ಸಿವಿಲ್ ಜಡ್ಜ್‌ಗಳ ನೇರ ನೇಮಕ: ಟಿ.ಬಿ ಜಯಚಂದ್ರ
ರಾಜ್ಯದ ಅಧೀನ ನ್ಯಾಯಾಲಯಗಳಲ್ಲಿ ವೃಂದದ 6, 849 ಹುದ್ದೆಗಳು ಖಾಲಿ ಇವೆ ಹಾಗೂ 254 ನ್ಯಾಯಾಂಗ ಸೇವಾ ಅಧಿಕಾರಿಗಳ ಹುದ್ದೆಗಳೂ...

ವಿಧಾನಸಭೆ: ರಾಜ್ಯದ ಅಧೀನ ನ್ಯಾಯಾಲಯಗಳಲ್ಲಿ ವೃಂದದ 6, 849 ಹುದ್ದೆಗಳು ಖಾಲಿ ಇವೆ ಹಾಗೂ 254 ನ್ಯಾಯಾಂಗ ಸೇವಾ ಅಧಿಕಾರಿಗಳ ಹುದ್ದೆಗಳೂ ಖಾಲಿ ಇವೆ. 172 ಸಿವಿಲ್ ಜಡ್ಜ್‌ಗಳ ನೇರ ನೇಮಕಕ್ಕೆ ಸದ್ಯದಲ್ಲಿಯೇ ಚಾಲನೆ ದೊರೆಯಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ ಅವರು ತಿಳಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸಿ.ಟಿ.ರವಿ ಅವರಿಗೆ ಉತ್ತರನ ನೀಡಿದ ಸಚಿವರು, ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕದಲ್ಲಿ ಮೀಸಲು ಆದೇಶ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಕಾನೂನು ಬದಲಾವಣೆ ಅಗತ್ಯ. ಅಂತಿಮ ತಿದ್ದುಪಡಿ ಮಾಡಿದ ಬಳಿಕ ವಿಳಂಬಲ್ಲದೆ ನೇಮಕ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.
ಹಲವು ಹುದ್ದೆಗಳನ್ನು ಬಡ್ತಿ ಹಾಗೂ ಸೇವಾ ಹಿರಿತನದ ಮುಖಾಂತರ ಭರ್ತಿ ಮಾಡಲಾಗುವುದು. ತ್ವರಿತ ನ್ಯಾಯಾಲಯದ ನ್ಯಾಯಾಧೀಶರ ಕಾಲಾವಧಿ ಇದೇ ಮಾರ್ಚ್ 31ಕ್ಕೆ ಪೂರ್ಣಗೊಳ್ಳಲಿದೆ. ಈ ಹುದ್ದೆಗಳೂ ಕೂಡಾ ನ್ಯಾಯಾಂಗ ಸೇವೆಗೆ ಲಭ್ಯವಾಗಲಿದೆ. ರಾಜ್ಯ ಹಣಕಾಸು ಇಲಾಖೆ 850 ನ್ಯಾಯಾಂಗ ಅಧಿಕಾರಿಗಳ ನೇಮಕ್ಕೆ ಸಮ್ಮತಿಸಿದ್ದು, ಇದರ ಪ್ರಕ್ರಿಯೆಯೂ ಶೀಘ್ರವೇ ಆರಂಭವಾಗಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


