ನಕ್ಸಲ್ ಭಾಗ್ಯ ಸರ್ಕಾರದ ಹೊಸ ಯೋಜನೆಯೇ?
ಭಾಗ್ಯ'ಗಳ ಸರಣಿ ಯೋಜನೆಯಲ್ಲಿ ಸರ್ಕಾರ `ನಕ್ಸಲ್ ಭಾಗ್ಯ'ವನ್ನೂ ಆರಂಭಿ ಸಿ ದೆಯೇ ? ಪ್ಯಾಕೇಜ್ ಪಡೆಯುವುದಕ್ಕಾಗಿಯೇ...

ವಿಧಾನಸಭೆ: `ಭಾಗ್ಯ'ಗಳ ಸರಣಿ ಯೋಜನೆಯಲ್ಲಿ ಸರ್ಕಾರ `ನಕ್ಸಲ್ ಭಾಗ್ಯ'ವನ್ನೂ ಆರಂಭಿ ಸಿ ದೆಯೇ ? ಪ್ಯಾಕೇಜ್ ಪಡೆಯುವುದಕ್ಕಾಗಿಯೇ ನಕ್ಸಲ್ ಆಗಿ, ನಂತರ ವಾಪಸ್ ಬಂದರೆ ಲಕ್ಷಾಂತರ ನೀಡಲಾಗುತ್ತದೆಯೇ? ಪ್ರತಿಪಕ್ಷಗಳ ಈ ಪ್ರಶ್ನೆಗೆ ಸರ್ಕಾರ ಸೂಕ್ತ ಉತ್ತರ ನೀಡಲಿಲ್ಲ. ಅದಕ್ಕೇ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಸಲಹೆಯಂತೆ ಗೃಹ ಸಚಿವ ಕೆ.ಜೆ. ಜಾರ್ಜ್ ನೇತೃತ್ವದಲ್ಲಿ ನಕ್ಸಲ್ ಪೀಡಿತ ಪ್ರದೇಶಗಳ ಶಾಸಕರೊಂದಿಗೆ ವಿಶೇಷ ಸಭೆ ನಡೆಸಲು ನಿರ್ಧರಿ ಸಲಾಗಿದೆ. ಈ ಸಭೆ ಮೂಲಕವೇ ಯಾರಿಗೆ? ಎಷ್ಟು? ಎಲ್ಲಿಯವರೆಗೆ ಪ್ಯಾಕೇಜ್ ನೀಡಬೇಕು? ಅದನ್ನು ನಿರ್ಧರಿಸುವವರು ಯಾರು ಎಂಬುದರ ಸವಿವರ ಕ್ರಮಗಳೂ ತೀರ್ಮಾನವಾಗಲಿವೆ. ಇದಾಗಬೇಕು ಎಂದು ಸ್ಪೀಕರ್ ಅವರೇ ಗೃಹ ಸಚಿವರಿಗೆ ವಿಧಾನಸಭೆಯಲ್ಲಿ ತಾಕೀತು ಮಾಡಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಸುನೀಲ್ ಕುಮಾರ್ ನಕ್ಸಲರ ಶರಣಾಗತಿಗೆ ಸರ್ಕಾರ ವಿಶೇಷ ಪ್ಯಾಕೇಜ್ ನೀಡುತ್ತಿದೆ. ಅವರು ಶರಣಾದರೆ ರು.3 ಲಕ್ಷ ನೀಡುತ್ತದೆ. ಅಲ್ಲದೆ ಮಾಸಿಕವಾಗಿ ರು. 5 ಸಾವಿರ ನೀಡುತ್ತದೆ,. ನಕ್ಸಲ್ ಪೀಡಿತ ಪ್ರದೇಶದಲ್ಲಿ ಅಲ್ಲಿನ ಸ್ಥಳೀಯ ಯುವಕರಿಗೆ ಉದ್ಯೋಗ, ಆರೋಗ್ಯದಂತಹ ಸೌಲಭ್ಯ ನೀಡದೆ, ಸ್ಥಳೀಯ ಸಮಸ್ಯೆ ಬಗೆಹರಿಸಲು ಮುಂದಾಗದ ಸರ್ಕಾರ ನಕ್ಸಲರಿಗೆ ಅನುಕೂಲ ಕಲ್ಪಿಸುತ್ತಿದೆ. ಎಲ್ಲ ಭಾಗ್ಯಗಳಂತೆ ನಕ್ಸಲ್ ಭಾಗ್ಯವನ್ನೂ ಸರ್ಕಾರ ಆರಂಭಿಸಿದೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಕೆ.ಜೆ. ಜಾರ್ಜ್, ನಕ್ಸಲರ ಶರಣಾಗತಿ 2010ರಿಂದಲೂ ಇದೆ. ನಾವು ಹಣ ಹಾಗೂ ಕೆಲವು ಸವಲತ್ತುಗಳನ್ನು ಹೆಚ್ಚಿಸಿದ್ದೇವೆ. ಶರಣಾದವರಿಗೆ ರು. 2.5 ಲಕ್ಷ ಅನುದಾನ, ರು,2.5 ಲಕ್ಷ ಸಾಲ ನೀಡುತ್ತೇವೆ. ಶರಣಾ ದವರಿಗೆಲ್ಲರಿಗೂ ಸೌಲಭ್ಯ ನೀಡಲಾಗುವುದಿಲ್ಲ. ಅದಕ್ಕೆ ಸಮಿತಿ ರಚಿಸಲಾಗಿದೆ. ಜಿಲ್ಲಾಧಿಕಾರಿಗಳ ಸಮಿತಿ ಆದಮೇಲೆ, ರಾಜ್ಯಮಟ್ಟದ ಸಮಿತಿಯಲ್ಲಿ ಇವೆಲ್ಲವನ್ನೂ ತೀರ್ಮಾ ಸಲಾಗುತ್ತದೆ ಎಂದರು.
ಸ್ಥಳೀಯ ಶಾಸಕರನ್ನು ಕೇಳಿ : ಇದಕ್ಕೆ ಸಹಮತ ವ್ಯಕ್ತ ಪಡಿಸದ ಸುನೀಲ್ ಕುಮಾರ್ ನನ್ನ ಮೂಲ ಪ್ರಶ್ನೆಗೇ ಉತ್ತರ ಬಂದಿಲ್ಲ. ನಕ್ಸಲರಿಗೆ ಎಷ್ಟು ದಿನ ಶರಣಾಗತಿ ಪ್ಯಾಕೇಜ್ ಮುಂದುವರಿಸುತ್ತೀರಾ? ಇಷ್ಟೊಂದು ಹಣ ನೀಡಿದರೆ ನಕ್ಸಲ್ ಚಟುವಟಿಕೆಗೆ ಹೋಗಿ ಬಂದರೆ ಲಕ್ಷಾಂತರ ಹಣ ಬರುತ್ತದೆ ಎಂಬ ಭಾವನೆ ಮೂಡುವುದಿಲ್ಲವೇ? ಎಷ್ಟು ಜನ ನಕ್ಸಲರಿದ್ದಾರೆ ಎಂಬ ಬಗ್ಗೆ ನಿಮಗೆ ಮಾಹಿತಿ ಇದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಆರ್. ಅಶೋಕ ದನಿಗೂಡಿಸಿ ನಕ್ಸಲರಿಗೆ ಸೌಲಭ್ಯ ನೀಡುತ್ತಿರುವುದು ಹೆಚ್ಚಾಯಿತು ಎಂದರು. ಜೀವರಾಜ್ ಮಾತನಾಡಿ, ಹೆಚ್ಚುತ್ತವೆ. ಸ್ಥಳೀಯ ಶಾಸಕರನ್ನು ಕೇಳದೆಯೇ ಅಲ್ಲಿನ ಸಮಸ್ಯೆ ನಿವಾರಿಸಲು ಮುಂದಾಗಿರುವುದು ಸರಿಯಲ್ಲ ಎಂದರು . ಆಗ ಮಧ್ಯ ಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಇಲ್ಲಿ ಶರಣಾಗತಿ ಎಂಬುದಷ್ಟೇ ಅಲ್ಲ. ವಿಶೇಷ ಪ್ಯಾಕೇಜ್ ಯಾರಿಗೆ ನೀಡಬೇಕೆಂಬುದೂ ಸ್ಪಷ್ಟವಾಗಬೇಕು. ಸ್ಥಳೀಯ ಸಮಸ್ಯೆಗಳನ್ನು ನಿವಾ ರಿಸಿದರೆ ಎಲ್ಲವೂ ಸರಿಹೋಗುತ್ತದೆ ಎಂದು ಗೃಹ ಸಚಿವರಿಗೆ ತಾಕೀತು ಮಾಡಿದರು. ಇದಕ್ಕೆ ಎಲ್ಲರೂ ಸಮ್ಮತಿಸಿದರು.
ಅರಣ್ಯಾಧಿಕಾರಿಗಳು ಚಕ್ರಾಧಿಪತಿಗಳೇ?
ಅರಣ್ಯಾಧಿಕಾರಿಗಳು ರಾಜರೇ, ಚಕ್ರಾ„ಪತಿಗಳೇ? ಅವರೇನು ಸರ್ಕಾರದ ಅಧೀನ
ದಲ್ಲಿಲ್ಲವೇನು? ಹೀಗೆಂದು ಪ್ರಶ್ನಿಸಿ, ಗುಡುಗಿದವರು ಸ್ಪೀಕರ್ ಕಾಗೋಡು ತಿಮ್ಮಪ್ಪ. ಅರಣ್ಯಾಧಿ ಕಾರಿಗಳು ಕನಿಷ್ಠ ಸೌಲಭ್ಯ ಒದಗಿಸಲೂ ಅನುಮತಿ ನೀಡುವುದಿಲ್ಲ ಎಂಬ ಶಾಸಕರ ದೂರಿಗೆ ಪ್ರತಿಕ್ರಿಯಿಸಿ, ಅವರೂ ಸರ್ಕಾರದ ಅಧೀನದಲ್ಲಿದ್ದಾರೆ. ಅವರು ಸರ್ಕಾರ ಹೇಳಿದಂತೆ ಮಾಡಬೇಕು. ನಾವೆಲ್ಲ ಈ ಸಂಬಂಧವಾಗಿ ಒಂದು ಕಾನೂನು ರಚಿಸೋಣವೆಂದರು. ಶಿವಮೊಗ್ಗದಲ್ಲಿ ಒಂದು ಮಾವಿನ ಮರ ತೆಗೆಯಲು ತಿಂಗಳುಗಟ್ಟಲೆ ಅಲೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಇದರಿಂದ ಸ್ಥಗಿತವಾಗಿದೆ. ನ್ಯಾಯಾಲಯದ ಆದೇಶಗಳನ್ನು ತೋರುತ್ತಾರೆ. ಆದರೆ, ಸ್ಥಳೀಯ ಸಮಸ್ಯೆಗಳು ಇವರಿಗೆ ಗೊತ್ತಿಲ್ಲ. ಇವರಿಗೆ ಮಾತ್ರ ಎಲ್ಲ ಸೌಲಭ್ಯ ಇರಬೇಕಾ ಎಂದು ಸ್ಪೀಕರ್ ಕಿಡಿಕಾರಿದರು.
ನಕ್ಸಲರು ಸಮಾಜಮುಖಿಯತ್ತ ಎನ್ನುತ್ತಿದ್ದೀರಾ? ಅದೇನು ಉತ್ತರಕ್ಕೋ ಪೂರ್ವಕ್ಕೋ? ಯಾವ ಕಡೆ? ನಕ್ಸಲ್ ಅನ್ನೋದು ಹುಟ್ಟಿಕೊಂಡಿರುವುದು ಅಲ್ಲಿನ ಸಮಸ್ಯೆಗಳಿಂದ. ಅಲ್ಲಿ ಬೇಕಿರುವುದು ಅಭಿವೃದ್ಧಿ ಹಾಗೂ ಸೌಲಭ್ಯ. ಅವರಿಗೆ ಮನೆ ಕೊಡಿ, ಹಕ್ಕುಪತ್ರ ಕೊಟ್ಟು, ಸಾಗುವಳಿಗೆ ಭೂಮಿ ಕೊಡಿ. ಆಗ ಎಲ್ಲ ಸರಿ ಹೋಗುತ್ತದೆ. ಅ„ಕಾರಿಗಳು ಮನಸ್ಸು ಮಾಡಿದರೆ ಮೂರು ತಿಂಗಳಲ್ಲಿ ಈ ಕೆಲಸವಾಗುತ್ತದೆ.
- ಕಾಗೋಡು ತಿಮ್ಮಪ್ಪ, ಸ್ಪೀಕರ್
ಅಧಿಕಾರಿಗಳಿಗೆ ಕಾಡಿನಲ್ಲಿಯೇ ಮನೆ ಬೇಕು. ಕುಡಿಯಲು ನೀರಿನ ಸಂಪರ್ಕ ಬೇಕು. ಕರೆಂಟೂ ಬೇಕು. ವಸತಿ ಗೃಹ ಸೇರಿದಂತೆ ಎಲ್ಲವೂ ಅವರಿಗೆ ಕಾಡಿನಲ್ಲೇ ಆಗಬೇಕು. ಅದೆಲ್ಲ ಮಾಡಿದರೆ ಹುಲಿಗೆ ಏನೂ ತೊಂದರೆ ಆಗುವುದಿಲ್ಲ. ಆದರೆ ಗಿರಿಜನರಿಗೆ ಅನುಕೂಲ ಕಲ್ಪಿಸಿದರೆ ಮಾತ್ರ ಹುಲಿಗೆ ತೊಂದರೆ ಆಗುತ್ತದೆ. ಅರಣ್ಯ ಅಧಿಕಾರಿಗಳು ಅವರದ್ದೇ ಕಾನೂನು ಹೇಳಿ ಎಲ್ಲವಕ್ಕೂ ಅಡ್ಡಿಯಾಗಿದ್ದಾರೆ.
- ಕೆ.ಜೆ. ಜಾರ್ಜ್, ಗೃಹ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


