ಇನ್ನು ರಾಜಕಾರಣಕ್ಕೆ ಬರಲ್ಲ: ಕಾಗೋಡು
ನಾನು ಇನ್ನು ರಾಜಕಾರಣಕ್ಕೆ ಬರುವುದಿಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ...

ವಿಧಾನಸಭೆ: ನಾನು ಇನ್ನು ರಾಜಕಾರಣಕ್ಕೆ ಬರುವುದಿಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ದೆಹಲಿ ಚುನಾವಣೆ ಫಲಿತಾಂಶದಿಂದ ಎಲ್ಲರೂ ಬೇಸರದಲ್ಲಿ ಇದ್ದಾರೆ. ನಿಮಗೆ ಯಾವುದೇ ಹಂಗಿಲ್ಲ. ಏಕೆಂದರೆ ನೀವೀಗ ಯಾವ ಪಕ್ಷದ ಸದಸ್ಯರೂ ಅಲ್ಲ. ಮುಂದೆ ಬರುವ ಸಾಧ್ಯತೆ ಇದೆಯೇಎಂದು ರಮೇಶ್‍ಕುಮಾರ್ ಕಾಲೆಳೆದಾಗ ಸ್ಪೀಕರ್ ಈ ಉತ್ತರ ನೀಡಿದರು.
ನಾನು ಇನ್ನು ಮುಂದೆ ರಾಜಕಾರಣಕ್ಕೆ ಬರುವುದಿಲ್ಲ. ಈ ಸಲವೂ ಬರಬಾರದು ಎಂದುಕೊಂಡಿದ್ದೆ. ಆದರೆ, ಅರಣ್ಯಭೂಮಿ ಸಮಸ್ಯೆ ಬಗೆಹರಿಸಬೇಕೆಂಬ ಕಾರಣಕ್ಕೆ ಬಂದೆ. ಮಾರ್ಚ್ ಅಂತ್ಯದ ವೇಳೆಗೆ ಸಮಸ್ಯೆ ಬಗೆಹರಿಸಿ ಹಕ್ಕುಪತ್ರ ನೀಡಬೇಕೆಂದುಕೊಂಡಿದ್ದೆ. ಇದಕ್ಕಾಗಿ ತಿರುಗಿ ತಿರುಗಿ ನನ್ನ ಹೆಣ ಬಿದ್ದಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


