ದೇಶ

Video: ಮಧ್ಯರಾತ್ರಿ ಸಾಮಾನ್ಯ ಮಹಿಳೆಯಂತೆ ರಸ್ತೆಯಲ್ಲಿ ನಿಂತ ಪೊಲೀಸ್ ಕಮಿಷನರ್; 3 ತಾಸಿನಲ್ಲಿ 40 ಕಾಮುಕರಿಂದ ಕಿರುಕುಳ!

ಮಲ್ಕಾಜ್‌ಗಿರಿ ಕಮಿಷನರೇಟ್‌ಗೆ ಮೊದಲ ಮಹಿಳಾ ಆಯುಕ್ತೆಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸುಮತಿ ಅವರು ರೋಡ್ ರೋಮಿಯೋಗಳಿಗೆ ಶಾಕ್ ಟ್ರೀಟ್ಮೆಂಟ್ ನೀಡಲು ನಿರ್ಧರಿಸಿದ್ದರು.

Video: ಮಧ್ಯರಾತ್ರಿ ಸಾಮಾನ್ಯ ಮಹಿಳೆಯಂತೆ ರಸ್ತೆಯಲ್ಲಿ ನಿಂತ ಪೊಲೀಸ್ ಕಮಿಷನರ್; 3 ತಾಸಿನಲ್ಲಿ 40 ಕಾಮುಕರಿಂದ ಕಿರುಕುಳ!
ಮಧ್ಯರಾತ್ರಿ ಸಾಮಾನ್ಯ ಮಹಿಳೆಯಂತೆ ರಸ್ತೆಯಲ್ಲಿ ನಿಂತ ಪೊಲೀಸ್ ಕಮಿಷನರ್
Published On :

ಹೈದರಾಬಾದ್: ಒಂಟಿ ಮಹಿಳೆಯರಿಗೆ ತಡರಾತ್ರಿ ಕಿರುಕುಳವನ್ನು ತಡೆಯುವ ಉದ್ದೇಶದಿಂದ ಸಿನಿಮಾ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿದ, ಮಲ್ಕಾಜ್‌ಗಿರಿ ಪೊಲೀಸ್ ಆಯುಕ್ತೆ ಸುಮತಿ ಸಿಪಿ ಅವರು ಮಧ್ಯ ರಾತ್ರಿ ದಿಲ್‌ಸುಖ್‌ನಗರದ ಬೀದಿಗಳಲ್ಲಿ ಸಾಮಾನ್ಯ ಮಹಿಳೆಯಂತೆ ಬಸ್ ಗಾಗಿ ಕಾಯುತ್ತ ನಿಂತಿದ್ದು, ಈ ವೇಳೆ 40ಕ್ಕೂ ಹೆಚ್ಚು ಕಾಮುಕರಿಂದ ಕಿರುಕುಳ ಎದುರಿಸಿದ್ದಾರೆ.

ಮಲ್ಕಾಜ್‌ಗಿರಿ ಕಮಿಷನರೇಟ್‌ಗೆ ಮೊದಲ ಮಹಿಳಾ ಆಯುಕ್ತೆಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸುಮತಿ ಅವರು ರೋಡ್ ರೋಮಿಯೋಗಳಿಗೆ ಶಾಕ್ ಟ್ರೀಟ್ಮೆಂಟ್ ನೀಡಲು ನಿರ್ಧರಿಸಿದ್ದರು.

ಅದರಂತೆ ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3.30 ರವರೆಗೆ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಸಿಪಿ ಸುಮತಿ ಅವರು ಸಾಮಾನ್ಯ ಮಹಿಳೆಯಂತೆ ಸರಳ ಉಡುಪಿನಲ್ಲಿ ರಸ್ತೆಬದಿಯಲ್ಲಿ ಒಬ್ಬಂಟಿಯಾಗಿ ನಿಂತಿದ್ದರು. ಕೆಲವೇ ನಿಮಿಷಗಳಲ್ಲಿ, ಅವರನ್ನು ಸುತ್ತುವರೆದ ಪುರುಷರ ಗುಂಪು ಅಶ್ಲೀಲ ಮತ್ತು ಅಸಭ್ಯ ಭಾಷೆಯನ್ನು ಬಳಸಿ ಕಿರುಕುಳ ನೀಡಿದೆ. ಕೇವಲ ಮೂರೇ ಗಂಟೆಯಲ್ಲಿ 40ಕ್ಕೂ ಹೆಚ್ಚು ಪುರುಷರು ಕಿರುಕುಳ ನೀಡಲು ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ.

ಮಫ್ತಿಯಲ್ಲಿ ಹತ್ತಿರದಲ್ಲಿ ಬೀಡುಬಿಟ್ಟಿದ್ದ ಪೊಲೀಸ್ ತಂಡಗಳು ತಕ್ಷಣವೇ ಸುಮತಿ ಬಳಿ ಬಂದು ಅಪರಾಧಿಗಳನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು 40 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತ ವ್ಯಕ್ತಿಗಳಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳು ಮತ್ತು ಉದ್ಯೋಗ ಆಕಾಂಕ್ಷಿಗಳಾಗಿದ್ದಾರೆ.

ವಶಕ್ಕೆ ಪಡೆದ 40 ಮಂದಿಗೂ ಸರಿಯಾಗಿ ಬಿಸಿ ಮುಟ್ಟಿಸಿದ ಸುಮತಿ ಅವರು, “ರಸ್ತೆಯಲ್ಲಿ ಹುಡುಗಿಯನ್ನು ನೋಡಿದಾಗ ಅಸಭ್ಯವಾಗಿ ವರ್ತಿಸಬೇಡಿ, ಸಹಾಯ ಮಾಡುವುದನ್ನು ಕಲಿಯಿರಿ” ಎಂದು ಬುದ್ಧಿವಾದ ಹೇಳಿದ್ದಾರೆ.

“ಓದು ಮತ್ತು ವೃತ್ತಿಜೀವನದ ಮೇಲೆ ಗಮನಹರಿಸಿ, ಗಾಂಜಾ-ಮದ್ಯದ ವ್ಯಸನ ಬಿಡದಿದ್ದರೆ ನಿಮ್ಮ ಬಾಲ ಕತ್ತರಿಸುವುದಾಗಿ” ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮಲ್ಕಾಜ್‌ಗಿರಿ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಅವರು ವಿಶೇಷ ಗುಪ್ತಚರ ಶಾಖೆಯ(SIB) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಅವರ ಅಧಿಕಾರಾವಧಿಯಲ್ಲಿ, ಹಲವಾರು ನಕ್ಸಲರು ಪೊಲೀಸರ ಮುಂದೆ ಶರಣಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.