ಕಾಂಬೋಡಿಯಾ ಗರ್ಲ್ಫ್ರೆಂಡ್ ಜತೆ ವಿವಾಹವಾಗಲು ಹರಿಯಾಣ ಗ್ಯಾಂಗ್‌ಸ್ಟರ್‌ಗೆ ಕಸ್ಟಡಿ ಪೆರೋಲ್; ಫಾರ್ಮ್‌ಹೌಸ್‌ನಲ್ಲಿ ಮದುವೆ! Video ನೋಡಿ
ಕಳೆದ ವರ್ಷ ಕಾಂಬೋಡಿಯಾದಿಂದ ಭಾರತಕ್ಕೆ ಕರೆತರಲಾದ ಝಜ್ಜರ್‌ನ ಬಡ್ಲಿ ನಿವಾಸಿಯಾಗಿರುವ ಧಿಲ್ಲಾಗೆ, ಜೈಲಿನ ಸಮೀಪವಿರುವ ಫಾರ್ಮ್‌ಹೌಸ್‌ನಲ್ಲಿ ನಡೆಯಲಿರುವ ವಿವಾಹಕ್ಕಾಗಿ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ — ಅಂದರೆ 12 ಗಂಟೆಗಳ ಕಾಲ — 'ಕಸ್ಟಡಿ ಪೆರೋಲ್' ನೀಡಲಾಗಿತ್ತು.

ನವದೆಹಲಿ: ಹರಿಯಾಣದ ಝಜ್ಜರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ, ಗ್ಯಾಂಗ್‌ಸ್ಟರ್ ಮೈನ್‌ಪಾಲ್ ಧಿಲ್ಲಾಗೆ, ತನ್ನ ಕಾಂಬೋಡಿಯನ್ ಗೆಳತಿಯನ್ನು ವಿವಾಹವಾಗಲು ಗುರುವಾರ ಪೆರೋಲ್ ಮಂಜೂರು ಮಾಡಲಾಗಿದೆ.
ಕಳೆದ ವರ್ಷ ಕಾಂಬೋಡಿಯಾದಿಂದ ಭಾರತಕ್ಕೆ ಕರೆತರಲಾದ ಝಜ್ಜರ್‌ನ ಬಡ್ಲಿ ನಿವಾಸಿಯಾಗಿರುವ ಧಿಲ್ಲಾಗೆ, ಜೈಲಿನ ಸಮೀಪವಿರುವ ಫಾರ್ಮ್‌ಹೌಸ್‌ನಲ್ಲಿ ನಡೆಯಲಿರುವ ವಿವಾಹಕ್ಕಾಗಿ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ — ಅಂದರೆ 12 ಗಂಟೆಗಳ ಕಾಲ — 'ಕಸ್ಟಡಿ ಪೆರೋಲ್' ನೀಡಲಾಗಿತ್ತು.
ವಿವಾಹದ ವಿಧಿವಿಧಾನಗಳು ಮುಗಿದ ನಂತರ, ಅಪರಾಧಿಯನ್ನು ಮತ್ತೆ ಜೈಲಿಗೆ ಕರೆದೊಯ್ಯಲಾಯಿತು.
ಕಾಂಬೋಡಿಯಾದ ವಧು
ವಧು ಮೆಟಾ ಚಾನ್ ಅವರು ಕಾಂಬೋಡಿಯಾದವರಾಗಿರುವುದರಿಂದ ಈ ವಿವಾಹವು ಸುದ್ದಿಯಲ್ಲಿದೆ.
ಪರೋಲ್‌ನಲ್ಲಿದ್ದಾಗ ಕಾಂಬೋಡಿಯಾಗೆ ಪರಾರಿಯಾಗಿದ್ದ ವೇಳೆ ಧಿಲ್ಲಾ, ಮೆಟಾ ಚಾನ್ ಅವರನ್ನು ಭೇಟಿಯಾಗಿದ್ದು, ನಂತರ ಅವರಿಬ್ಬರೂ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಅವರಿಗೆ ನಾಲ್ವರು ಮಕ್ಕಳಿದ್ದಾರೆ.
ಚಾನ್ ಮದುವೆಗಾಗಿ ತಮ್ಮ ಮೂವರು ಮಕ್ಕಳೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. ನಾಲ್ಕನೆಯ ಮಗು ಕಾಂಬೋಡಿಯಾದಲ್ಲೇ ಉಳಿದುಕೊಂಡಿದೆ.
ಮೇನ್‌ಪಾಲ್ ಧಿಲ್ಲಾ ವಿರುದ್ಧ ಕೊಲೆ ಸೇರಿದಂತೆ ಒಟ್ಟು 22 ಪ್ರಕರಣಗಳು ದಾಖಲಾಗಿವೆ.
2007 ಮತ್ತು 2010ರಲ್ಲಿ ದಾಖಲಾದ ಮೂರು ಪ್ರಕರಣಗಳಲ್ಲಿ ಅಪರಾಧಿಯೆಂದು ಸಾಬೀತಾದ ನಂತರ, ಧಿಲ್ಲಾ ಹಿಸಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದು, ಜೈಲಿನಲ್ಲಿರುವಾಗಲೇ ವ್ಯಕ್ತಿಯೊಬ್ಬರನ್ನು ಕೊಂದ ಆರೋಪವೂ ಅವರ ಮೇಲಿದೆ.
ಜುಲೈ 2018ರಲ್ಲಿ ಆರು ವಾರಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಧಿಲ್ಲಾ, 'ಸೋನು ಕುಮಾರ್' ಎಂಬ ನಕಲಿ ಗುರುತನ್ನು ಬಳಸಿಕೊಂಡು ದೇಶದಿಂದ ಪರಾರಿಯಾಗಿದ್ದನು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



