯಾಗಿರಲಿಲ್ಲ. ಆದರೆ ಗುರುವಾರ ಮಧ್ಯಾಹ್ನ 12 ಗಂಟೆಗೆ ಡಿವೈಎಸ್ಪಿ ಯೋಗಣ್ಣ ನೇತೃತ್ವದಲ್ಲಿ ಸುಮಾರು 23 ಟ್ರಂಕ್ಗಳಲ್ಲಿ 1.30 ಲಕ್ಷ ಕಡತಗಳನ್ನು ಬಿಗಿ ಭದ್ರತೆಯೊಂದಿಗೆ ಆಯೋಗದ ಕಚೇರಿಗೆ ಕಳುಹಿಸಿಕೊಡಲಾಗಿದೆ. 2004ರಿಂದ 2014ರವರೆಗೆ ಅರ್ಕಾವತಿ ಬಡಾವಣೆ ಸಂಬಂಧ ನಡೆಸಿದ ನೋಟಿಫಿಕೇಷನ್, ಡಿನೋಟಿಫಿಕೇಷನ್ ಸೇರಿದಂತೆ ಹಲವು ಮಹತ್ವದ ಅಂಶಗಳು ಈ ಟ್ರಂಕ್ಗಳಲ್ಲಿ ಅಡಕವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


