ಈ ತಿಂಗಳ 2ನೇ ವಾರದಲ್ಲಿ ಸಿದ್ದು ಸಂಪುಟ ವಿಸ್ತರಣೆ: 6 ಸಚಿವರಿಗೆ ಕೊಕ್?

ಬೆಂಗಳೂರು: ಬಜೆಟ್ ಅಧಿವೇಶನ ಮುಕ್ತಾಯವಾಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಮುಖಂಡರು ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಮುಳುಗಿದ್ದಾರೆ. ಆಡಳಿತರೂಢ ಕಾಂಗ್ರೆಸ್‌ಗೆ ಸಂಪುಟ ಪುನಾರಚನೆ ಬಿಸಿ ತಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಪ್ರಿಲ್‌ನಲ್ಲೇ ಸಂಪುಟ ವಿಸ್ತರಣೆ ಮಾಡುವ ಹುಮ್ಮಸ್ಸಿನಲ್ಲಿದ್ದು, ಆ ಮೂಲಕ ಆಂತರಿಕ ಬೇಗುದಿಗೆ ಕಡಿವಾಣ ಹಾಕುವುದು ರಾಜಕೀಯ ಲೆಕ್ಕಾಚಾರ.
ಈ ಸಂಬಂಧ ಕಾಂಗ್ರೆಸ್‌ನಲ್ಲಿ ಜಾತಿ ಮತ್ತು ಪ್ರಾದೇಶಿಕ ಲೆಕ್ಕಾಚಾರಗಳು ಬಲಗೊಳ್ಳುತ್ತಿದ್ದು, ಹೈಕಮಾಂಡ್ ಒಪ್ಪಿದರೆ ಏಪ್ರಿಲ್ 3ನೇ ವಾರದ ನಂತರ ಸಂಪುಟ ಪುನಾರಚನೆ ಭಾಗ್ಯ. ಇಲ್ಲವಾದರೆ ಪಂಜಾಯ್ತಿ ಚುನಾವಣೆಯ ನಂತರವೇ ಇದು ಜಾರಿಗೆ ಬರಲಿದೆ.
ಸಿಎಂ ಸಿದ್ದರಾಮಯ್ಯ ಅವರು ಏಪ್ರಿಲ್ 4ರಂದು ದೆಹಲಿಗೆ ತೆರಳಲಿದ್ದು, ಅಲ್ಲಿ ಈ ಬಗ್ಗೆ ಸ್ಪಷ್ಟ ರೂಪ ದೊರಕಲಿದೆ. ಸಂಪುಟ ಪುನಾರಚನೆ ವಿಚಾರದಲ್ಲಿ ಸಿದ್ದರಾಮಯ್ಯ ಒಂದು ಸ್ಪಷ್ಟ ಕಲ್ಪನೆಗೆ ಬಂದಿದ್ದಾರೆ. ಎಲ್ಲ ಸಚಿವರನ್ನು ಕೈ ಬಿಟ್ಟು ಹೊಸಬರನ್ನು ಸೇರಿಸಿಕೊಳ್ಳಬೇಕೆಂಬ ವಾದದ ನಡುವೆಯೂ ಸಿದ್ದರಾಮಯ್ಯ ತಮ್ಮದೇ ಆದ ಲೆಕ್ಕಾಚಾರವನ್ನು ಇಟ್ಟುಕೊಂಡಿದ್ದಾರೆ.
ಸದ್ಯ ಸಂಪುಟದಲ್ಲಿ 10 ಜಿಲ್ಲೆಗಳಿಗೆ ಪ್ರಾತಿನಿಧ್ಯವಿಲ್ಲ. ತಾವು ಪ್ರತಿನಿಧಿಸುವ ಕುರುಬ ಸಮುದಾಯವೂ ಸೇರಿ ಹಲವು ಜಾತಿಗೆ ಅವಕಾಶ ಸಿಕ್ಕಿಲ್ಲ. ಈ ಬಾರಿ ಇವೆರಡಕ್ಕೂ ಮಾನ್ಯತೆ ಸಿಗಲಿದೆ.
6 ಸಚಿವರಿಗೆ ಕೊಕ್ ಸಾಧ್ಯತೆ: ಕಾಂಗ್ರೆಸ್ ಮೂಲಗಳ ಪ್ರಕಾರ, ಈಗಿರುವ ಆ ಜನರನ್ನು ಕೈ ಬಿಡಲಾಗುತ್ತದೆ. ನಾಲ್ಕು ಖಾತೆಗಳು ಸಿದ್ದರಾಮಯ್ಯ ಅವರ ಬಳಿಯೇ ಇದೆ. ಒಟ್ಟು 10 ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಒಂದು ಹಂತದಲ್ಲಿ ಸಮತೋಲನ ಸಾಧನೆಯಾಗಬಹುದೆಂದು ಅವರ ಎಣಿಕೆ. ಆದರೆ, ಶಾಸಕರ ಒತ್ತಡ ಇಷ್ಟಕ್ಕೆ ತಣಿಯುವುದಿಲ್ಲ. ಸಂಪುಟವನ್ನು ಹೊಸದಾಗಿ ರಚಿಸಬೇಕು. ಇಲ್ಲವಾದರೆ ಸಾಮರ್ಥ್ಯ ತೋರದ ಅರ್ಧದಷ್ಟು ಸಚಿವರನ್ನಾದರೂ ಕೈ ಬಿಡಬೇಕು. ಆಗ 20 ಜನರಿಗೆ ಅವಕಾಶ ಲಭ್ಯವಾಗುತ್ತದೆ ಎಂಬ ವಾದವನ್ನು ಹೈಕಮಾಂಡ್ ಮುಂದೆ ಇಡಲು ನಿರ್ಧರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


