ಆಂಧ್ರ ಮಹಿಳೆಯ ಹೊಟ್ಟೆಯಿಂದ 14 ಪೆನ್ನು, 5 ಸ್ಪೂನ್ ಸೇರಿ ಹಲವು ವಸ್ತುಗಳನ್ನು ಹೊರತೆಗೆದ ವೈದ್ಯರು!
ಮಾತಾಶ್ರೀ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞ ಪಿ. ರಾಮಚಂದ್ರ ರೆಡ್ಡಿ ಅವರು ಭಾನುವಾರ ಪತ್ರಿಕಾಗೋಷ್ಠಿ ನಡೆಸಿ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮಹಿಳೆಯ ಹೊಟ್ಟೆಯಿಂದ 14 ಪೆನ್ನುಗಳು, ಐದು ಮರದ ಚಮಚಗಳು ಮತ್ತು ಒಂದು ಮೇಣದಬತ್ತಿಯನ್ನು ಹೊರತೆಗೆಯಲಾಗಿದೆ ಎಂದು ಹೇಳಿದರು.

ನರಸರಾವ್‌ಪೇಟೆ: ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ನರಸರಾವ್‌ಪೇಟೆಯಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯರು, 33 ವರ್ಷದ ಮಹಿಳಾ ರೋಗಿಯ ಹೊಟ್ಟೆಯಿಂದ 14 ಪೆನ್ನು, ಐದು 5 ಸ್ಪೂನ್ ಸೇರಿ ಹಲವಾರು ವಸ್ತುಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಮಾತಾಶ್ರೀ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞ ಪಿ. ರಾಮಚಂದ್ರ ರೆಡ್ಡಿ ಅವರು ಭಾನುವಾರ ಪತ್ರಿಕಾಗೋಷ್ಠಿ ನಡೆಸಿ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮಹಿಳೆಯ ಹೊಟ್ಟೆಯಿಂದ 14 ಪೆನ್ನುಗಳು, ಐದು ಮರದ ಚಮಚಗಳು ಮತ್ತು ಒಂದು ಮೇಣದಬತ್ತಿಯನ್ನು ಹೊರತೆಗೆಯಲಾಗಿದೆ ಎಂದು ಹೇಳಿದರು.
"ಹೊಟ್ಟೆ ನೋವು ಹಾಗೂ ಎದೆನೋವಿನಿಂದ ಬಳಲುತ್ತಿದ್ದ ನರಸರಾವ್‌ಪೇಟೆ ಮಂಡಲದ ಪೆಟ್ಲುರಿವರಿಪಲೆಂ ಗ್ರಾಮದ ವಿವಾಹಿತ ಮಹಿಳೆಯನ್ನು ಶನಿವಾರ ಅವರ ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ರೋಗನಿರ್ಣಯ ಪರೀಕ್ಷೆಗಳ ನಂತರ, ಅವರ ಹೊಟ್ಟೆಯಲ್ಲಿ ಪೆನ್ನುಗಳು, ಒಂದು ಮೇಣದಬತ್ತಿ ಮತ್ತು ಒಂದು ಚಮಚ ಇರುವುದು ದೃಢಪಟ್ಟಿತು" ಎಂದು ರೆಡ್ಡಿ ತಿಳಿಸಿದ್ದಾರೆ.
ತಕ್ಷಣ ವೈದ್ಯರು ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ (Laparoscopic surgery) ನಡೆಸಿ, 14 ಪ್ಲಾಸ್ಟಿಕ್ ಪೆನ್ನುಗಳು, 5 ಮರದ ಚಮಚಗಳು ಹಾಗೂ 1 ಮೇಣದಬತ್ತಿಯನ್ನು ಯಶಸ್ವಿಯಾಗಿ ಹೊರತೆಗೆದಿರುವುದಾಗಿ ಅವರು ಹೇಳಿದ್ದಾರೆ.
ಮಹಿಳೆಯ ತಂದೆ ನೋಮುಲ ಹನುಮಂತರಾವ್ ಅವರ ಪ್ರಕಾರ, ಆಕೆ ಕಳೆದ 10 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುತ್ತಾಳೆ. ಎರಡು ತಿಂಗಳ ಹಿಂದೆಯಷ್ಟೇ ಪತಿ ಆಕೆಗೆ ವಿಚ್ಛೇದನ ನೀಡಿರುತ್ತಾನೆ. ಇದೇ ಮಾನಸಿಕ ಖಿನ್ನತೆ ಮತ್ತು ಒತ್ತಡದಿಂದ ಆಕೆ ಈ ವಸ್ತುಗಳನ್ನು ನುಂಗಿರಬಹುದು ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



