ಫೋಟೊ ಗ್ಯಾಲರಿ

ಮಾರುಕಟ್ಟೆಗೆ ಹೊಸ ಟಾಟಾ ಕಾರು ಎಂಟ್ರಿ; ಖರೀದಿಸೊಕೆ 2700 ಜನರಿಗೆ ಮಾತ್ರ ಅವಕಾಶ! ಏನಿದರ ವಿಶೇಷತೆ?

Tata Motors Stealth Edition: ಟಾಟಾ ಮೋಟಾರ್ಸ್ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದೆ. ತನ್ನ ಜನಪ್ರಿಯ ಎಸ್‌ಯುವಿ ಕಾರುಗಳಾದ ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಲ್ಲಿ ಹೊಚ್ಚ ಹೊಸ ಸ್ಟೆಲ್ತ್ ಆವೃತ್ತಿಯನ್ನು ಪರಿಚಯಿಸಿದೆ. ಆ ಕುರಿತ ವರದಿ ಇಲ್ಲಿದೆ.

ಮಾರುಕಟ್ಟೆಗೆ ಹೊಸ ಟಾಟಾ ಕಾರು ಎಂಟ್ರಿ; ಖರೀದಿಸೊಕೆ 2700 ಜನರಿಗೆ ಮಾತ್ರ ಅವಕಾಶ! ಏನಿದರ ವಿಶೇಷತೆ?
ಟಾಟಾ ಸ್ಟೆಲ್ತ್ ಹೊಸ ಯುಗದ ಆಕರ್ಷಕ ಎಸ್‌ಯುವಿ — Online Desk
Published On :
Tata Motors Stealth Edition: ಭಾರತೀಯ ಕಾರು ಮಾರುಕಟ್ಟೆಗೆ ಟಾಟಾ ಮೋಟಾರ್ಸ್ ಮತ್ತೊಂದು ಹೊಸ ಕಾರನ್ನು ಪರಿಚಯಿಸಿದೆ. ಆದರೆ ಈ ಬಾರಿ ಇದರ ವಿಶೇಷತೆ ಏನೆಂದರೆ ಈ ಕಾರನ್ನು ಕೇವಲ 2,700 ಜನರು ಮಾತ್ರ ಖರೀದಿಸಲು ಸಾಧ್ಯ. ಇದು ಲಿಮಿಟೆಡ್ ಎಡಿಷನ್ ಕಾರು ಆಗಿದ್ದು ಕಲೆಕ್ಟರ್ ಗಳಿಗೆ ಮತ್ತು ಟಾಟಾ ಪ್ರಿಯರಿಗೆ ಒಂದು ದೊಡ್ಡ ಅವಕಾಶವಾಗಿದೆ. ಆ ಕುರಿತ ವರದಿ ಇಲ್ಲಿದೆ.
Tata Motors Stealth Edition: ಭಾರತೀಯ ಕಾರು ಮಾರುಕಟ್ಟೆಗೆ ಟಾಟಾ ಮೋಟಾರ್ಸ್ ಮತ್ತೊಂದು ಹೊಸ ಕಾರನ್ನು ಪರಿಚಯಿಸಿದೆ. ಆದರೆ ಈ ಬಾರಿ ಇದರ ವಿಶೇಷತೆ ಏನೆಂದರೆ ಈ ಕಾರನ್ನು ಕೇವಲ 2,700 ಜನರು ಮಾತ್ರ ಖರೀದಿಸಲು ಸಾಧ್ಯ. ಇದು ಲಿಮಿಟೆಡ್ ಎಡಿಷನ್ ಕಾರು ಆಗಿದ್ದು ಕಲೆಕ್ಟರ್ ಗಳಿಗೆ ಮತ್ತು ಟಾಟಾ ಪ್ರಿಯರಿಗೆ ಒಂದು ದೊಡ್ಡ ಅವಕಾಶವಾಗಿದೆ. ಆ ಕುರಿತ ವರದಿ ಇಲ್ಲಿದೆ. — Online Desk
ಯಾಕೆ 2,700 ಕಾರುಗಳು ಮಾತ್ರ?

ಟಾಟಾ ಮೋಟಾರ್ಸ್ ಭಾರತೀಯ ಎಸ್‌ಯುವಿ ಮಾರುಕಟ್ಟೆಗೆ ಪರಿಚಯಿಸಿರುವ ಹೊಸ ಸ್ಟೆಲ್ತ್ ಆವೃತ್ತಿಯನ್ನು ಹ್ಯಾರಿಯರ್ ಮತ್ತು ಸಫಾರಿ ಎರಡು ಜನಪ್ರಿಯ ಕಾರುಗಳ ಮಾದರಿಯನ್ನು ಸೇರಿ ಕೇವಲ 2,700 ಕಾರುಗಳು ಮಾತ್ರವೇ ತಯಾರಿಸಲಾಗುತ್ತದೆ. ಅದ್ದಕ್ಕೆ ಪ್ರಮುಖ ಕಾರಣ ಸಫಾರಿಯ 27 ನೇ ವಾರ್ಷಿಕೋತ್ಸವ! ಹೌದು, ಟಾಟಾ ಮೋಟಾರ್ಸ್ ಜನಪ್ರಿಯ ಕಾರು ಮಾದರಿಯಾದ ಸಫಾರಿಯ 27 ನೇ ವಾರ್ಷಿಕೋತ್ಸವದ ನೆನಪಿಗಾಗಿ ಈ ಲಿಮಿಟೆಡ್ ಎಡಿಷನ್ ಕಾರನ್ನು ತರಲಾಗಿದೆ. ಮ್ಯಾಟ್ ಕಪ್ಪು ಬಣ್ಣ ಮತ್ತು ಪ್ರೀಮಿಯಂ ಫೀಚರ್‌ಗಳೊಂದಾಗಿ ಇದು ಕಾರು ಪ್ರಿಯರ ಗಮನ ಸೆಳೆಯುತ್ತಿದೆ.
ಯಾಕೆ 2,700 ಕಾರುಗಳು ಮಾತ್ರ? ಟಾಟಾ ಮೋಟಾರ್ಸ್ ಭಾರತೀಯ ಎಸ್‌ಯುವಿ ಮಾರುಕಟ್ಟೆಗೆ ಪರಿಚಯಿಸಿರುವ ಹೊಸ ಸ್ಟೆಲ್ತ್ ಆವೃತ್ತಿಯನ್ನು ಹ್ಯಾರಿಯರ್ ಮತ್ತು ಸಫಾರಿ ಎರಡು ಜನಪ್ರಿಯ ಕಾರುಗಳ ಮಾದರಿಯನ್ನು ಸೇರಿ ಕೇವಲ 2,700 ಕಾರುಗಳು ಮಾತ್ರವೇ ತಯಾರಿಸಲಾಗುತ್ತದೆ. ಅದ್ದಕ್ಕೆ ಪ್ರಮುಖ ಕಾರಣ ಸಫಾರಿಯ 27 ನೇ ವಾರ್ಷಿಕೋತ್ಸವ! ಹೌದು, ಟಾಟಾ ಮೋಟಾರ್ಸ್ ಜನಪ್ರಿಯ ಕಾರು ಮಾದರಿಯಾದ ಸಫಾರಿಯ 27 ನೇ ವಾರ್ಷಿಕೋತ್ಸವದ ನೆನಪಿಗಾಗಿ ಈ ಲಿಮಿಟೆಡ್ ಎಡಿಷನ್ ಕಾರನ್ನು ತರಲಾಗಿದೆ. ಮ್ಯಾಟ್ ಕಪ್ಪು ಬಣ್ಣ ಮತ್ತು ಪ್ರೀಮಿಯಂ ಫೀಚರ್‌ಗಳೊಂದಾಗಿ ಇದು ಕಾರು ಪ್ರಿಯರ ಗಮನ ಸೆಳೆಯುತ್ತಿದೆ. — Online Desk
ಇನ್ನು, ಈ ಕಾರಿನ ಅತಿದೊಡ್ಡ ಆಕರ್ಷಣೆ ಅಂದರೆ, ಮ್ಯಾಟ್ ಸ್ಟೆಲ್ತ್ ಕಪ್ಪು ಬಣ್ಣ.! ಹೌದು, 19 ಇಂಚಿನ ಕಪ್ಪು ಅಲಾಯ್ ವೀಲ್ ಡಾರ್ಕ್ ಗ್ರಿಲ್ ಕಪ್ಪು ಬ್ಯಾಡ್ಜಿಂಗ್ ಮತ್ತು ಸ್ಟೆಲ್ತ್ ಲೋಗೋ ಕಾರಿಗೆ ಅದ್ಬುತ ನೋಟ ನೀಡುತ್ತದೆ. ಇದರೊಂದಿಗೆ, ಒಳಭಾಗದಲ್ಲಿ ಕಾರ್ಬನ್ ನಾಯ್ರ್ ಕ್ಯಾಬಿನ್ ಇದೆ. ಸಂಪೂರ್ಣ ಕಪ್ಪು ಲೆದರೆಟ್ ಸೀಟ್ ಸ್ಟೆಲ್ತ್ ಬ್ಯಾಡ್ಜ್ ಹೊಸ ಡ್ಯಾಶ್ ಬೋರ್ಡ್ ಫಿನಿಶ್ ಮತ್ತು ಆಂಬಿಯೆಂಟ್ ಲೈಟ್ ಐಷಾರಾಮಿ ಅನುಭವ ನೀಡುತ್ತದೆ. 12.3 ಇಂಚಿನ ಹರ್ಮನ್ ಟಚ್ ಸ್ಕ್ರೀನ್ 10.25 ಇಂಚಿನ ಡಿಜಿಟಲ್ ಮೀಟರ್ ಪನೋರಮಿಕ್ ಸನ್ ರೂಫ್ ವೆಂಟಿಲೇಟೆಡ್ ಸೀಟ್ 10 ಸ್ಪೀಕರ್ ಜೆ ಬಿ ಎಲ್ ಸೌಂಡ್ ಸಿಸ್ಟಮ್ ವೈರ್ ಲೆಸ್ ಚಾರ್ಜಿಂಗ್ ಮತ್ತು ಡ್ಯುಯಲ್ ಜೋನ್ ಎಸಿ ಯಂತಹ ಫೀಚರ್ ಗಳಿವೆ.
ಇನ್ನು, ಈ ಕಾರಿನ ಅತಿದೊಡ್ಡ ಆಕರ್ಷಣೆ ಅಂದರೆ, ಮ್ಯಾಟ್ ಸ್ಟೆಲ್ತ್ ಕಪ್ಪು ಬಣ್ಣ.! ಹೌದು, 19 ಇಂಚಿನ ಕಪ್ಪು ಅಲಾಯ್ ವೀಲ್ ಡಾರ್ಕ್ ಗ್ರಿಲ್ ಕಪ್ಪು ಬ್ಯಾಡ್ಜಿಂಗ್ ಮತ್ತು ಸ್ಟೆಲ್ತ್ ಲೋಗೋ ಕಾರಿಗೆ ಅದ್ಬುತ ನೋಟ ನೀಡುತ್ತದೆ. ಇದರೊಂದಿಗೆ, ಒಳಭಾಗದಲ್ಲಿ ಕಾರ್ಬನ್ ನಾಯ್ರ್ ಕ್ಯಾಬಿನ್ ಇದೆ. ಸಂಪೂರ್ಣ ಕಪ್ಪು ಲೆದರೆಟ್ ಸೀಟ್ ಸ್ಟೆಲ್ತ್ ಬ್ಯಾಡ್ಜ್ ಹೊಸ ಡ್ಯಾಶ್ ಬೋರ್ಡ್ ಫಿನಿಶ್ ಮತ್ತು ಆಂಬಿಯೆಂಟ್ ಲೈಟ್ ಐಷಾರಾಮಿ ಅನುಭವ ನೀಡುತ್ತದೆ. 12.3 ಇಂಚಿನ ಹರ್ಮನ್ ಟಚ್ ಸ್ಕ್ರೀನ್ 10.25 ಇಂಚಿನ ಡಿಜಿಟಲ್ ಮೀಟರ್ ಪನೋರಮಿಕ್ ಸನ್ ರೂಫ್ ವೆಂಟಿಲೇಟೆಡ್ ಸೀಟ್ 10 ಸ್ಪೀಕರ್ ಜೆ ಬಿ ಎಲ್ ಸೌಂಡ್ ಸಿಸ್ಟಮ್ ವೈರ್ ಲೆಸ್ ಚಾರ್ಜಿಂಗ್ ಮತ್ತು ಡ್ಯುಯಲ್ ಜೋನ್ ಎಸಿ ಯಂತಹ ಫೀಚರ್ ಗಳಿವೆ. — Online Desk
ಮುಂದುವರೆದು, ಪ್ರಯಾಣಿಕರ ಸುರಕ್ಷತೆಗೆ 7 ಏರ್ ಬ್ಯಾಗ್ ಮತ್ತು ಲೆವಲ್ 2 ಪ್ಲಸ್ ಎ ಡಿ ಎಸ್ ವ್ಯವಸ್ಥೆ ಇದೆ. ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಲೇನ್ ಡಿಪಾರ್ಚರ್ ವಾರ್ನಿಂಗ್ ಅಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ 360 ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಇದೆ. ಇನ್ನು, ಎಂಜಿನ್ ಸಾಮರ್ಥ್ಯದ ವಿಚಾರಕ್ಕೆ ಬಂದರೆ, ಈ ಹೊಸ ಆವೃತ್ತಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ ಹೊಸದಾಗಿ ಪರಿಚಯಿಸಲಾದ ಒಂದು ಪಾಯಿಂಟ್ ಐದು ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 170 ಹಾರ್ಸ್‌ಪವರ್ ಶಕ್ತಿ ಮತ್ತು 280 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಎರಡು ಲೀಟರ್ ಡೀಸೆಲ್ ಎಂಜಿನ್ 170 ಹಾರ್ಸ್‌ಪವರ್ ಶಕ್ತಿ ಮತ್ತು 350 ನ್ಯೂಟನ್ ಮೀಟರ್ ಟಾರ್ಕ್ ನೀಡುತ್ತದೆ. ಈ ಎಂಜಿನ್‌ಗಳು 6 ಸ್ಪೀಡ್ ಮ್ಯಾನುಯೆಲ್ ಮತ್ತು 6 ಸ್ಪೀಡ್ ಅಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿವೆ.
ಮುಂದುವರೆದು, ಪ್ರಯಾಣಿಕರ ಸುರಕ್ಷತೆಗೆ 7 ಏರ್ ಬ್ಯಾಗ್ ಮತ್ತು ಲೆವಲ್ 2 ಪ್ಲಸ್ ಎ ಡಿ ಎಸ್ ವ್ಯವಸ್ಥೆ ಇದೆ. ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಲೇನ್ ಡಿಪಾರ್ಚರ್ ವಾರ್ನಿಂಗ್ ಅಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ 360 ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಇದೆ. ಇನ್ನು, ಎಂಜಿನ್ ಸಾಮರ್ಥ್ಯದ ವಿಚಾರಕ್ಕೆ ಬಂದರೆ, ಈ ಹೊಸ ಆವೃತ್ತಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ ಹೊಸದಾಗಿ ಪರಿಚಯಿಸಲಾದ ಒಂದು ಪಾಯಿಂಟ್ ಐದು ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 170 ಹಾರ್ಸ್‌ಪವರ್ ಶಕ್ತಿ ಮತ್ತು 280 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಎರಡು ಲೀಟರ್ ಡೀಸೆಲ್ ಎಂಜಿನ್ 170 ಹಾರ್ಸ್‌ಪವರ್ ಶಕ್ತಿ ಮತ್ತು 350 ನ್ಯೂಟನ್ ಮೀಟರ್ ಟಾರ್ಕ್ ನೀಡುತ್ತದೆ. ಈ ಎಂಜಿನ್‌ಗಳು 6 ಸ್ಪೀಡ್ ಮ್ಯಾನುಯೆಲ್ ಮತ್ತು 6 ಸ್ಪೀಡ್ ಅಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿವೆ. — Online Desk
ಇದರ ಬೆಲೆ ಎಷ್ಟು?

ಹ್ಯಾರಿಯರ್ ಸ್ಟೆಲ್ತ್ ಆವೃತ್ತಿಯು ಫಿಯರ್‌ಲೆಸ್+ ರೂಪಾಂತರವನ್ನು ಆಧರಿಸಿದೆ. ಅದರಂತೆ, ಸಫಾರಿ ಸ್ಟೆಲ್ತ್ ಆವೃತ್ತಿಯು ಅಕಂಪ್ಲಿಶ್ಡ್+ ಟ್ರಿಮ್‍ ಅನ್ನು ಆಧರಿಸಿದೆ. ಹ್ಯಾರಿಯರ್ ಸ್ಟೆಲ್ತ್ ಆವೃತ್ತಿಯ ಬೆಲೆ ರೂ. 25.09 ಲಕ್ಷ (ಎಕ್ಸ್-ಶೋರೂಂ, ದೆಹಲಿ) ಮತ್ತು ಸಫಾರಿ ಸ್ಟೆಲ್ತ್ ಆವೃತ್ತಿಯ ಬೆಲೆ ರೂ. 25.74 ಲಕ್ಷ (ಎಕ್ಸ್-ಶೋರೂಂ, ದೆಹಲಿ). ಅದರಂತೆ, ಈ ಹೊಸ ಕಾರುಗಳು ವಿಶಿಷ್ಟ ಶೈಲಿ ಮತ್ತು ಶಕ್ತಿಶಾಲಿ ಪ್ರದರ್ಶನವನ್ನು ಬಯಸುವ ಗ್ರಾಹಕರಿಗೆ ಇದು ಅತ್ಯುತ್ತಮ ಎಸ್‌ಯುವಿ ಆಯ್ಕೆಯಾಗಿದೆ.
ಇದರ ಬೆಲೆ ಎಷ್ಟು? ಹ್ಯಾರಿಯರ್ ಸ್ಟೆಲ್ತ್ ಆವೃತ್ತಿಯು ಫಿಯರ್‌ಲೆಸ್+ ರೂಪಾಂತರವನ್ನು ಆಧರಿಸಿದೆ. ಅದರಂತೆ, ಸಫಾರಿ ಸ್ಟೆಲ್ತ್ ಆವೃತ್ತಿಯು ಅಕಂಪ್ಲಿಶ್ಡ್+ ಟ್ರಿಮ್‍ ಅನ್ನು ಆಧರಿಸಿದೆ. ಹ್ಯಾರಿಯರ್ ಸ್ಟೆಲ್ತ್ ಆವೃತ್ತಿಯ ಬೆಲೆ ರೂ. 25.09 ಲಕ್ಷ (ಎಕ್ಸ್-ಶೋರೂಂ, ದೆಹಲಿ) ಮತ್ತು ಸಫಾರಿ ಸ್ಟೆಲ್ತ್ ಆವೃತ್ತಿಯ ಬೆಲೆ ರೂ. 25.74 ಲಕ್ಷ (ಎಕ್ಸ್-ಶೋರೂಂ, ದೆಹಲಿ). ಅದರಂತೆ, ಈ ಹೊಸ ಕಾರುಗಳು ವಿಶಿಷ್ಟ ಶೈಲಿ ಮತ್ತು ಶಕ್ತಿಶಾಲಿ ಪ್ರದರ್ಶನವನ್ನು ಬಯಸುವ ಗ್ರಾಹಕರಿಗೆ ಇದು ಅತ್ಯುತ್ತಮ ಎಸ್‌ಯುವಿ ಆಯ್ಕೆಯಾಗಿದೆ. — Online Desk

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.