ದೇಶ

ಉತ್ತರಾಖಂಡ: ನಡು ರಸ್ತೆಯಲ್ಲಿ ಎರಡು ಕರಡಿಗಳ ನಡುವೆ ಬಿಗ್ ಫೈಟ್! Video ವೈರಲ್

ಈ ಅಪರೂಪದ ಮತ್ತು ನಾಟಕೀಯ ಕ್ಷಣವನ್ನು ಸ್ಥಳೀಯರು ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಉತ್ತರಾಖಂಡ: ನಡು ರಸ್ತೆಯಲ್ಲಿ ಎರಡು ಕರಡಿಗಳ ನಡುವೆ ಬಿಗ್ ಫೈಟ್! Video ವೈರಲ್
ನಡು ರಸ್ತೆಯಲ್ಲಿ ಕರಡಿಗಳ ಕಾಳಗದ ಚಿತ್ರ
Published On :

ಡೆಹ್ರಾಡೂನ್: ಉತ್ತರಾಖಂಡ ರಾಜ್ಯದಲ್ಲಿ ನಡು ರಸ್ತೆಯಲ್ಲಿಯೇ ಎರಡು ಕರಡಿಗಳ ಭಯಾನಕ ಕಾಳಗದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಿಥೋರಗಢ ಜಿಲ್ಲೆಯ ಥಾಲ್-ದಿದಿಹಾತ್ ರಸ್ತೆ ಮಧ್ಯದಲ್ಲಿ ಎರಡು ಕರಡಿಗಳು ಬಿಗ್ ಫೈಟ್ ನಡೆದಿದೆ.

ಈ ಅಪರೂಪದ ಮತ್ತು ನಾಟಕೀಯ ಕ್ಷಣವನ್ನು ಸ್ಥಳೀಯರು ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಎರಡು ಕರಡಿಗಳು ರಸ್ತೆಯ ಮಧ್ಯದಲ್ಲಿ ಒಂದು ನಿಮಿಷಕ್ಕೂ ಹೆಚ್ಚು ಕಾಲ ಪರಸ್ಪರ ಕುಸ್ತಿಯಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಸ್ವಲ್ಪ ಹೊತ್ತಿನ ಕಾದಾಟದ ನಂತರ ಒಂದು ಕರಡಿ ಅಂತಿಮವಾಗಿ ರಸ್ತೆಯಿಂದ ಕೆಳಗೆ ಇಳಿದು ಕಣ್ಮರೆಯಾಯಿತು. ಇನ್ನೊಂದು ರಸ್ತೆಯ ಪಕ್ಕದಲ್ಲಿ ನಿಂತಿತ್ತು.

ರಸ್ತೆ ಮಧ್ಯೆದಲ್ಲಿ ಈ ಕರಡಿಗಳ ಕಾಳಗ ರಾತ್ರಿ ವೇಳೆಯಲ್ಲಿ ಸಂಚರಿಸುವ ಬೈಕ್ ಮತ್ತಿತರ ವಾಹನಗಳ ಸವಾರರಲ್ಲಿ ಭೀತಿಯನ್ನು ಸೃಷ್ಟಿಸಿದೆ. ಘಟನೆಯ ನಂತರ ಮಾರ್ಗದಲ್ಲಿ ಹೆಚ್ಚಿನ ಕಣ್ಗಾವಲು ಮತ್ತು ಬಿಗಿ ಭದ್ರತಾ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಯಾಣಿಕರಿಗೆ ಯಾವುದೇ ಅಹಿತಕರ ಘಟನೆಯಾದಂತೆ ತಡೆಗಟ್ಟಲು ಈ ಪ್ರದೇಶದಲ್ಲಿ ಪ್ರಾಣಿಗಳ ಓಡಾಟದ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಅವರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.