ರಾಜಕೀಯ

ಅದಿರು ಅಕ್ರಮ ಸಿಬಿಐ ತನಿಖೆಗೆ; ಹಿರೇಮಠ ಸ್ವಾಗತ

Published On :

ಬೆಂಗಳೂರು: ಅದಿರು ಅಕ್ರಮ ರಫ್ತು ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸುವ ಸರ್ಕಾರದ ನಿರ್ಧಾರವನ್ನು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ಸ್ವಾಗತಿಸಿದ್ದು, ಮೈಸೂರು ಮಿನರಲ್ಸ್ ಪ್ರಕರಣವನ್ನು ಕೂಡ ಸಿಬಿಐಗೆ ವಹಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಸಂಬಂಧ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.  ಮೈಸೂರು ಮಿನರಲ್ಸ್ ಸಂಸ್ಥೆ ಪ್ರಕರಣದಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು 10.8 ಮೆಟ್ರಿಕ್ ಟನ್ ಉತ್ತಮ ದರ್ಜೆಯ ಕಬ್ಬಿಣದ ಅದಿರನ್ನು ಎಂಟು ಕಂಪನಿಗಳಿಗೆ ಹಂಚಲಾಗಿದೆ.  ಸತ್ಯ ಗ್ರಾನೈಟ್ಸ್‌ನ ಕೆ.ಪಿ.ಪೊನ್ನರಾಜ್ ಒಡಗೂಡಿ ಅತಿ ಕಡಿಮೆ ಬೆಲೆಗೆ ಅದಿರು ಪಡೆದಿರುವವರಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ಸೇರಿದ್ದಾರೆ. ಸಂಸ್ಥೆಯ ವ್ಯವಸ್ಥಾಪಕ ನಿದೇರ್ಶಕರಾಗಿ ಕಾರ್ಯ ನಿರ್ವಹಸಿದ್ದ ವಿ.ಉಮೇಶ್, ಐ. ಆರ್. ಪೆರುಮಾಳ್, ಮಹೇಂದ್ರ ಜೈನ್, ಡಿ.ಎಸ್.ಅಶ್ವತ್ಥ್, ಜೀಜಾ ಹರಿಸಿಂಗ್, ಕೆ.ಎಸ್.ಮಂಜುನಾಥ್ ಮತ್ತು ಎಚ್. ಶ್ರೀನಿವಾಸ್, ಆರ್.ರಾಮಪ್ಪ, ಶಂಕರಲಿಂಗಯ್ಯ ಸಹ ಇದರಲ್ಲಿ ಸೇರಿದ್ದಾರೆ ಎಂದು ಲೋಕಾಯುಕ್ತರಾಗಿದ್ದ ನ್ಯಾ.ಸಂತೋಷ್ ಹೆಗಡೆ 2008ರ ಡಿ.18ರಂದು ಸಲ್ಲಿಸಿದ ತಮ್ಮ ಮೊದಲ ವರದಿಯಲ್ಲಿ ತಿಳಿಸಿದ್ದಾರೆ.  ಭಾರಿ ಲಾಭ ಮಾಡಿಕೊಂಡಿರುವ ಖಾಸಗಿ ಕಂಪನಿ ಜೆಎಸ್‌ಡಬ್ಲ್ಯೂ ಸ್ಟೀಲ್ ಸರ್ಕಾರಕ್ಕೆ 871 ಕೋಟಿ ಪಾವತಿಸಬೇಕಿದೆ. ಕಲ್ಯಾಣಿ ಸ್ಟೀಲ್, ಕಲ್ಯಾಣಿ ಫೆರಸ್ ಮತ್ತು ಮುಕುಂದ ಅವರ ಬಗ್ಗೆ ತನಿಖೆ ಆಗಬೇಕು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.