ವಿಜಯ್ ಸಿಎಂ ಹಾದಿಗೆ 118 ವಿಘ್ನ: TVK ಗೆ ಬೆಂಬಲ ಇಲ್ಲ- ಮುಸ್ಲೀಂ ಲೀಗ್ ಅಧಿಕೃತ ಘೋಷಣೆ; ಮತ್ತೆ ಮ್ಯಾಜಿಕ್ ನಂಬರ್ ಕೊರತೆ!
2 ಸ್ಥಾನಗಳಲ್ಲಿ ಗೆದ್ದಿರುವ, ಡಿಎಂಕೆ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಹೊಂದಿದ್ದ ಇಂಡಿಯನ್ ಮುಸ್ಲಿಂ ಲೀಗ್ ವಿಜಯ್ ಗೆ ಬೆಂಬಲಿಸುವ ನಿರೀಕ್ಷೆ ಇತ್ತು.

ಚೆನ್ನೈ: ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವ ತಮಿಳುನಾಡಿನಲ್ಲಿ ಕ್ಷಣಕ್ಷಣಕ್ಕೂ ರಾಜಕೀಯ ಹೊಸ ತಿರುವು ಪಡೆದುಕೊಳ್ಳುತ್ತಿದೆ.
2 ಸ್ಥಾನಗಳಲ್ಲಿ ಗೆದ್ದಿರುವ, ಡಿಎಂಕೆ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಹೊಂದಿದ್ದ ಇಂಡಿಯನ್ ಮುಸ್ಲಿಂ ಲೀಗ್ ವಿಜಯ್ ಗೆ ಬೆಂಬಲಿಸುವ ನಿರೀಕ್ಷೆ ಇತ್ತು. ಆದರೆ ಈಗ ಐಯುಎಂಎಲ್ ಡಿಎಂಕೆ ಜೊತೆ ಮೈತ್ರಿ ಮುರಿದುಕೊಂಡು ವಿಜಯ್ ಗೆ ಬೆಂಬಲ ನೀಡುವುದಿಲ್ಲ ಎಂದು ಅಧಿಕೃತವಾಗಿ ತಿಳಿಸಿದೆ.

ತಮಿಳುನಾಡು ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ನಾಳೆ ವಿಜಯ್ ಪ್ರಮಾಣವಚನ ಡೌಟ್; ಮತ್ತೆ ಸಂಖ್ಯಾಬಲ ಇಲ್ಲ ಎಂದ ಗವರ್ನರ್!
107 ಸ್ಥಾನಗಳನ್ನು ಗೆದ್ದು ಬಹುಮತದ ಸನಿಹದಲ್ಲಿರುವ ವಿಜಯ್ ನೇತೃತ್ವದ ಟಿವಿಕೆ ಎಷ್ಟೇ ಪ್ರಯತ್ನಪಟ್ಟರೂ 118 ಶಾಸಕರ ಬೆಂಬಲ ಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ವರೆಗೂ ತಲಾ 2 ಸ್ಥಾನಗಳನ್ನು ಹೊಂದಿರುವ ಸಿಪಿಐ, ಸಿಪಿಎಂ ಪಕ್ಷಗಳು, 5 ಸ್ಥಾನ ಹೊಂದಿರುವ ಕಾಂಗ್ರೆಸ್ ಮಾತ್ರವೇ ವಿಜಯ್ ಗೆ ಅಧಿಕೃತವಾಗಿ ಬೆಂಬಲ ಘೋಷಿಸಿದ್ದು ಪತ್ರ ಪ್ರಕಟಿಸಿವೆ. ಈ ಮೂಲಕ ವಿಜಯ್ ಒಟ್ಟು 116 ಶಾಸಕರ ಬೆಂಬಲ ಪಡೆಯಲು ಮಾತ್ರ ಯಶಸ್ವಿಯಾಗಿದ್ದಾರೆ. 2 ಶಾಸಕರನ್ನು ಹೊಂದಿರುವ ವಿಸಿಕೆ ಪಕ್ಷ ವಿಜಯ್ ಗೆ ಬೆಂಬಲ ಘೋಷಿಸುವ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಒಂದು ವೇಳೆ ವಿಸಿಕೆ ಬೆಂಬಲ ಘೋಷಿಸಿ ಪತ್ರ ಪ್ರಕಟಿಸಿದರೆ ವಿಜಯ್ ಸಿಎಂ ಹಾದಿ ಸುಗಮವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


