I Love India, I Love Modi: ಭಾರತ ನನ್ನನ್ನ 100% ನಂಬಬಹುದು- ಡೊನಾಲ್ಡ್ ಟ್ರಂಪ್
"ಭಾರತಕ್ಕೆ ಸಹಾಯ ಬೇಕಾದರೆ, ಎಲ್ಲಿಗೆ ಕರೆ ಮಾಡಬೇಕೆಂದು ಅವರಿಗೆ ತಿಳಿದಿದೆ. ಅವರು ಇಲ್ಲಿಯೇ ಕರೆ ಮಾಡುತ್ತಾರೆ" ಎಂದು ಟ್ರಂಪ್ ಹೇಳಿದ್ದಾರೆ.

ನವದೆಹಲಿ: ಅಮೆರಿಕದ 250 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದಲ್ಲಿರುವ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಅವರಿಗೆ ಅಚ್ಚರಿಯ ದೂರವಾಣಿ ಕರೆ ಮಾಡಿ, ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಸಂದೇಶ ನೀಡಿದ್ದಾರೆ.
ನಾನು ಭಾರತವನ್ನು, ಪ್ರಧಾನಿ ಮೋದಿಯನ್ನು ಪ್ರೀತಿಸುತ್ತೇನೆ. ಭಾರತ ಬಯಸಿದ್ದೆಲ್ಲವೂ ಅವರಿಗೆ ಸಿಗುತ್ತದೆ, ಭಾರತ ನನ್ನನ್ನ 100% ನಂಬಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ದೂರವಾಣಿ ಕರೆಯಲ್ಲಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಉದ್ದೇಶಿಸಿ ಮಾತನಾಡಿದ ಗೋರ್, ಟ್ರಂಪ್ಗೆ ಕರೆ ಮಾಡಿ, ರಾಜತಾಂತ್ರಿಕರು, ಅಧಿಕಾರಿಗಳು ಮತ್ತು ವ್ಯಾಪಾರ ನಾಯಕರನ್ನು ಪ್ರೇಕ್ಷಕರ ಮುಂದೆ ಸ್ಪೀಕರ್ಫೋನ್ನಲ್ಲಿ ಕರೆ ಮಾಡಿದರು. ಈ ವೇಳೆ ಟ್ರಂಪ್ ಭಾರತ, ಮೋದಿ ಅವರನ್ನು ಹೊಗಳಿದ್ದು, "ತಾವು ಭಾರತ ಮತ್ತು ಪ್ರಧಾನಿ ಮೋದಿಯನ್ನು ಪ್ರೀತಿಸುತ್ತೇವೆ" ಎಂದು ಹೇಳಿದ್ದಾರೆ.

ಶೀಘ್ರವೇ ನಮ್ಮ ದೇಶಕ್ಕೆ ಭೇಟಿ ಕೊಡಿ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ಪ್ರಧಾನಿ ಮೋದಿಗೆ ಮಾರ್ಕೊ ರುಬಿಯೊ ಆಹ್ವಾನ
"ಭಾರತಕ್ಕೆ ಸಹಾಯ ಬೇಕಾದರೆ, ಎಲ್ಲಿಗೆ ಕರೆ ಮಾಡಬೇಕೆಂದು ಅವರಿಗೆ ತಿಳಿದಿದೆ. ಅವರು ಇಲ್ಲಿಯೇ ಕರೆ ಮಾಡುತ್ತಾರೆ" ಎಂದು ಟ್ರಂಪ್ ಹೇಳಿದ್ದಾರೆ.
"ನಾವು ಚೆನ್ನಾಗಿ ಕೆಲಸ ಮಾಡುತ್ತಿದ್ದೇವೆ. ನಾವು ದಾಖಲೆಗಳನ್ನು ಸ್ಥಾಪಿಸುತ್ತಿದ್ದೇವೆ. ನಮ್ಮಲ್ಲಿ ದಾಖಲೆಯ ಆರ್ಥಿಕತೆ, ದಾಖಲೆಯ ಷೇರು ಮಾರುಕಟ್ಟೆ ಮತ್ತು ಭಾರತ ಪಡೆಯಲು ಬಯಸುವ ಯಾವುದಾದರೂ ವಿಷಯವಿದೆ. ನಾನು ಪ್ರಧಾನಿ ಮೋದಿ ಅವರ ದೊಡ್ಡ ಅಭಿಮಾನಿ" ಎಂದು ಟ್ರಂಪ್ ಹೇಳಿದ್ದಾರೆ..
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಟ್ರಂಪ್ ಶ್ಲಾಘಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


