ಗೆದ್ದೆನೆಂದು ಬೀಗುವಾಗ ಸೋತ ಸುದ್ದಿ ಬಂದಿತ್ತು!
ರಾಜಕೀಯ ನಾಯಕರು ಗೆದ್ದಾಗ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ. ಆದರೆ, ಗೆಲವಿನ ಸನಿಹದಲ್ಲಿದ್ದು ಸಂಭ್ರಮ ಆಚರಿಸುವಾಗ ಸೋತ ಸುದ್ದಿ ಬಂದರೆ ಪರಿಸ್ಥಿತಿ ಹೇಗಿರುತ್ತದೆ ನೋಡಿ! 2008ರ ಚುನಾವಣೆ ಸಮಯ. ಬಿಜಾಪುರ ಜಿಲ್ಲೆಯ ಇಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಯಶವಂತರಾಯಗೌಡ ಪಾಟೀಲ ಹಾಗೂ ಬಿಜೆಪಿಯಿಂದ ಡಾ. ಸಾರ್ವಭೌಮ ಬಗಲಿ ಸ್ಪರ್ಧಿಸಿದ್ದರು. ಮತ ಎಣಿಕೆ ತುರುಸಿನಿಂದ ನಡೆದಿತ್ತು. 14 ಸುತ್ತಿಗಳ ಪೈಕಿ 13ನೇ ಸುತ್ತು ಬಂದಾಗ ಪಾಟೀಲ್ ಅವರು 28,100 ಮತ ಪಡೆದು 446 ಮತಗಳಿಂದ ಮುಂದಿದ್ದರು. ಇನ್ನೇನು ಕೊನೆಯ ಸುತ್ತು. ಕೇವಲ 2,150 ಮತ ಎಣಿಕೆ ಬಾಕಿಯಿದೆ. ಗೆಲವು ನಮ್ಮದೇ ಎಂದು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸಂಭ್ರಮಾಚರಣೆ ಮಾಡತೊಡಗಿದರು. ಬಣ್ಣ ಎರಚಿ ಪಾಟೀಲ್ ಅವರನ್ನು ಹೊತ್ತು ಮೆರವಣಿಗೆಗೆ ಹೊರಡಲು ಅಣಿಯಾಗಿದ್ದರು. ಅಷ್ಟರೊಳಗೆ 14ನೇ ಸುತ್ತಿನ ಅಂದರೆ ಕೊನೆ ಸುತ್ತಿನ ಮತ ಎಣಿಕೆ ಫಲಿತಾಂಶ ಪ್ರಕಟವಾಯಿತು. ಬಗಲಿ ಅವರು 1800 ಮತಗಳನ್ನು ಪಡೆದು 571 ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು. ಬಗಲಿ ಅವರು ಒಟ್ಟು 29,456 ಮತ ಪಡೆದಿದ್ದರೆ, ಯಶವಂತರಾಯಗೌಡ ಪಾಟೀಲ ಅವರು 28,885 ಮತಗಳನ್ನು ಪಡೆದು ಸೋಲುಂಡಿದ್ದರು. ಮೆರವಣಿಗೆ ಹೊರಟಿದ್ದ ಕಾರ್ಯಕರ್ತರು ಸುದ್ದಿ ಕೇಳಿ ಪಾಟೀಲ್ ಅವರನ್ನು ಕೆಳಗಿಳಿಸಿ ಮೌನಕ್ಕೆ ಶರಣಾದರೆ, ಯಶವಂತರಾಯಗೌಡರು ಹೂವಿನ ಹಾರ ತೆಗೆದು ಬಿಸಾಕಿ ಮನೆ ಕಡೆ ನಡೆದರು!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

