ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಗ್ರಾನೈಟ್ ಉದ್ಯಮಿ, ಜೆಮ್ ಗ್ರೂಪ್ ಅಧ್ಯಕ್ಷ ವೀರಮಣಿ ಬಂಧನ; ಪೆನ್ ಡ್ರೈವ್‌ನಿಂದ ಬಯಲಾಯಿತು ಹೀನ ಕೃತ್ಯ!
ವೀರಮಣಿ ಮತ್ತು ಅವರ ಸಹಚರರಾದ ಶಾಂತಿ ಹಾಗೂ ಅವರ ಪತಿ ಮಹೇಂದ್ರ ಸಿಂಹನ್ ಅವರನ್ನು ಬಂಧಿಸಿರುವುದಾಗಿ ಚೆನ್ನೈ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚೆನ್ನೈ: ಹಲವು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಚೆನ್ನೈ ಮೂಲದ ಗ್ರಾನೈಟ್ಸ್ ಉದ್ಯಮಿ ಹಾಗೂ ಜೆಮ್ ಗ್ರೂಪ್‌ನ ಅಧ್ಯಕ್ಷ ಆರ್. ವೀರಮಣಿ ಮತ್ತು ಇತರ ಇಬ್ಬರನ್ನು ಬಂಧಿಸಲಾಗಿದೆ.
ವೀರಮಣಿ ಮತ್ತು ಅವರ ಸಹಚರರಾದ ಶಾಂತಿ ಹಾಗೂ ಅವರ ಪತಿ ಮಹೇಂದ್ರ ಸಿಂಹನ್ ಅವರನ್ನು ಬಂಧಿಸಿರುವುದಾಗಿ ಚೆನ್ನೈ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಚೆನ್ನೈ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು, ಅಕ್ಟೋಬರ್ 6, 2025 ರಂದು ಆಂಟಿ-ವೈಸ್ ಸ್ಕ್ವಾಡ್‌ನ ಇನ್ಸ್‌ಪೆಕ್ಟರ್ ಭೇಟಿ ಮಾಡಿ, ಅವರ ಕಚೇರಿಯಲ್ಲಿ ಕಚೇರಿಯಲ್ಲಿ ಪೆನ್ ಡ್ರೈವ್ ಹಸ್ತಾಂತರಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಪೆನ್ ಡ್ರೈವ್‌ನಲ್ಲಿ ವೀರಮಣಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಅಪರಾಧ ಎಸಗುತ್ತಿರುವ ದೃಶ್ಯಗಳಿವೆ ಎಂದು ಆ ವ್ಯಕ್ತಿ ಹೇಳಿರುವುದಾಗಿ ವರದಿಯಾಗಿದೆ.
ವಿಡಿಯೋವನ್ನು ಪರಿಶೀಲಿಸಿದ ನಂತರ, ಪೊಲೀಸರು ಅಕ್ಟೋಬರ್ 7, 2025 ರಂದು ಕೇಂದ್ರ ಅಪರಾಧ ವಿಭಾಗದ ಆಂಟಿ-ವೈಸ್ ಸ್ಕ್ವಾಡ್‌ನಲ್ಲಿ ಪ್ರಕರಣ ದಾಖಲಿಸಿದ್ದರು.
ತನಿಖೆಯ ಸಮಯದಲ್ಲಿ, ವಿಡಿಯೋದಲ್ಲಿ ಕಾಣುವ ವ್ಯಕ್ತಿಯನ್ನು ವೀರಮಣಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೀರಮಣಿ ತೇನಾಂಪೇಟೆಯಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದು ಅದರ ನಿರ್ವಹಣೆಯನ್ನು ಶಾಂತಿ ಮತ್ತು ಅವರ ಪತಿ ಮಹೇಂದ್ರ ಸಿಂಹನ್ ಅವರಿಗೆ ವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹಲವಾರು ಅಪ್ರಾಪ್ತ ಬಾಲಕಿಯರನ್ನು ಮನೆಗೆ ಕರೆತಂದು ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ತನಿಖೆಯ ಸಮಯದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಮತ್ತೊಂದು ವಿಡಿಯೋವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಮೂವರು ಆರೋಪಿಗಳ ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗಿದ್ದು, ಈ ವೇಳೆ ಹುಡುಗಿಯರು ಮತ್ತು ಮಹಿಳೆಯರ ಫೋಟೋಗಳು ಹಾಗೂ ಇತರ ಪ್ರಮುಖ ಪುರಾವೆಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ವೀರಮಣಿ, ಶಾಂತಿ ಮತ್ತು ಮಹೇಂದ್ರ ಸಿಂಹನ್ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶಾಂತಿ ಮತ್ತು ಮಹೇಂದ್ರ ಸಿಂಹನ್ ಅಪರಾಧಿಗೆ ಸಹಾಯ ಮಾಡಿದ್ದಾರೆ ಮತ್ತು ಕೃತ್ಯವನ್ನು ಮರೆಮಾಚಲು ಸಹಾಯ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣ ದಾಖಲಾಗಿ ಸುಮಾರು ಒಂದು ವರ್ಷದ ನಂತರ ಮತ್ತು ಪೋಕ್ಸೊ ನ್ಯಾಯಾಲಯವು ಪ್ರಕರಣವನ್ನು ಮುಚ್ಚಲು ಅನುಮತಿ ನೀಡಲು ನಿರಾಕರಿಸಿದ ನಂತರ ಆರೋಪಿಗಳನ್ನು ಬಂಧಿಸಲಾಗಿದೆ.
ಅಕ್ಟೋಬರ್ 2025 ರಲ್ಲಿ ಪ್ರಕರಣ ದಾಖಲಾಗಿದ್ದರೂ, ಮೂವರು ಆರೋಪಿಗಳನ್ನು ಮೊದಲೇ ಏಕೆ ಬಂಧಿಸಲಿಲ್ಲ ಎಂಬುದನ್ನು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



