ಅನ್ಯ ಧರ್ಮದ ವ್ಯಕ್ತಿಯ ಜೊತೆ ಸಂಬಂಧದ ಶಂಕೆ: ಮಗಳ ರುಂಡ, ದೇಹ ಕತ್ತರಿಸಿ ಕೊಲೆ ಮಾಡಿದ ತಂದೆ!
ಮೃತ ವ್ಯಕ್ತಿಯ ಕೈಗಳು ಮತ್ತು ಕಾಲುಗಳನ್ನು ಪಾಲಿಥಿನ್ ಚೀಲಗಳಲ್ಲಿ ಪ್ರತ್ಯೇಕವಾಗಿ ಪ್ಯಾಕ್ ಮಾಡಲಾಗಿತ್ತು.

ನವದೆಹಲಿ: ಅಂತರ್ಧರ್ಮೀಯ ಸಂಬಂಧದ ಶಂಕೆಯ ಮೇಲೆ ವ್ಯಕ್ತಿಯೋರ್ವ ತನ್ನ ಮಗಳನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕುಶೀನಗರದಲ್ಲಿ ನಡೆದಿದೆ.
ವ್ಯಕ್ತಿ ತನ್ನ ಮಗಳನ್ನು ಹತ್ಯೆ ಮಾಡಿರುವುದೂ ಅಲ್ಲದೇ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ತಲೆಯನ್ನು ಕೊಳಕ್ಕೆ ಮತ್ತು ಉಳಿದ ಭಾಗಗಳನ್ನು ರೈಲಿನ ಟ್ರಂಕಿನಲ್ಲಿ ಎಸೆದಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ.
ಕುಶಿನಗರ ನಿವಾಸಿ ಬಿಗ್ಗನ್ ಅನ್ಸಾರಿ, ಆತನ ಸಹೋದರಿ ನೂರ್ಜಹಾನ್ ಮತ್ತು ಭಾವ ಮೋಜಿಬುಲ್ಲಾ ಅನ್ಸಾರಿ - ಬಂಧಿತರಾಗಿದ್ದು, ಈತ ತನ್ನ ಸಂಬಂಧಿಕರ ಸಹಾಯದಿಂದ 15 ವರ್ಷದ ಮಗಳು ಶಾಬಾಳನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಖುಶಿನಾರ್‌ನ ಕೊಳದಲ್ಲಿ ತಲೆ ಪತ್ತೆಯಾಗಿದ್ದು, ಮೇ 17 ರಂದು 15114 ರ ರೈಲು ಸಂಖ್ಯೆ ಛಪ್ರಾ-ಗೋಮ್ತಿ ನಗರ ಎಕ್ಸ್‌ಪ್ರೆಸ್‌ನ ಎಸ್ -1 ಕೋಚ್‌ನಲ್ಲಿ ಮುಂಡ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೈಲು ಲಕ್ನೋದ ಗೋಮ್ತಿ ನಗರ ನಿಲ್ದಾಣವನ್ನು ತಲುಪಿದಾಗ ಸ್ವಚ್ಛಗೊಳಿಸುವ ಸಿಬ್ಬಂದಿಗೆ ಕಂಪಾರ್ಟ್‌ಮೆಂಟ್ ಒಳಗೆ ಅನುಮಾನಾಸ್ಪದ ಪೆಟ್ಟಿಗೆ ಮತ್ತು ಚೀಲ ಕಂಡುಬಂದಿದೆ.
ಮೃತ ವ್ಯಕ್ತಿಯ ಕೈಗಳು ಮತ್ತು ಕಾಲುಗಳನ್ನು ಪಾಲಿಥಿನ್ ಚೀಲಗಳಲ್ಲಿ ಪ್ರತ್ಯೇಕವಾಗಿ ಪ್ಯಾಕ್ ಮಾಡಲಾಗಿತ್ತು.
ಸತ್ತವರ ಕೈಗಳು ಮತ್ತು ಕಾಲುಗಳನ್ನು ಟ್ರಂಕಿನ ಹೊರಗೆ ರಕ್ತದ ಕಲೆಗಳು ಗೋಚರಿಸದಂತೆ ಆರೋಪಿಗಳು ದೇಹವನ್ನು ಎಚ್ಚರಿಕೆಯಿಂದ ಪ್ಯಾಕ್ ಮಾಡಿದ್ದಾರೆ ಎಂದು ಜಿಆರ್‌ಪಿ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



