ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬಾರದ ಪುತ್ರನ ಬಗ್ಗೆ ಈ ಹಿಂದೆ ವಿಜಯ್ ಏನು ಹೇಳಿದ್ರು ಗೊತ್ತಾ?
ವಿಜಯ್ ತಮ್ಮ ರಾಜಕೀಯ ಜೀವನ ಆರಂಭಿಸುವ ಬಹಳ ಹಿಂದೆಯೇ, ತಮ್ಮ ಮಗನ ವೃತ್ತಿಜೀವನದ ಆಯ್ಕೆಗಳ ಬಗ್ಗೆ ಮಾತನಾಡಿದ್ದರು.

ಚೆನ್ನೈ: ತಮಿಳನಾಡು ಮುಖ್ಯಮಂತ್ರಿ ವಿಜಯ್ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ವಿಜಯ್ ಅವರ ವಿಚ್ಚೇದಿತ ಪತ್ನಿ ಸಂಗೀತಾ, ಮಗ ಸಂಜಯ್ ಮತ್ತು ಮಗಳು ದಿವ್ಯಾ ಹಾಜರಾಗಿರಲಿಲ್ಲ. ಇದು ಕುಟುಂಬದಲ್ಲಿನ ಬಿರುಕನ್ನು ಬಹಿರಂಗಗೊಳಿಸಿತು.
ವಿಜಯ್ ಅವರ ಚುನಾವಣಾ ಪ್ರಚಾರದಿಂದಲೂ ಅವರು ದೂರ ಉಳಿದಿದ್ದರು. ಆದಾಗ್ಯೂ, ವಿಜಯ್ ತಮ್ಮ ರಾಜಕೀಯ ಜೀವನ ಆರಂಭಿಸುವ ಬಹಳ ಹಿಂದೆಯೇ, ತಮ್ಮ ಮಗನ ವೃತ್ತಿಜೀವನದ ಆಯ್ಕೆಗಳ ಬಗ್ಗೆ ಮಾತನಾಡಿದ್ದರು. ಅದೇ ವೇಳೆ ಅವರ ಒಪ್ಪಿಗೆಯಿಲ್ಲದೆ ಅವರ ಫ್ಯಾನ್ ಬೇಸ್ ನ್ನು ರಾಜಕೀಯ ಪಕ್ಷವಾಗಿ ಬದಲಾಯಿಸಲು ಅವರ ತಂದೆ ಮಾಡಿದ ಪ್ರಯತ್ನದಿಂದ ಉಂಟಾದ ಜನರ ಕೆಂಗಣ್ಣಿನ ನಂತರ ತಮ್ಮ ತಂದೆ ಜೊತೆಗೆ ಆದ ಮನಸ್ತಾಪ ಕುರಿತು ಮಾತನಾಡಿದ್ದರು.
ಹೌದು. 2022 ರಲ್ಲಿ ಬೀಸ್ಟ್ ಚಿತ್ರದ ಪ್ರಚಾರದ ಸಮಯದಲ್ಲಿ, ಸನ್ ಟಿವಿಗಾಗಿ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಜೊತೆಗಿನ ಸಂದರ್ಶನದಲ್ಲಿ ಸಂಜಯ್ ಅವರನ್ನು ನಟನೆಯಲ್ಲಿ ಮುಂದುವರಿಸಲು ಬಯಸುತ್ತೀರಾ ಎಂದು ವಿಜಯ್ ಅವರನ್ನು ಕೇಳಲಾಗಿತ್ತು. ಆಗ ತಮ್ಮ ಮಗನ ವೃತ್ತಿಜೀವನದ ಆಯ್ಕೆ ಕುರಿತು ಮಾತನಾಡಿದ್ದ ವಿಜಯ್ , ಆತ ಏನು ಮಾಡಬೇಕೆಂದು ಆಯ್ಕೆ ಮಾಡಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ಹೊಂದಿರುವುದಾಗಿ ಹೇಳಿದ್ದರು.
ನಟನಾಗಲೂ ಸಂಜಯ್ ಗೆ ಇಷ್ಟವಿದೆಯೇ ಎಂಬುದರ ಬಗ್ಗೆ ಮಾತನಾಡಿದ ವಿಜಯ್, ಆತನ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ತಿಳಿದಿಲ್ಲ. ನಟನೆಗೆ ಬರುವಂತೆ ಆತನ ಮೇಲೆ ಎಂದಿಗೂ ಒತ್ತಡ ಹೇರಿಲ್ಲ.ಅದನ್ನು ಎಂದಿಗೂ ಮಾಡುವುದಿಲ್ಲ ಎಂದಿದ್ದರು.
ಅದು ಆತನ ಸಂಪೂರ್ಣ ಆಸಕ್ತಿ. ಒಂದು ವೇಳೆ ಆತ ನನ್ನ ಬೆಂಬಲ ಬಯಸಿದರೆ ಆತನನ್ನು ಬೆಂಬಲಿಸುತ್ತೇನೆ. ಇದು ಮಾಡು, ಅದು ಮಾಡಬೇಡ ಅಂತಾ ನಾನು ಏನನ್ನೂ ಹೇಳುವುದಿಲ್ಲ. ಆತ ಸಂಪೂರ್ಣವಾಗಿ ಸ್ವಾತಂತ್ರನಾಗಿದ್ದಾನೆ. ಆತನ ಚೊಚ್ಚಲ ಸಿನಿಮಾ ಮಾಡಲು ಅನೇಕ ನಿರ್ದೇಶಕರು ಸಂಪರ್ಕಿಸಿದರು. ಆದರೆ. ನಾನು ಆತನ ವಿವೇಚನಗೆ ಬಿಟ್ಟಿದ್ದೇನೆ. ಈ ಬಗ್ಗೆ ಒಂದು ದಿನ ಸಂಜಯ್ ಜೊತೆಗೆ ಮಾತನಾಡಿದಾಗ ಕೆಲವು ವರ್ಷ ನನಗೆ ತೊಂದರೆ ಮಾಡಬೇಡ, ಈಗ ಬೇಡ ಅಂತಾ ಹೇಳಿದ್ದ ಎಂದು ತಿಳಿಸಿದರು.
ಈ ಮಧ್ಯೆ ವಿಜಯ್ ಪತ್ನಿ ಸಂಗೀತಾ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಓರ್ವ ನಟಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ, ತ್ರಿಶಾ ಕೃಷ್ಣನ್ ಭಾನುವಾರ ನಡೆದ ಪ್ರಮಾಣವಚನ ಸಮಾರಂಭ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳಲ್ಲಿ ವಿಜಯ್ ಅವರೊಂದಿಗೆ ಕಾಣಿಸಿಕೊಂಡಿದ್ದು, ಅವರ ಸಂಬಂಧದ ಬಗ್ಗೆ ಹೆಚ್ಚಿನ ಕುತೂಹಲವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



