ರಾಜಕೀಯ

ಟಿಕೆಟ್ ಪಡೆಯೋರ ದುಡ್ಡು, ಡೆಲ್ಲಿಯಮ್ಮನ ಜಾತ್ರೆ

Published On :

ಹಾಸನ: ವಿಧಾನಸಭೆ ಚುನಾವಣೆ ಬಂತೆಂದರೇ ಸಾಕು ಕಾಂಗ್ರೆಸ್ ಮುಖಂಡರ ಚಿತ್ತ ದೆಹಲಿಯತ್ತ ಹರಿಯುತ್ತದೆ. ಬಿ ಫಾರಂ ಸಿಗುವ ತನಕ ಅಥವಾ ಸಿಗುವುದು ಅಸಾಧ್ಯ ಎಂಬುವುದು ಅರಿವಾಗುವ ತನಕ ದೆಹಲಿಯಲ್ಲೇ ಮೊಕ್ಕಾಂ ಹೂಡುತ್ತಾರೆ.
ದೆಹಲಿಯಲ್ಲಿ ಕಂಡ ಕಂಡ ಕಾಂಗ್ರೆಸ್ ಮುಖಂಡರಿಗೆಲ್ಲ ತಮ್ಮ ಬಯೋಡಾಟ ನೀಡಿ, ಟಿಕೆಟ್ ನೀಡುವಂತೆ ಭಿಕ್ಷೆ ಬೇಡುತ್ತಾರೆ. ಈ ಸಲವೂ ಹಾಸನ ಜಿಲ್ಲೆಯ ಬಹುತೇಕ ಮುಖಂಡರು ದೆಹಲಿಗೆ ಹೋಗಿ ವಾರವೇ ಆಗಿದೆ. ಟಕೆಟ್ ಪಡೆಯುವ ಹೆಬ್ಬಯಕೆಯಿಂದ ತಾವು ಮಾತ್ರ ದೇಶದ ರಾಜಧಾನಿಗೆ ತೆರಳುವುದಲ್ಲದೇ, ತಮ್ಮ ಹಿಂಬಾಲಕರನ್ನೂ ಕರೆದುಕೊಂಡು ಹೋಗುತ್ತಾರೆ. ಅದೂ ವಿಮಾನದಲ್ಲಿಯೇ!
ಜಿಲ್ಲೆಯ ಬಹುತೇಕ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿರುವುದರಿಂದ ಜಿಲ್ಲೆಯ ಕಾಂಗ್ರೆಸ್ ಕಚೇರಿಗಳು ಬಿಕೋ ಎನ್ನುತ್ತಿವೆ. ಇಲ್ಲಿಂದ ಹೋದವರಿಗೆಲ್ಲಾ ದೆಹಲಿಯ ಕರ್ನಾಟಕ ಭವನದಲ್ಲಿ ಕೊಠಡಿಗಳೂ ಸಿಗುವುದಿಲ್ಲ. ಆದ್ದರಿಂದ ಬಹುತೇಕ ಮಂದಿ ಖಾಸಗಿ ಹೊಟೇಲ್ ಆಶ್ರಯಿಸಿದ್ದಾರೆ. ಎಲ್ಲರ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದು ಟಿಕೆಟ್ ಆಕಾಂಕ್ಷಿಯೇ.
ಏಕೆ  ಡೆಲ್ಲಿಗೆ?: 'ಜೆಡಿಎಸ್‌ನಲ್ಲಿ ಬೆಂಗಳೂರಿನಲ್ಲಿ ಇರೋ ದೇವೇಗೌಡರನ್ನೋ, ಕುಮಾರಣ್ಣನವರನ್ನೋ ಕಂಡರೆ ಸಾಕು. ಬಿಜೆಪಿ, ಕೆಜೆಪಿಯಲ್ಲೂ ಇದೇ ಪರಿಸ್ಥಿತಿ. ಆದರೆ ಕಾಂಗ್ರೆಸ್‌ಗೆ ರಾಜ್ಯದ ನಾಯಕರಗಿಂತ ರಾಷ್ಟ್ರೀಯ ನಾಯಕರ ಮನ ಒಲಿಸಿದರೆ ಮಾತ್ರ ಟಿಕೆಟ್ ಪಡೆಯುವುದು ಸಾಧ್ಯ' ಎನ್ನುತ್ತಾರೆ ದೆಹಲಿಯಲ್ಲಿ ಮೊಕ್ಕಾಂ ಹೂಡಿರುವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೊಬ್ಬರು. ಕಾಂಗ್ರೆಸ್‌ನಲ್ಲಿ ಗೆಲ್ಲಲು ಮಾತ್ರವಲ್ಲಿ, ಟಿಕೆಟ್ ಪಡೆಯಲೂ ಬೇಕು ವಿಟಮಿನ್ 'ಎಂ' ಎನ್ನುತ್ತಾರೆ ಹೆಸರನ್ನು ಹೇಳಲು ಇಚ್ಛಿಸದ ಮುಖಂಡರೊಬ್ಬರು.
-ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.