Google Trends ನಲ್ಲಿಯೂ ವಿಜಯ್- TVK ಅರ್ಭಟ! ಮತಗಳು, ಗೆಲುವಿನ ಬಗ್ಗೆ ಹೆಚ್ಚಿನ ಹುಡುಕಾಟ
ಮೇ 4, 2026 ರಂದು ಮತ ಎಣಿಕೆಯೊಂದಿಗೆ ಮತ್ತಷ್ಟು ಹುಡುಕಾಟ ಜಾಸ್ತಿಯಾಯಿತು. ಏಕೆಂದರೆ ಜನರು ವಿಜಯ್ ಮತ್ತು ಅವರ ಪಕ್ಷದ ಕುರಿತು ಹೆಚ್ಚೆಚ್ಚು ಮಾಹಿತಿಯನ್ನು ಹುಡುಕಿದ್ದಾರೆ. ಆದಾಗ್ಯೂ, ಅಂದಿನಿಂದ, ಪ್ರವೃತ್ತಿ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸಿದೆ.

ದೇಶಾದ್ಯಂತ ಈಗ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿ ರೀತಿಯಲ್ಲಿ ಭರ್ಜರಿ ಜಯ ಭೇರಿ ಬಾರಿಸಿದ ಟಿವಿಕೆ ಗೆಲುವಿನ ರೂವಾರಿ ನಟ-ರಾಜಕಾರಣಿ ವಿಜಯ್ ಅವರದ್ದೇ ಸದ್ದು. ಪಕ್ಷ ಸ್ಥಾಪನೆಯಾಗಿ ಎರಡೂವರೆ ವರ್ಷಗಳಲ್ಲೇ ಚೊಚ್ಚಲ ಚುನಾವಣೆಯಲ್ಲಿಯೇ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಟಿವಿಕೆ ಬಗ್ಗೆ ಜನರು ಗೂಗಲ್ ನಲ್ಲಿ ಹೆಚ್ಚಿನದಾಗಿ ಹುಡುಕಾಟ ನಡೆಸಿದ್ದಾರೆ.
ಏಪ್ರಿಲ್ 8 ರಿಂದ ಮೇ 8, 2026 ರವರೆಗಿನ ಕಳೆದ 30 ದಿನಗಳನ್ನು ಒಳಗೊಂಡ ಗೂಗಲ್ ಟ್ರೆಂಡ್ಸ್ ಡೇಟಾದ ಪ್ರಕಾರ, ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು, ಏಪ್ರಿಲ್ 14 ರ ಸುಮಾರಿಗೆ ದೇಶದಲ್ಲಿ ನಟ-ರಾಜಕಾರಣಿ ವಿಜಯ್ ಅವರ ಹುಡುಕಾಟ ಹೆಚ್ಚಾಗಲು ಪ್ರಾರಂಭವಾಯಿತು. ತಮಿಳುನಾಡಿನಲ್ಲಿ ಮತದಾನ ನಡೆದ ಏಪ್ರಿಲ್ 23 ರ ಹೊತ್ತಿಗೆ ಈ ಪ್ರವೃತ್ತಿ ಮತ್ತಷ್ಟು ಹೆಚ್ಚಾಯಿತು. ಇದು ಮತದಾನದ ಸಮಯದಲ್ಲಿ ಹೆಚ್ಚಿದ ಸಾರ್ವಜನಿಕ ಆಸಕ್ತಿಯನ್ನು ತೋರಿಸುತ್ತದೆ.
ಮೇ 4, 2026 ರಂದು ಮತ ಎಣಿಕೆಯೊಂದಿಗೆ ಮತ್ತಷ್ಟು ಹುಡುಕಾಟ ಜಾಸ್ತಿಯಾಯಿತು. ಏಕೆಂದರೆ ಜನರು ವಿಜಯ್ ಮತ್ತು ಅವರ ಪಕ್ಷದ ಕುರಿತು ಹೆಚ್ಚೆಚ್ಚು ಮಾಹಿತಿಯನ್ನು ಹುಡುಕಿದ್ದಾರೆ. ಆದಾಗ್ಯೂ, ಅಂದಿನಿಂದ, ಪ್ರವೃತ್ತಿ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸಿದೆ.
ತಮಿಳುನಾಡಿನಲ್ಲಿಯೂ ಇದೇ ರೀತಿಯ ಪ್ರವೃತಿ ಕಂಡುಬಂದಿತು. ಮತದಾನದ ದಿನದ ಮೊದಲು ರಾಜ್ಯದೊಳಗೆ ಹುಡುಕಾಟದ ಆಸಕ್ತಿ ಅಷ್ಟೇನೂ ಇರಲಿಲ್ಲ. ಆದರೆ ಫಲಿತಾಂಶಗಳು ಘೋಷಣೆಯಾದ ನಂತರ ಅದು ತೀವ್ರವಾಗಿ ಏರಿತು. ಸರ್ಚ್ ಇಂಟರೆಸ್ಟ್ 1 ರಿಂದ 100 ರ ಪ್ರಮಾಣದಲ್ಲಿತ್ತು ಎನ್ನಲಾಗಿತ್ತು. ಪಕ್ಷದ ಹೆಸರು , ನಟ ವಿಜಯ್ ಬಗ್ಗೆಯೂ ತಮಿಳುನಾಡು ಹಾಗೂ ದೇಶಾದ್ಯಂತ ಹೆಚ್ಚಾಗಿ ಸರ್ಚ್ ಮಾಡಲಾಗಿದೆ.
ತಮಿಳುನಾಡಿನಲ್ಲಿ ಎಲ್ಲಿ?
ಏಪ್ರಿಲ್ 8 ರಿಂದ ಮೇ 8, 2026 ರವರೆಗಿನ ಅವಧಿಯಲ್ಲಿ ಗೂಗಲ್ ಟ್ರೆಂಡ್ಸ್ ಡೇಟಾ ಪ್ರಕಾರ, ತಮಿಳುನಾಡಿನ ತಿರುಪತ್ತೂರಿನಲ್ಲಿ ವಿಜಯ್ ಅವರ ಹುಡುಕಾಟ ನಡೆಸಲಾಗಿದೆ. ಇಲ್ಲಿ 100 ಅಂಕಗಳನ್ನು ದಾಖಲಿಸಿದೆ. ಈ ಅವಧಿಯಲ್ಲಿ ತಮಿಳುನಾಡಿನ ಸಿಎಂ ಯಾರು," "ವಿಜಯ್ ದಳಪತಿ ಚುನಾವಣೆಯಲ್ಲಿ ಗೆದ್ದಿದ್ದಾರೆಯೇ," ಮತ್ತು "ವಿಜಯ್ ದಳಪತಿ ಕ್ಷೇತ್ರದ ಹೆಸರು" ಮುಂತಾದ ಬಗ್ಗೆ ಹೆಚ್ಚಿನ ಹುಡುಕಾಟ ನಡೆದಿದೆ.

ತಮಿಳುನಾಡು ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ನಾಳೆ ವಿಜಯ್ ಪ್ರಮಾಣವಚನ ಡೌಟ್; ಮತ್ತೆ ಸಂಖ್ಯಾಬಲ ಇಲ್ಲ ಎಂದ ಗವರ್ನರ್!
TVK ಪಕ್ಷದ ಪೂರ್ಣ ರೂಪ" ಮತ್ತು "ವಿಜಯ್ ದಳಪತಿ ರಾಜಕೀಯ ಪಕ್ಷ ಬಿಜೆಪಿಯೊಂದಿಗೆ ಇದೆಯೋ ಇಲ್ಲವೋ", ಆ ಪಕ್ಷದ ಸಿದ್ದಾಂತ, ಮೈತ್ರಿ ಮತ್ತಿತರ ವಿಚಾರಗಳ ಬಗ್ಗೆ ಜನರು ಹೆಚ್ಚಾಗಿ ಹುಡುಕಾಟ ನಡೆಸಿದ್ದಾರೆ. ಪಶ್ಚಿಮ ಬಂಗಾಳ ಸಿಎಂ" ಮತ್ತು "ಮಮತಾ ಬ್ಯಾನರ್ಜಿ ಕ್ಷೇತ್ರ" ಸೇರಿದಂತೆ ಪಶ್ಚಿಮ ಬಂಗಾಳ ರಾಜಕೀಯಕ್ಕೆ ಸಂಬಂಧಿಸಿದ ಹುಡುಕಾಟಕ್ಕಿಂತ ವಿಜಯ್ ಅವರ ಬಗ್ಗೆ ಹೆಚ್ಚಿನ ಹುಡುಕಾಟ ನಡೆಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


