ದೇಶ

ಆಡಳಿತಗಾರರು ಕೊಲೆಗಾರರಾಗಿದ್ದಾರೆ, BJP ನಾಚಿಕೆಪಡಬೇಕು: ಸೋದರಳಿಯ ಅಭಿಷೇಕ್ ಮೇಲಿನ ದಾಳಿ ಖಂಡಿಸಿದ ಮಮತಾ!

ಸೋನಾರ್ಪುರದಲ್ಲಿ ಟಿಎಂಸಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿಯನ್ನು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ.

ಆಡಳಿತಗಾರರು ಕೊಲೆಗಾರರಾಗಿದ್ದಾರೆ, BJP ನಾಚಿಕೆಪಡಬೇಕು: ಸೋದರಳಿಯ ಅಭಿಷೇಕ್ ಮೇಲಿನ ದಾಳಿ ಖಂಡಿಸಿದ ಮಮತಾ!
ಮಮತಾ ಬ್ಯಾನರ್ಜಿ — TNIE
Published On :

ಕೋಲ್ಕತ್ತಾ: ಸೋನಾರ್ಪುರದಲ್ಲಿ ಟಿಎಂಸಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿಯನ್ನು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದು ಈ ಘಟನೆಯ ಹಿಂದೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಕೈವಾಡವಿದೆ ಎಂದು ಆರೋಪಿಸಿದರು. ಚುನಾವಣಾ ನಂತರದ ಹಿಂಸಾಚಾರದ ಬಲಿಪಶುಗಳ ಕುಟುಂಬಗಳನ್ನು ಭೇಟಿ ಮಾಡಲು ಅಭಿಷೇಕ್ ಬ್ಯಾನರ್ಜಿ ದಕ್ಷಿಣ 24 ಪರಗಣದ ಸೋನಾರ್ಪುರ್ ಪ್ರದೇಶಕ್ಕೆ ಹೋಗಿದ್ದರು. ಅಲ್ಲಿ ಸ್ಥಳೀಯರು ಅವರ ಮೇಲೆ ಹಲ್ಲೆ ನಡೆಸಿದರು. ಅಪರಿಚಿತ ವ್ಯಕ್ತಿಗಳು ಸಂಸದರ ಮೇಲೆ ಕಲ್ಲು, ಬೂಟು ಮತ್ತು ಮೊಟ್ಟೆಗಳನ್ನು ಎಸೆದು ಹಲ್ಲೆ ಮಾಡಲು ಸಹ ಪ್ರಯತ್ನಿಸಿದರು. ಜನರು ಅಭಿಷೇಕ್ ವಿರುದ್ಧ 'ಕಳ್ಳ, ಕಳ್ಳ' ಎಂದು ಕೂಗಿದರು.

ಘಟನೆಯ ನಂತರ, ಮಮತಾ ಬ್ಯಾನರ್ಜಿ ಕೋಲ್ಕತ್ತಾದ ಅಪೋಲೋ ಆಸ್ಪತ್ರೆಗೆ ತೆರಳಿದ್ದು ಅಭಿಷೇಕ್ ಬ್ಯಾನರ್ಜಿ ಆರೋಗ್ಯ ವಿಚಾರಿಸಿದರು. ಆಡಳಿತಗಾರರು ಕೊಲೆಗಾರರಾಗಿದ್ದಾರೆ, ಬಿಜೆಪಿ ನಾಚಿಕೆಪಡಬೇಕು ಎಂದು ಮಮತಾ ಬ್ಯಾನರ್ಜಿ X ನಲ್ಲಿ ಬರೆದುಕೊಂಡಿದ್ದಾರೆ. ದಾಳಿಯ ವೀಡಿಯೊ ಕಾಣಿಸಿಕೊಂಡ ಸ್ವಲ್ಪ ಸಮಯದ ನಂತರ ಮಾಜಿ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ.

ಪ್ರತಿಭಟನಾಕಾರರು ತೃಣಮೂಲ ಪ್ರಧಾನ ಕಾರ್ಯದರ್ಶಿಯನ್ನು ಗುರಿಯಾಗಿಸಿಕೊಂಡಿರುವುದನ್ನು ವೀಡಿಯೊ ತೋರಿಸುತ್ತದೆ. ಈ ಘಟನೆ ರಾಜಕೀಯ ಪ್ರೇರಿತ ಎಂದು ತೃಣಮೂಲ ನಾಯಕರು ಆರೋಪಿಸಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಭೇಟಿಗಳನ್ನು ಅಡ್ಡಿಪಡಿಸಲು ಬಿಜೆಪಿ ಈ ದಾಳಿಯನ್ನು ಆಯೋಜಿಸಿದೆ ಎಂದು ಆರೋಪಿಸಿದ್ದಾರೆ.

ಏತನ್ಮಧ್ಯೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ. ಸೋನಾರ್ಪುರದಲ್ಲಿ ಚುನಾವಣಾ ನಂತರದ ಹಿಂಸಾಚಾರದಿಂದ ಹಾನಿಗೊಳಗಾದ ಕುಟುಂಬಗಳನ್ನು ಭೇಟಿ ಮಾಡಲು ತೆರಳುತ್ತಿದ್ದ ಅಭಿಷೇಕ್ ಬ್ಯಾನರ್ಜಿ ಅವರ ಮೇಲಿನ ದಾಳಿ ಅತ್ಯಂತ ಕಳವಳಕಾರಿ ಎಂದು ಅವರು ಹೇಳಿದರು. ಪ್ರಮುಖ ವಿರೋಧ ಪಕ್ಷದ ನಾಯಕರಿಗೆ ಸಾಕಷ್ಟು ಪೊಲೀಸ್ ರಕ್ಷಣೆ ಇಲ್ಲದಿರುವುದು ಬಿಜೆಪಿಯ ಸೇಡು ಮತ್ತು ದಬ್ಬಾಳಿಕೆಯ ರಾಜಕೀಯವನ್ನು ಪ್ರತಿಬಿಂಬಿಸುತ್ತದೆ ಎಂದು ಖರ್ಗೆ ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.