ದುಷ್ಟ ಶಕ್ತಿಗಳಿಂದ ರಕ್ಷಣೆ ಸಿಗಲಿ, ದೇಶಕ್ಕೆ ರಾಜ್ಯಕ್ಕೆ ಒಳಿತಾಗಲಿ: ವಿಜಯ್ ಬಹುಮತದ ಬೆನ್ನಲ್ಲೇ ಡಿಕೆ ಶಿವಕುಮಾರ್ ಹೇಳಿಕೆ; DCM ಮಾತಿನ ಮರ್ಮವೇನು?
ತಮಿಳುನಾಡಿನ ಕಾರೈಕಲ್ ಜಿಲ್ಲೆಯ ತಿರುನಲ್ಲಾರ್ ಶನೇಶ್ವರ ಸ್ವಾಮಿ ದೇಗುಲದ ಭೇಟಿ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಈ ರೀತಿ ಪ್ರತಿಕ್ರಿಯೆ ನೀಡಿದರು.

ತಿರುನಲ್ಲಾರ್: "ದುಷ್ಟ ಶಕ್ತಿಗಳಿಂದ ರಕ್ಷಣೆ ಸಿಗಲಿ ಎಂದು ಪ್ರಾರ್ಥಿಸಲು ಬಂದಿದ್ದೇನೆ. ದೇವರಲ್ಲಿ ಪ್ರಾರ್ಥನೆಗೆ ಇದು ಸೂಕ್ತ ಸಮಯ ಎಂದು ಬಂದಿರುವೆ. ದೇಶ ಹಾಗೂ ರಾಜ್ಯಕ್ಕೆ ಒಳಿತಾಗಲಿ ಎಂದು ಬೇಡಿಕೊಂಡಿರುವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ತಮಿಳುನಾಡಿನ ಕಾರೈಕಲ್ ಜಿಲ್ಲೆಯ ತಿರುನಲ್ಲಾರ್ ಶನೇಶ್ವರ ಸ್ವಾಮಿ ದೇಗುಲದ ಭೇಟಿ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಈ ರೀತಿ ಪ್ರತಿಕ್ರಿಯೆ ನೀಡಿದರು.
ಟಿವಿಕೆ ಜೊತೆಗಿನ ಮೈತ್ರಿ ಬಗ್ಗೆ ಕೇಳಿದಾಗ, "ಜಾತ್ಯಾತೀತ, ಪ್ರಜಾಪ್ರಭುತ್ವ ತತ್ವ ಉಳಿಯಬೇಕು ಎಂದು ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಂಡಿದೆ. ನಾವು ನಮ್ಮ ನಿಲುವಿಗೆ ಬದ್ದವಾಗಿದ್ದೇವೆ" ಎಂದು ಹೇಳಿದರು.
ಇನ್ನು ತಮಿಳುನಾಡು ರಾಜಕೀಯ ಗೊಂದಲ ಕೊನೆಗೂ ಅಂತ್ಯವಾಗಿದ್ದು, ವಿಸಿಕೆ ಪಕ್ಷದ ಬೆಂಬಲದೊಂದಿಗೆ ನಟ ವಿಜಯ್ ಸರ್ಕಾರ ರಚನೆಗೆ ಇದ್ದ ತೊಡಕು ನಿವಾರಣೆಯಾಗಿದೆ.
ವಿದುತಲೈ ಚಿರುಥೈಗಳ್ ಕಚ್ಚಿ (ವಿಸಿಕೆ) ಶನಿವಾರ, ಮೇ 9ರಂದು ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ)ಗೆ ಬೆಂಬಲ ಘೋಷಿಸಿದ್ದು, ವಿಧಾನಸಭೆಯ ತೀರ್ಪಿನ ಬಳಿಕ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗದಂತೆ ತಡೆಯುವುದು ಮತ್ತು ಜನರ ಜನಾದೇಶವನ್ನು ಕಾಪಾಡುವುದು ಈ ನಿರ್ಧಾರದ ಉದ್ದೇಶ ಎಂದು ಪಕ್ಷ ತಿಳಿಸಿದೆ.
ತಪ್ರಯತ್ನಗಳ ಬಳಿಕ ವಿಜಯ್ ನೇತೃತ್ವದ ಟಿವಿಕೆಗೆ 120 ಶಾಸಕರ ಬಲ ಸಿಕ್ಕಿದ್ದು ಬಳಿಕ ವಿಜಯ್ ಲೋಕಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.
ವಿಸಿಕೆಯ ಬೆಂಬಲದಿಂದ ಟಿವಿಕೆಗೆ ಅತ್ಯಂತ ಮಹತ್ವದ ಎರಡು ಸ್ಥಾನಗಳು ಸೇರ್ಪಡೆಯಾಗುತ್ತವೆ. ವಿಜಯ್ ನೇತೃತ್ವದ ಮೈತ್ರಿಗೆ ಈಗಾಗಲೇ 116 ಶಾಸಕರ ಬೆಂಬಲವಿತ್ತು. ಇದರಲ್ಲಿ ಕಾಂಗ್ರೆಸ್‌ನ ಐದು ಶಾಸಕರು ಹಾಗೂ ಎಡಪಂಥೀಯ ಪಕ್ಷಗಳ ನಾಲ್ವರು ಶಾಸಕರೂ ಸೇರಿದ್ದಾರೆ. ವಿಸಿಕೆಯ ಇಬ್ಬರು ಶಾಸಕರ ಬೆಂಬಲ ಸಿಕ್ಕಿದ್ದರಿಂದ ಮೈತ್ರಿಯ ಬಲ 118ಕ್ಕೆ ಏರಿತ್ತು. ಇದೀಗ ಐಯುಎಂಎಲ್ ನ ಇಬ್ಬರು ಶಾಸಕರು ಸಹ ಬೆಂಬಲ ಸೂಚಿಸಿದ್ದರಿಂದ ಟಿವಿಕೆ ಬಲ 120ಕ್ಕೆ ತಲುಪಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



