El Nino ಅಪಾಯ: ದುರ್ಬಲ ಮಾನ್ಸೂನ್‌ಗೆ ಸಿದ್ಧರಾಗುವಂತೆ ರಾಜ್ಯಗಳಿಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಸೂಚನೆ!
El Nino ಪ್ರಭಾವದ ಸಂಭಾವ್ಯತೆ ಮತ್ತು ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಮಾನ್ಸೂನ್ ಬಗ್ಗೆ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಬೆನ್ನಲ್ಲೇ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಗೆ ಸಿದ್ಧರಾಗುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸೂಚಿಸಿದ್ದಾರೆ.

El Nino ಪ್ರಭಾವದ ಸಂಭಾವ್ಯತೆ ಮತ್ತು ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಮಾನ್ಸೂನ್ ಬಗ್ಗೆ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಬೆನ್ನಲ್ಲೇ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಗೆ ಸಿದ್ಧರಾಗುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸೂಚಿಸಿದ್ದಾರೆ. ಯಾವುದೇ ಸಂಭವನೀಯತೆಯನ್ನು ಪರಿಹರಿಸಲು ಕೃಷಿ ಸಚಿವಾಲಯವು ಆಕಸ್ಮಿಕ ಯೋಜನೆಗಳನ್ನು ರೂಪಿಸುತ್ತಿದೆ. ಜೂನ್‌ನಲ್ಲಿ ನೈಋತ್ಯ ಮಾನ್ಸೂನ್‌ನೊಂದಿಗೆ ಪ್ರಾರಂಭವಾಗುವ ಮುಂಬರುವ ಖಾರಿಫ್ ಋತುವಿನಲ್ಲಿ ಬೇಡಿಕೆಯನ್ನು ಪೂರೈಸಲು ಬೀಜಗಳು ಮತ್ತು ರಸಗೊಬ್ಬರಗಳ ಸಾಕಷ್ಟು ಲಭ್ಯತೆ ಇದೆ ಎಂದರು.
ರಾಷ್ಟ್ರೀಯ ಕೃಷಿ ಸಮ್ಮೇಳನ - ಖಾರಿಫ್ ಅಭಿಯಾನ 2026ರ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಎಲ್-ನಿನೋ ಅಪಾಯದ ಕುರಿತು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ನಮಗೆ ಈಗ ಆ ಬಗ್ಗೆ ಖಚಿತವಿಲ್ಲ. ಆದರೆ ಅಂತಹ ಪರಿಸ್ಥಿತಿ ಉದ್ಭವಿಸಿದರೇ ಮಾನ್ಸೂನ್‌ನಲ್ಲಿ ಮಳೆ ವಿಳಂಬವಾದರೇ ಅದನ್ನು ಎದುರಿಸಲು ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದರು. ಎಲ್ ನಿನೋ ಎಂಬುದು ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ನೀರಿನ ಅಸಹಜ ತಾಪಮಾನದಿಂದ ಉಂಟಾಗುವ ಹವಾಮಾನ ಮಾದರಿಯಾಗಿದ್ದು, ಇದು ಜಾಗತಿಕ ಹವಾಮಾನಕ್ಕೆ ಅಡ್ಡಿಪಡಿಸುತ್ತದೆ. ಇದು ಸಾಮಾನ್ಯವಾಗಿ ದುರ್ಬಲ ಮಾನ್ಸೂನ್ ಮತ್ತು ಭಾರತದಲ್ಲಿ ಬರ ಪರಿಸ್ಥಿತಿಗಳಿಗೆ ಕಾರಣವಾಗಬಹುದು.
ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸಲು ಸಚಿವಾಲಯ ಸಂಪೂರ್ಣವಾಗಿ ಸಿದ್ಧವಾಗಿದೆ. ಕಡಿಮೆ ಮಳೆ ಅಥವಾ ಇತರ ಸವಾಲಿನ ಪರಿಸ್ಥಿತಿಗಳಿಗೆ ಜಿಲ್ಲಾ ಮಟ್ಟದಲ್ಲಿ ಸಿದ್ಧರಾಗಿರಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ ಎಂದರು. ಪ್ರಸ್ತುತ ಸನ್ನಿವೇಶದ ಹಿನ್ನೆಲೆಯಲ್ಲಿ, ಜೂನ್ 1ರಂದು ಸಹ ಮಾನ್ಸೂನ್ ಆರಂಭಕ್ಕೆ ಪರಿಸ್ಥಿತಿಗಳು ಅನುಕೂಲಕರವಾಗಿಲ್ಲ. ಗಾಳಿ ಪ್ರಬಲವಾಗಿದ್ದರೇ ಈ ಹೊತ್ತಿಗೆ ಇಡೀ ಸಮಭಾಜಕ ಪ್ರದೇಶ ಮತ್ತು ನೈಋತ್ಯ ಕರಾವಳಿಯಲ್ಲಿ ಮಳೆಯಾಗುತ್ತಿತ್ತು. ಆದರೆ ಗಾಳಿ ಈಗ ದುರ್ಬಲವಾಗಿದೆ ಎಂದು ಭವಿಷ್ಯ ನುಡಿದ ಭಾರತೀಯ ಹವಾಮಾನ ಇಲಾಖೆಯ ಇತ್ತೀಚಿನ ಮುನ್ಸೂಚನೆಗೆ ಅವರು ಪ್ರತಿಕ್ರಿಯಿಸಿದರು.
ಒಟ್ಟು 173 ಲಕ್ಷ ಕ್ವಿಂಟಾಲ್‌ಗಳ ಅಗತ್ಯತೆ ಇದ್ದು ಪ್ರಸ್ತುತ 192 ಲಕ್ಷ ಕ್ವಿಂಟಾಲ್‌ಗಳು ಲಭ್ಯವಿದೆ. ರಾಜ್ಯಗಳು ರೈತರಿಗೆ ಸಕಾಲಿಕ ವಿತರಣೆಯನ್ನು ಖಚಿತಪಡಿಸಿಕೊಳ್ಳುವಂತೆ ಕೇಳಲಾಗಿದೆ. ಖಾರಿಫ್ ಋತುವಿನ ಒಟ್ಟು ಬೇಡಿಕೆ 390 ಲಕ್ಷ ಟನ್ ಆಗಿದ್ದು, ರಸಗೊಬ್ಬರಗಳ ದಾಸ್ತಾನು ಪ್ರಸ್ತುತ 200 ಲಕ್ಷ ಟನ್‌ಗಳಷ್ಟಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



