ರಾಜಕೀಯ

ಜೆಡಿಎಸ್ ಪಟ್ಟಿ ಬಿಡುಗಡೆಗೆ ಕೂಡಿ ಬಂದಿಲ್ಲ ಮುಹೂರ್ತ

Published On :

ಕ.ಪ್ರ. ವಾರ್ತೆ ಬೆಂಗಳೂರು ಮಾ.29
ವಿಧಾನಸಭೆಯ ಎಲ್ಲ 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಒಂದೇ ಬಾರಿ ಪ್ರಕಟಮಾಡಲು ಜೆಡಿಎಸ್‌ಗೆ ಇನ್ನೂ ಮುಹೂರ್ತ ಕೂಡಿಬಂದಿಲ್ಲ.
ಅಜ್ಮೀರ್‌ನಿಂದ ವಾಪಸ್ ಬಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಮಾರ್ಚ್ 30ರೊಳಗೆ ಅಭ್ಯರ್ಥಿಗಳ ಪಟ್ಟಿಯನ್ನು ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ನಡೆಯುವ ಸಮಾವೇಶದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಆದರೆ, ಈ ಸಮಾವೇಶ ನಡೆಯುವ ಯಾವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ.
ಜೆಡಿಎಸ್ 'ಕಾದು ನೋಡುವ ತಂತ್ರಕ್ಕೆ' ಶರಣಾಗಿರುವುದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ತನ್ನ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ ಮಾಡುವವರೆಗೂ ಜೆಡಿಎಸ್ ಅಭ್ಯರ್ಥಿಗಳನ್ನು ಅಖೈರುಗೊಳಿಸುವುದಿಲ್ಲ.
ಅಲ್ಲಿ ಅಸಮಾಧಾನಗೊಂಡವರಿಗೆ ಜೆಡಿಎಸ್ ಮಣೆ ಹಾಕುವ ಆಲೋಚನೆ ಹೊಂದಿದೆ. ಹೀಗಾಗಿ, ಈಗಾಗಲೇ ಸುಮಾರು 160 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದರೂ ಅದನ್ನೂ ಬಿಡುಗಡೆ ಮಾಡದೆ ಆಕಾಂಕ್ಷಿಗಳ ತಳಮಳ ಹೆಚ್ಚಿಸಿದೆ. ಇತರೆ ಪಕ್ಷಗಳಿಂದ ಬರುವವರಿಗೆ ಟಿಕೆಟ್ ಸಾಧ್ಯ ಇಲ್ಲ ಎಂದು ಜೆಡಿಎಸ್ ಹೇಳುತ್ತಿದ್ದರೂ, ಗೆಲ್ಲುವ ಕುದುರೆ ಬಂದರೆ ಬೇಡ ಎನ್ನುವ ತಿರಸ್ಕಾರವನ್ನೂ ಹೊಂದಿಲ್ಲ. ತನ್ನ ಪ್ರಬಲ ಅಭ್ಯರ್ಥಿ ಇಲ್ಲದ ಕಡೆ ಇಂತಹ ಅಭ್ಯರ್ಥಿಗಳು ಬಂದರೆ ಅವರಿಗೆ ಟಿಕೆಟ್ ಸಿಗುವುದಂತೂ ಖಾತರಿ. ಆದರೆ, ಇದಕ್ಕೆಲ್ಲ ಕಾಂಗ್ರೆಸ್ ಹಾಗೂ ಬಿಜೆಪಿ ಪಟ್ಟಿ ಬಿಡುಗಡೆ ಆಗಬೇಕು. ಆ ಎರಡೂ ಪಕ್ಷಗಳು ಏಪ್ರಿಲ್ ಮೊದಲ ವಾರದ ಅಂತ್ಯದಲ್ಲಿ ಈ ಪ್ರಕ್ರಿಯೆ ಮುಗಿಸುವುದರಿಂದ ಜೆಡಿಎಸ್ ಕೂಡ ಅಲ್ಲಿಯವರೆಗೆ ಕಾಯುವ ಲಕ್ಷಣಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.