ರಾಜಕೀಯ

ಕಿಮ್ಮನೆ ರಾಜಿನಾಮೆ ನೀಡಲಿ: ಆಯನೂರು

ತೀರ್ಥಹಳ್ಳಿಯಲ್ಲಿ ಬಾಲಕಿ ಮೇಲಿನ ಕಿರುಕುಳ ಹಾಗೂ ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸಲು ಎಸ್ಪಿ ಅವರಿಗೆ ಮುಕ್ತ ಅವಕಾಶ ನೀಡಬೇಕು...

ಕಿಮ್ಮನೆ ರಾಜಿನಾಮೆ ನೀಡಲಿ: ಆಯನೂರು
Published On :

ಬೆಂಗಳೂರು: ತೀರ್ಥಹಳ್ಳಿಯಲ್ಲಿ ಬಾಲಕಿ ಮೇಲಿನ ಕಿರುಕುಳ ಹಾಗೂಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸಲು ಎಸ್ಪಿಅವರಿಗೆ ಮುಕ್ತಅವಕಾಶ ನೀಡಬೇಕು.ಈ ಪ್ರಕರಣದಾಖಲಿಸಿಕೊಳ್ಳದ ಪೊಲೀಸ್ ಇನ್ಸ್‌ಪೆಕ್ಟರ್,ಸೂಕ್ತ ಚಿಕಿತ್ಸೆನೀಡದ ಆಸ್ಪತ್ರೆಯಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು. ಎಲ್ಲಕ್ಕಿಂತಮುಖ್ಯವಾಗಿ ಪ್ರಕರಣವನ್ನು ಮುಚ್ಚಿಹಾಕಲುಪ್ರಯತ್ನಿಸುತ್ತಿರುವ ಸಚಿವ ಕಿಮ್ಮನೆರತ್ನಾಕರ ರಾಜಿನಾಮೆ ನೀಡಬೇಕು ಎಂದು ಬಿಜೆಪಿಆಗ್ರಹಿಸಿದೆ.

ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲು ಸೂಚನೆ ನೀಡದ ಜಿಲ್ಲಾ ಉಸ್ತುವಾರಿಸಚಿವ ಕಿಮ್ಮನೆಕೋಮುಗಲಭೆಗೆ ಪುಷ್ಠಿ ನೀಡುತ್ತಿದ್ದಾರೆ.ಆರೋಪಿಗಳನ್ನು ಬಂಧಿಸಲು ಸೂಕ್ತ ಆದೇಶವನ್ನೂ ನೀಡದಸಚಿವರೇ ರಾಜಕೀಯಮಾಡುತ್ತಿದ್ದಾರೆ. ಸಿದ್ದರಾಮಯ್ಯ ಇದನ್ನುಅರಿಯಬೇಕು. ಪೊಲೀಸ್ ತನಿಖೆಯಲ್ಲಿ ಹಸ್ತಕ್ಷೇಪ ಮಾಡದಂತೆಸಚಿವರಿಗೆ ಸೂಚಿಸಿ, ಜಿಲ್ಲಾ ವರಿಷ್ಠಾಧಿಕಾರಿಯಿಂದಲೇ ಪ್ರಕರಣದ ತನಿಖೆ ನಡೆದರೆ ಎಲ್ಲವೂಬಯಲಾಗುತ್ತದೆ ಎಂದು ರಾಜ್ಯಸಭೆ ಸದಸ್ಯ ಆಯನೂರುಮಂಜುನಾಥ ಪತ್ರಿಕಾಗೋಷ್ಠಿಯಲ್ಲಿ ಸೋಮವಾರತಿಳಿಸಿದರು.

ಬಾಲಕಿ ನಂದಿತಾ ತೀರ್ಥಹಳ್ಳಿತಾಲೂಕಿನ ಆಸ್ಪತ್ರೆಯಲ್ಲಿ 'ಯಾರೋ ನನಗೆ ಮಿಶ್ರಿತನೀರು ಕುಡಿಸಿದರು'ಎಂದು ಮೂರುಬಾರಿ ಹೇಳಿದ್ದುದಾಖಲಾಗಿದೆ. ಅದರ ಬಗ್ಗೆ ಪೊಲೀಸರು ಎಲ್ಲೂದೂರು ದಾಖಲಿಸಿಕೊಂಡಿಲ್ಲ.ನಂತರ ಮೆಗ್ಗಾನ್ಆಸ್ಪತ್ರೆಯಲ್ಲಿ  ಹುಡುಗಿನೀಡಿದ ಹೇಳಿಕೆಯನ್ನುದಾಖಲಿಸಲು 'ನಾನು ಡ್ಯೂಟಿ ಡಾಕ್ಟರ್ ಅಲ್ಲ'ಎಂದೂ ಡಾ.ಪ್ರಭಾಕರ್ಹೇಳಿದ್ದಾರೆ. ಆದರೆ ಆಕೆ ಹೇಳಿಕೆ ನೀಡಿದ್ದುನಿಜ ಎಂದುಅವರು ಒಪ್ಪಿಕೊಂಡಿದ್ದಾರೆ.ಇದನ್ನೆಲ್ಲ ಪೊಲೀಸರು ತನಿಖೆಯಲ್ಲಿ ಪರಿಗಣಿಸಿಲ್ಲ ಎಂದುಆರೋಪಿಸಿದರು.

ಮಣಿಪಾಲ್ ಆಸ್ಪತ್ರೆಯಲ್ಲಿ ಬಾಲಕಿ ಮರಣಹೊಂದಿದ ನಂತರ ಹಿರಿಯಪೊಲೀಸ್ ಅಧಿಕಾರಿಗಳುಸೇರಿದಂತೆ ಪೊಲೀಸ್ ದಂಡೇ ಅಲ್ಲಿಗೆ ಹೋಗಿತ್ತು.ಪ್ರಕರಣವನ್ನು ಮುಚ್ಚಿ ಹಾಕುವ ಬಗ್ಗೆ ಆಲೋಚಿಸಿದ್ದಅವರು, ಶವಪರೀಕ್ಷೆಯಲ್ಲಿಸಾಕಷ್ಟು ಸಂಖ್ಯೆಯಲ್ಲಿ ಸೇರಿಕೊಂಡಿದ್ದಾದರೂಏಕೆ? ಅಲ್ಲದೇ,ಶವಪರೀಕ್ಷೆ ವರದಿಯನ್ನು 'ಸೀಕ್ರೇಟ್ ಬಾಕ್ಸ್‌'ನಲ್ಲಿ ಇಟ್ಟಿದ್ದೇವೆ ಎಂದು ಹೊಸ ಕತೆಕಟ್ಟುತ್ತಿರುವುದೇಕೆ? ಇದಕ್ಕಿಂತ ಮುಖ್ಯವಾಗಿಈವರೆಗೂ ಯಾರನ್ನೂಏಕೆ ಬಂಧಿಸಿಲ್ಲಎಂದು ಪ್ರಶ್ನಿಸಿದರು.

ಸಚಿವ ಕಿಮ್ಮನೆ ಪೊಲೀಸ್ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ.ಒಂದು ಕೋಮಿಗೆಸೇರಿದ ವ್ಯಕ್ತಿಯನ್ನುರಕ್ಷಿಸಲು ರಾಜಕೀಯದ ಮಾತನಾಡುತ್ತಿದ್ದಾರೆ.ಇಂತಹವರು ಮೊದಲು ರಾಜಿನಾಮೆ ನೀಡಬೇಕು. ನಾವುಸಿಬಿಐ ಅಥವಾಸಿಐಡಿ ತನಿಖೆಕೇಳುತ್ತಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ(ಎಸ್ಪಿ) ಮುಕ್ತ ಅವಕಾಶನೀಡಿದರೆ ಅವರೇ ಎಲ್ಲವನ್ನೂ ಬಹಿರಂಗಪಡಿಸುತ್ತಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.