Tamil Nadu: ಯಾವುದೇ ಸಮಯದಲ್ಲಿ TVK ಸರ್ಕಾರ ಪತನ, ರೆಡಿಯಾಗಿರಿ; ಡಿಎಂಕೆ ಕಾರ್ಯಕರ್ತರಿಗೆ ಸ್ಟಾಲಿನ್ ಕರೆ!
ಬಾಹ್ಯ ಬೆಂಬಲ ನೀಡಿರುವ ಮಿತ್ರಪಕ್ಷಗಳಾದ ವಿಸಿಕೆ, ಸಿಪಿಐ, ಸಿಪಿಎಂ ಮತ್ತು ಐಯುಎಂಎಲ್ ಪಕ್ಷಗಳು ಬೆಂಬಲದಿಂದ ಹಿಂದೆ ಸರಿಯಲು ನಿರ್ಧರಿಸಿದರೆ ಸರ್ಕಾರ ಪತನ ಎನ್ನಲಾಗುತ್ತಿದೆ.

ಚೆನ್ನೈ: ಭಾರೀ ಜನಾದೇಶದೊಂದಿಗೆ ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿರುವ ನಟ ವಿಜಯ್ ನೇತೃತ್ವದ ಸರ್ಕಾರ "ಯಾವುದೇ ಸಮಯದಲ್ಲಿ ಪತನವಾಗಲಿದ್ದು, ಅವಧಿ ಪೂರ್ವ ಚುನಾವಣೆಗೆ ಸಿದ್ಧರಾಗಿ ಎಂದು ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
107 ಸ್ಥಾನಗಳನ್ನು ಹೊಂದಿರುವ ಟಿವಿಕೆ, ಮಿತ್ರಪಕ್ಷ ಕಾಂಗ್ರೆಸ್‌ನ ಐದು ಹಾಗೂ ಡಿಎಂಕೆ ಮಿತ್ರಪಕ್ಷಗಳ ನಾಲ್ಕು ಸದಸ್ಯರ ಬೆಂಬಲದೊಂದಿಗೆ ವಿಧಾನಸಭೆಯಲ್ಲಿ ಬಹುಮತ ಹೊಂದಿದೆ. ಕಳೆದ ವಾರ ವಿಶ್ವಾಸ ಮತಯಾಚನೆಯ ಸಮಯದಲ್ಲಿ ಸರ್ಕಾರಕ್ಕೆ ಮತ ಹಾಕಿದ 25 ಬಂಡಾಯ ಎಐಎಡಿಎಂಕೆ ಶಾಸಕರ ಬೆಂಬಲವನ್ನು ಮುಖ್ಯಮಂತ್ರಿ ಜೋಸೆಫ್ ವಿಜಯ್ ಹೊಂದಿದ್ದಾರೆ.
ಬಾಹ್ಯ ಬೆಂಬಲ ನೀಡಿರುವ ಮಿತ್ರಪಕ್ಷಗಳಾದ ವಿಸಿಕೆ, ಸಿಪಿಐ, ಸಿಪಿಎಂ ಮತ್ತು ಐಯುಎಂಎಲ್ ಪಕ್ಷಗಳು ಬೆಂಬಲದಿಂದ ಹಿಂದೆ ಸರಿಯಲು ನಿರ್ಧರಿಸಿದರೆ ಅಥವಾ ತಮಿಳುನಾಡು ಸ್ಪೀಕರ್ ಅಥವಾ ನ್ಯಾಯಾಲಯಗಳು ಅಂತಿಮವಾಗಿ ಬಂಡಾಯ ಎಐಎಡಿಎಂಕೆ ಶಾಸಕರನ್ನು ಅನರ್ಹಗೊಳಿಸಿದರೆ ರಾಜಕೀಯ ಅಸ್ಥಿರತೆ ಉಂಟಾಗಬಹುದು ಎಂದು ಡಿಎಂಕೆ ಮೂಲಗಳು ತಿಳಿಸಿವೆ.
ಹಾಲಿ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು ಮತ್ತು ಪಕ್ಷವು ಯಾವುದೇ ಸಮಯದಲ್ಲಿ ಚುನಾವಣೆಗೆ ಸಿದ್ಧವಾಗಿರಬೇಕು" ಎಂದು ಸ್ಟಾಲಿನ್ ತಮ್ಮ ಜಿಲ್ಲಾ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಹಿಂದಿನ ಚುನಾವಣಾ ಹಿನ್ನಡೆಗಳಿಂದ ಡಿಎಂಕೆ ಹೇಗೆ ಚೇತರಿಸಿಕೊಂಡಿದೆ ಎಂಬುದನ್ನು ನೆನಪಿಸಿಕೊಂಡಿದ್ದು, ತಮ್ಮ ಪಕ್ಷವು ಮತ್ತೆ ವಿಜಯಶಾಲಿಯಾಗುತ್ತದೆ. ಸೋಲು ತಾತ್ಕಾಲಿಕ. ಪ್ರಸ್ತುತ ಆಡಳಿತ ಯಾವಾಗ ಬೇಕಾದರೂ ಬೀಳಬಹುದು. ಸಿದ್ಧರಾಗಿರಿ. 2029 ರ ಲೋಕಸಭಾ ಚುನಾವಣೆಯ ಜೊತೆಗೆ ಮತ್ತೆ ವಿಧಾನಸಭಾ ಚುನಾವಣೆಗಳು ನಡೆಯುವ ಸಾಧ್ಯತೆಗಳಿವೆ. ನಾವು ಮತ್ತೆ ಗೆಲುವು ಸಾಧಿಸುತ್ತೇವೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಸೋಮವಾರ, ಡಿಎಂಕೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸ್ಟಾಲಿನ್, ತಮಿಳುನಾಡಿನಲ್ಲಿ ಸೂರ್ಯ (ಡಿಎಂಕೆ ಚಿಹ್ನೆ) ಎಂದಿಗೂ ಅಸ್ತಮಿಸುವುದಿಲ್ಲ. ವೈಫಲ್ಯದ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ನಾನು ಸ್ವೀಕರಿಸುತ್ತೇನೆ" ಎಂದು ಹೇಳಿದರು.

'ವಿಜಯ್ ನೇತೃತ್ವದ TVK ಸರ್ಕಾರ 6 ತಿಂಗಳು ಉಳಿಯಲ್ಲ, ಎಂಕೆ ಸ್ಟಾಲಿನ್ ಮುಖ್ಯಮಂತ್ರಿಯಾಗುತ್ತಾರೆ': ಡಿಎಂಕೆ ಶಾಸಕ
ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿರುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು. ವಿಜಯ್ ಅವರ ಟಿವಿಕೆ ಇದರಲ್ಲಿ ಬಹಳ ಮುಂದಿದೆ ಎಂದು ಮೌನವಾಗಿ ಸೂಚಿಸಿದರು. ನಾವು ಒಮ್ಮೆ ಚಹಾ ಅಂಗಡಿಗಳಲ್ಲಿ ಮಾತನಾಡುತ್ತಿದ್ದ ರಾಜಕೀಯವನ್ನು ಈಗ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಮಾತನಾಡಬೇಕು ಎಂದು ಸ್ಟಾಲಿನ್ ಹೇಳಿದರು.
ಚುನಾವಣಾ ಸೋಲಿನ ಹಿಂದಿನ ಕಾರಣಗಳನ್ನು ವಿಶ್ಲೇಷಿಸಲು ಮತ್ತು ಸಾರ್ವಜನಿಕರಿಂದ ನೇರ ಪ್ರತಿಕ್ರಿಯೆಯನ್ನು ಸಂಗ್ರಹಿಸಲು ಸ್ಟಾಲಿನ್ 36 ಸದಸ್ಯರ ಸಮಿತಿಯನ್ನು ಸಹ ರಚಿಸಿದ್ದಾರೆ. ಇದು ಪಕ್ಷವನ್ನು ತಳಮಟ್ಟದಲ್ಲಿ ಪುನರ್ ಸಂಘಟಿಸುವ ಪ್ರಯತ್ನವಾಗಿದೆ. ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ಎರಡೂ ದ್ರಾವಿಡ ಪ್ರತಿಸ್ಪರ್ಧಿಗಳನ್ನು ವಿರೋಧ ಪಕ್ಷಕ್ಕೆ ತಳ್ಳಿದೆ. ತಮಿಳುನಾಡಿನ ರಾಜಕಾರಣದಲ್ಲಿ ಅವರ 59 ವರ್ಷಗಳ ಪ್ರಾಬಲ್ಯವನ್ನು ಕೊನೆಗೊಳಿಸಿದೆ. ಆದಾಗ್ಯೂ, ಟಿವಿಕೆ ವಿಚಲಿತರಾಗಿಲ್ಲ ಮತ್ತು ಪೂರ್ಣ ಅವಧಿಗೆ ಉಳಿಯುವ ಸಂಖ್ಯೆಗಳ ಬಗ್ಗೆ ಅವರಿಗೆ ವಿಶ್ವಾಸವಿದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


