ದೇಶ

ಘೋರ ದುರಂತ: ಬಾಬೇಸಿಯಾ ಸೋಂಕಿನಿಂದ ಎಂಟು ಸಿಂಹದ ಮರಿಗಳ ಸಾವು!

ಸೋಂಕು ಹರಡುವುದನ್ನು ತಡೆಗಟ್ಟಲು, ಸೋಂಕು ವರದಿಯಾದ ಪ್ರದೇಶಗಳ 10 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಸಿಂಹಗಳನ್ನು ಅಧಿಕಾರಿಗಳು ಪ್ರತ್ಯೇಕಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಘೋರ ದುರಂತ: ಬಾಬೇಸಿಯಾ ಸೋಂಕಿನಿಂದ ಎಂಟು ಸಿಂಹದ ಮರಿಗಳ ಸಾವು!
ಸಾಂದರ್ಭಿಕ ಚಿತ್ರ
Published On :

ಅಹಮದಾಬಾದ್: ಗುಜರಾತ್‌ನ ಗಿರ್ ಸೋಮನಾಥ್ ಮತ್ತು ಅಮ್ರೇಲಿ ಜಿಲ್ಲೆಗಳಲ್ಲಿ ಶಂಕಿತ 'ಬಾಬೇಸಿಯಾ' ಸೋಂಕಿನಿಂದ ಎಂಟು ಸಿಂಹದ ಮರಿಗಳು ಸಾವನ್ನಪ್ಪಿವೆ ಎಂದು ರಾಜ್ಯ ಅರಣ್ಯ ಸಚಿವ ಅರ್ಜುನ್ ಮೋಧ್ವಾಡಿಯಾ ಅವರು ಶುಕ್ರವಾರ ತಿಳಿಸಿದ್ದಾರೆ.

ಸೋಂಕು ಹರಡುವುದನ್ನು ತಡೆಗಟ್ಟಲು, ಸೋಂಕು ವರದಿಯಾದ ಪ್ರದೇಶಗಳ 10 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಸಿಂಹಗಳನ್ನು ಅಧಿಕಾರಿಗಳು ಪ್ರತ್ಯೇಕಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

"ಬಾಬೇಸಿಯಾ ಸಂಬಂಧಿತ ಶಂಕಿತ ಪ್ರಕರಣಗಳಲ್ಲಿ, ಎಂಟು ಸಿಂಹದ ಮರಿಗಳ ಸಾವು ಬೆಳಕಿಗೆ ಬಂದಿದೆ" ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.

ಪರಾವಲಂಬಿ ಕಾಯಿಲೆಯಾದ ಬಾಬೇಸಿಯಾ, ಉಣ್ಣಿಗಳ ಮೂಲಕ ಹರಡುತ್ತದೆ ಮತ್ತು ಪೀಡಿತ ಪ್ರಾಣಿಗಳಲ್ಲಿ ದೌರ್ಬಲ್ಯ, ಕೆಮ್ಮು ಹಾಗೂ ಮೂಗಿನಿಂದ ರಕ್ತ ಸ್ರಾವವನ್ನು ಉಂಟುಮಾಡಬಹುದು.

ಗಿರ್ ಅಭಯಾರಣ್ಯದ ಹೊರಗಿನ ಕಂದಾಯ ಪ್ರದೇಶಗಳಲ್ಲಿ, ವಿಶೇಷವಾಗಿ ಗಿರ್ ಸೋಮನಾಥ್‌ನ ಗಿರ್ ಗಧಾಡ ಮತ್ತು ಅಮ್ರೇಲಿ ಜಿಲ್ಲೆಗಳ ಬಾಬ್ರಾ ಕೋಟ್‌ನಲ್ಲಿ ಶಂಕಿತ ಬಾಬೇಸಿಯಾ ಸೋಂಕಿನಿಂದ ಸಿಂಹದ ಮರಿಗಳ ಸಾವು ವರದಿಯಾಗಿದೆ ಎಂದು ಅವರು ಹೇಳಿದ್ದಾರೆ.

ಪಶುವೈದ್ಯಕೀಯ ವೈದ್ಯರ ತಂಡವು, ಮೃತ ಮರಿಗಳ ಮಾದರಿಗಳನ್ನು ಸಂಗ್ರಹಿಸಿ, ಅವುಗಳನ್ನು ಗುಜರಾತ್ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಮೋಧ್ವಾಡಿಯಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.