ದೇಶ

ಘೋರ ದುರಂತ: ಮಲಪ್ಪುರಂ ವ್ಯೂಪಾಯಿಂಟ್‌ನಲ್ಲಿ ಸಿಡಿಲು ಬಡಿದು ನಾಲ್ವರು ವಿದ್ಯಾರ್ಥಿಗಳು ಸಾವು

ಇಂದು ಸಂಜೆ ಪಂತಲ್ಲೂರು ಬೆಟ್ಟದಲ್ಲಿ ಈ ಭೀಕರ ಘಟನೆ ನಡೆದಿದ್ದು, ಒಟ್ಟು ಏಳು ವಿದ್ಯಾರ್ಥಿಗಳಿಗೆ ಸಿಡಿಲು ಬಡಿದಿದೆ.

ಘೋರ ದುರಂತ: ಮಲಪ್ಪುರಂ ವ್ಯೂಪಾಯಿಂಟ್‌ನಲ್ಲಿ ಸಿಡಿಲು ಬಡಿದು ನಾಲ್ವರು ವಿದ್ಯಾರ್ಥಿಗಳು ಸಾವು
ಪಂತಲ್ಲೂರು ಬೆಟ್ಟ
Published On :

ಮಲಪ್ಪುರಂ: ಕೇರಳದಲ್ಲಿ ದುರಂತ ಘಟನೆಯೊಂದರಲ್ಲಿ, ಮಂಗಳವಾರ ಮಲಪ್ಪುರಂ ಜಿಲ್ಲೆಯ ಮಂಕಡದಲ್ಲಿ ಸಿಡಿಲು ಬಡಿದು ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ.

ಇಂದು ಸಂಜೆ ಪಂತಲ್ಲೂರು ಬೆಟ್ಟದಲ್ಲಿ ಈ ಭೀಕರ ಘಟನೆ ನಡೆದಿದ್ದು, ಒಟ್ಟು ಏಳು ವಿದ್ಯಾರ್ಥಿಗಳಿಗೆ ಸಿಡಿಲು ಬಡಿದಿದೆ.

ಸ್ಥಳೀಯ ವೀಕ್ಷಣಾ ಸ್ಥಳಕ್ಕೆ ಭೇಟಿ ನೀಡಿದಾಗ ಈ ದುರಂತ ಸಂಭವಿಸಿದೆ. ಮೃತರನ್ನು ರಹೀಸ್(20), ಫಹಾದ್(19), ಬಹಾಸ್(18) ಮತ್ತು ಜಿಯಾದ್(18) ಎಂದು ಗುರುತಿಸಲಾಗಿದೆ. ಇತರ ಇಬ್ಬರು ವಿದ್ಯಾರ್ಥಿಗಳು ಪ್ರಸ್ತುತ ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳು ಮಲ್ಲಪುರಂ ಮೂಲದವರಾಗಿದ್ದು, ಮಂಕಡದ ವೆಳ್ಳಿಲಾ ಪ್ರದೇಶದಲ್ಲಿರುವ ಪಂಥಲ್ಲೂರ್ ಬೆಟ್ಟದ ವೀಕ್ಷಣಾ ಸ್ಥಳಕ್ಕೆ ಆಗಮಿಸಿದ್ದರು ಎನ್ನಲಾಗಿದೆ.

ಇನ್ನೂ ಕಾಡಿನ ಮಧ್ಯೆ ದುರ್ಗಮ ಪ್ರದೇಶವಾದ ಕಾರಣ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದೆ. ಅನಿರೀಕ್ಷಿತವಾಗಿ ಸುರಿದ ಭಾರೀ ಮಳೆ ನಡುವೆ ಗುಡುಗು ಸಿಡಿಲಿನ ಆರ್ಭಟವೂ ಜೋರಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.