'Cockroach is Back': ನಿರ್ಬಂಧ ಬೆನ್ನಲ್ಲೇ ಮತ್ತೊಂದು x ಅಕೌಂಟ್ ಆರಂಭ! Insta ಸ್ಥಗಿತಕ್ಕೆ ಪ್ರಯತ್ನ- ದೀಪ್ಕೆ ಆರೋಪ
ಈಗ ಎಕ್ಸ್ ಖಾತೆಯಲ್ಲಿ 'Cockroach Is Back' ಎಂಬ ಹೊಸ ಖಾತೆಯನ್ನು ಪ್ರಾರಂಭಿಸಿದ್ದೇನೆ. ಈ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರೆಸಲಾಗುವುದು ಎಂದು ಅದರ ಸಂಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದ್ದಾರೆ

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಗೆ ವಿರೋಧವಾಗಿ ಕಳೆದ ವಾರ ಆರಂಭವಾದ ಕಾಕ್ರೋಚ್ ಜನತಾ ಪಾರ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಭಾರತದಲ್ಲಿ ಕಾಕ್ರೋಚ್ ಜನತಾ ಪಕ್ಷದ X ಖಾತೆಯನ್ನು ತಡೆಹಿಡಿಯಲಾಗಿತ್ತು. ಆದರೆ, ಇದೀಗ Cockroach ಈಸ್ ಬ್ಯಾಕ್" ಎಂಬ ಹೆಸರಿನಲ್ಲಿ ಮತ್ತೊಂದು ಖಾತೆಯು ಕಾಣಿಸಿಕೊಂಡಿದೆ.
"ನಿನ್ನೆ ಖಾತೆಯನ್ನು ಹ್ಯಾಕ್ ಮಾಡಲು ಪ್ರಯತ್ನಗಳು ನಡೆದಿದ್ದರಿಂದ ಇದನ್ನು ನಿರೀಕ್ಷಿಸಲಾಗಿತ್ತು. ಆದರೆ ಇದು ಸರ್ಕಾರದ ಸ್ವಯಂ-ಗುರಿಯಾಗಿದೆ. ಈಗ ಎಕ್ಸ್ ಖಾತೆಯಲ್ಲಿ 'Cockroach Is Back' ಎಂಬ ಹೊಸ ಖಾತೆಯನ್ನು ಪ್ರಾರಂಭಿಸಿದ್ದೇನೆ. ಈ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರೆಸಲಾಗುವುದು ಎಂದು ಅದರ ಸಂಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದ್ದಾರೆ. ಇದನ್ನು ಪ್ರಾರಂಭಿಸಿದ ಒಂದು ಗಂಟೆಯ ನಂತರ, ಮಧ್ಯಾಹ್ನ 3:40 ರ ಹೊತ್ತಿಗೆ, "Cockroach ಈಸ್ ಬ್ಯಾಕ್" X ಖಾತೆಯು 16,800 ಫಾಲೋವರ್ಸ್ ಹೊಂದಿತು.
ದೀಪ್ಕೆ ಪ್ರಕಾರ ಕಾಕ್ರೋಚ್ ಜನತಾ ಪಾರ್ಟಿ(CJP) X ಖಾತೆ 201,000 ಫಾಲೋವರ್ಸ್ ಹೊಂದಿತ್ತು. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಯುವ ನಿರುದ್ಯೋಗಿ ಯುವಕರು 'ಜಿರಳೆಗಳಂತೆ' ಎಂದು ಟೀಕಿಸಿದ್ದರು. ಅವರಲ್ಲಿ ಕೆಲವರು ಮಾಧ್ಯಮಗಳಲ್ಲಿ, ಇನ್ನು ಕೆಲವರು ಸಾಮಾಜಿಕ ಮಾಧ್ಯಮದಲ್ಲಿದ್ದರೆ, ಇನ್ನು ಕೆಲವರು ಆರ್‌ಟಿಐ ಕಾರ್ಯಕರ್ತರಾಗಿದ್ದಾರೆ’ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮೇ 15 ರಂದು ಕಿಡಿಕಾರಿದ್ದರು.
ಅವರ ಹೇಳಿಕೆ ಖಂಡಿಸಿ ವಿಭಿನ್ನ ಹೆಸರಿನಲ್ಲಿ ಆರಂಭಿಸಿದ ಕಾಕ್ರೋಚ್ ಜನತಾ ಪಕ್ಷ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇದು ವೈರಲ್ ಆಗಿ, ರಾಜಕಾರಣಿಗಳು, ಕಾರ್ಯಕರ್ತರು, ಕಲಾವಿದರು ಮತ್ತು ಹೆಚ್ಚಿನ ಸಂಖ್ಯೆಯ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.
ಗುರುವಾರ ದೇಶದಲ್ಲಿ X ಖಾತೆ ಸ್ಥಗಿತವಾಗಿದ್ದರೂ ಅದರ Instagram ಪುಟವು ಸುಮಾರು 14.3 ಮಿಲಿಯನ್ ಫಾಲೋವರ್ಸ್ ಗಳೊಂದಿಗೆ ಸಕ್ರಿಯವಾಗಿದೆ. ಇನ್ನೂ ಹೆಚ್ಚುತ್ತಿದೆ. ಒಂದು Instagram ಪೋಸ್ಟ್ ನಲ್ಲಿ ಅದರ ಅನುಯಾಯಿಗಳನ್ನು ಬಿಜೆಪಿಯ ಅಧಿಕೃತ ಖಾತೆಯೊಂದಿಗೆ ಹೋಲಿಸಲಾಗಿದೆ. ಇದು ಸುಮಾರು 8.8 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ.

Cockroach Janta Party ಅಬ್ಬರ: ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರಿಂದ 'ಐ ಆಮ್ ಕಾಕ್ರೋಚ್' ಟೀ-ಶರ್ಟ್ ಬಿಡುಗಡೆ
ಕಾಕ್ರೋಚ್ ಹೆಸರಿನಲ್ಲಿ ಇತರ ಹಲವು ಖಾತೆಗಳನ್ನು ಎಕ್ಸ್ ನಲ್ಲಿ ತೆರೆಯಲಾಗಿದ್ದು, ಪ್ರತಿದಿನ ಸಾವಿರಾರು ಜನರು ಅದರ ಫಾಲೋವರ್ಸ್ ಆಗ್ತಿದ್ದಾರೆ. ಬಹುಶಃ ಇದು ಸರ್ಕಾರವನ್ನು ಹೆದರಿಸಿದೆ ಎಂದು ದೀಪ್ಕೆ ಆರೋಪಿಸಿದ್ದಾರೆ. Instagram ಖಾತೆಯನ್ನು ಹ್ಯಾಕ್ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಈ ಹಿಂದೆ ಆಮ್ ಆದ್ಮಿ ಪಕ್ಷ (AAP) ನೊಂದಿಗೆ ಸಂಬಂಧ ಹೊಂದಿದ್ದ ದೀಪ್ಕೆ ಗುರುವಾರ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ದಿ ಕಾಕ್ರೋಜ್ ಯೂತ್, ಕಾಕ್ರೋಜ್ ನ್ಯೂಸ್, ಐ ಆ್ಯಮ್ ಕಾಕ್ರೋಜ್, ಕಾಕ್ರೋಜ್ ಪಾರ್ಟಿ ಆಫ್ ಇಂಡಿಯಾ ಮತ್ತಿತರ ಹೆಸರಿನಲ್ಲಿ ಎಕ್ಸ್ ಖಾತೆಯನ್ನು ತೆರೆಯಲಾಗಿದ್ದು, ಮೀಮ್‌ಗಳನ್ನು ಬಳಸಿಕೊಂಡು ತೀವ್ರವಾಗಿ ಟೀಕೆ ಮಾಡಲಾಗುತ್ತಿದೆ. ನಿರುದ್ಯೋಗ, ನೀಟ್ ಪರೀಕ್ಷಾ ಪತ್ರಿಕೆ ಸೋರಿಕೆಯಂತಹ ಯುವ ಜನತೆಯ ಮೇಲಿನ ವಿಚಾರಗಳನ್ನು ಗುರಿಯಾಗಿಸಿಕೊಂಡು ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


