ರಾಜಕೀಯ

ಆಫ್ರಿಕಾದಲ್ಲಿ ಕನ್ನಡಿಗರಿಗೆ ಕೃಷಿ ಮಾಡುವ ಯೋಗ!

ಸರಣಿ ಆತ್ಮಹತ್ಯೆ ನಿಯಂತ್ರಣಕ್ಕೆ ಪರಿಹಾರ ಕಂಡುಕೊಳ್ಳಲು ಹೆಣಗುತ್ತಿರುವ ರಾಜ್ಯ ಸರ್ಕಾರಕ್ಕೆ ಆಫ್ರಿಕಾ ದೇಶಗಳಲ್ಲಿ ಭರವಸೆ ಗೋಚರಿಸಿದೆ.

ಆಫ್ರಿಕಾದಲ್ಲಿ ಕನ್ನಡಿಗರಿಗೆ ಕೃಷಿ ಮಾಡುವ ಯೋಗ!
ಕೃಷಿ(ಸಂಗ್ರಹ ಚಿತ್ರ)
Published On :

ಬೆಳಗಾವಿ: ರೈತರ ಸರಣಿ ಆತ್ಮಹತ್ಯೆ ನಿಯಂತ್ರಣಕ್ಕೆ ಪರಿಹಾರ ಕಂಡುಕೊಳ್ಳಲು ಹೆಣಗುತ್ತಿರುವ ರಾಜ್ಯ ಸರ್ಕಾರಕ್ಕೆ ಆಫ್ರಿಕಾ ದೇಶದಲ್ಲಿ ಭರವಸೆ ಗೋಚರಿಸಿದೆ. ಅಲ್ಲಿಗೆ ಹೋಗಿ ಬೇಸಾಯ ಮಾಡುವ ಆಸಕ್ತಿ ಇರುವ ಕೃಷಿಕರಿಗೆ ಸರ್ಕಾರ  ಎಲ್ಲ ರೀತಿಯ ನೆರವು ನೀಡಲಿದೆ.

ಆಫ್ರಿಕಾದ ಕೆಲ ರಾಷ್ಟ್ರಗಳಲ್ಲಿ ಮಂಡ್ಯ ರೈತರು ಕೃಷಿ ನಡೆಸುತ್ತಿರುವುದನ್ನು ಸಣ್ಣ ಕೈಗಾರಿಕೆ ಸಚಿವ ಸತೀಶ ಜಾರಕಿಹೊಳಿ ಖುದ್ದು ನೋಡಿ ಬಂದಿದ್ದಾರೆ. ತಮ್ಮ ಅನುಭವವನ್ನು ಪತ್ರಕರ್ತರೊಂದಿಗೆ ಹಂಚಿಕೊಂಡ ಅವರು, ಆಫ್ರಿಕಾ ದೇಶದಲ್ಲಿ ಕೃಷಿ ಚಟುವಟಿಕೆ ನಡೆಸಲು ಮುಂದೆ ಬರುವ ಕರ್ನಾಟಕದ ಪ್ರಗತಿ ಪರ ರೈತರಿಗೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ನೀಡಲಾಗುವುದು ಎಂದು ಪ್ರಕಟಿಸಿದರು.

ಆಫ್ರಿಕಾದಲ್ಲಿ ಹೊರ ದೇಶದ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ನೀಡುತ್ತಾರೆ. ಕನ್ನಡಿಗರೂ ಸೇರಿದಂತೆ ಭಾರತದ ಅನೇಕರು ಅಲ್ಲಿ ಬೇಸಾಯ ಮಾಡುತ್ತಿದ್ದಾರೆ. ಮಂಡ್ಯ ಜಿಲ್ಲೆಯ ರೈತರು 1,400 ಎಕರೆಯಲ್ಲಿ ಕೃಷಿ ಕೈಗೊಂಡಿದ್ದಾರೆಂದರು.

ಅಲ್ಲಿನ ಜಮೀನು ಫಲವತ್ತತೆಯಿಂದ ಕೂಡಿದೆ. ಆಫ್ರಿಕಾ, ವರಾಂಡಾ, ಇಥಿಯೋಪಿಯಾ ಮತ್ತು ಕೀನ್ಯಾದಲ್ಲಿ ಕೃಷಿ ಚಟುವಟಿಕೆ ನಡುಸುವವರಿಗೆ ಲಕ್ಷ ಎಕರೆವರೆಗೂ ಜಮೀನು ನೀಡಲಾಗುತ್ತಿದೆ. ಅಲ್ಲಿನ ಸರ್ಕಾರ, ಕೃಷಿ ಮಾಡುತ್ತಿರುವ ಭಾರತೀಯರು ಹಾಗೂ ಕರ್ನಾಟಕದ ರೈತರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದೇನೆ. ಅಲ್ಲಿನ ಸರ್ಕಾರ ಕರ್ನಾಟಕದ ಆಸಕ್ತ ರೈತರಿಗೂ ಜಮೀನು ನೀಡಲು ಮುಂದೆ ಬಂದಿದೆ ಎಂದು ವಿವರಿಸಿದರು. ನಮ್ಮ ಇಲಾಖೆ ವತಿಯಿಂದ ರೈತರು ವಿದೇಶ ಪ್ರವಾಸ ಕೈಗೊಳ್ಳಲು ಅವಕಾಶವಿದೆ. ಪ್ರತಿ ಜಿಲ್ಲೆಯಿಂದ ತಲಾ ಒಬ್ಬ ರೈತರು ಮುಂದೆ ಬಂದರೂ ಆ ದೇಶದ ಪ್ರವಾಸಕ್ಕೆ ಅವಕಾಶ ಮಾಡಿ ಕೊಡಲಾಗುವುದು. ಅಲ್ಲಿ ಕೂಡ ಬತ್ತ, ಕಾಫಿ, ಟೀ ಹಾಗೂ ಗೋದಿ, ಹಣ್ಣುಗಳನ್ನು ಬೆಳೆಯಲಾಗುತ್ತದೆ. ಇಳುವರಿಯೂ ಚೆನ್ನಾಗಿದೆ ಎಂದು ಜಾರಕಿಹೊಳಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.