ದೇಶ

ವೀಸಾ ನಿಯಮ ಉಲ್ಲಂಘನೆ: ಆಸ್ಟ್ರೇಲಿಯಾದಿಂದ ಪಂಜಾಬ್‌ನ 9 ಮಂದಿ ಸೇರಿ 15 ಭಾರತೀಯರು ಗಡಿಪಾರು..!

ವಲಸೆ ಹಾಗೂ ಇತರೆ ಅಧಿಕಾರಿಗಳು ಐಜಿಐ ವಿಮಾನ ನಿಲ್ದಾಣದಲ್ಲಿ ಎಲ್ಲಾ ದಾಖಲೆ ಪರಿಶೀಲನೆಗಳನ್ನು ಪೂರ್ಣಗೊಳಿಸಿದ ನಂತರ, ಕೇಂದ್ರ ಸಂಸ್ಥೆಗಳು ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿ ಅವರನ್ನು ಪಂಜಾಬ್ ಪೊಲೀಸರಿಗೆ ಒಪ್ಪಿಸಿವೆ.

ವೀಸಾ ನಿಯಮ ಉಲ್ಲಂಘನೆ: ಆಸ್ಟ್ರೇಲಿಯಾದಿಂದ ಪಂಜಾಬ್‌ನ 9 ಮಂದಿ ಸೇರಿ 15 ಭಾರತೀಯರು ಗಡಿಪಾರು..!
ಆಸ್ಟ್ರೇಲಿಯಾದಿಂದ ಗಡೀಪಾರು ಮಾಡಲಾದ ಭಾರತೀಯ ಪ್ರಜೆಗಳನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಪಂಜಾಬ್ ಸರ್ಕಾರದ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
Published On :

ಚಂಡೀಗಢ: ಆಸ್ಟ್ರೇಲಿಯಾದಿಂದ ಗಡಿಪಾರುಗೊಳಿಸಲ್ಪಟ್ಟ 15 ಭಾರತೀಯರು ಗುರುವಾರ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಆಗಮಿಸಿದ್ದು, ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಇವರಲ್ಲಿ ಪಂಜಾಬ್‌ನ 9 ಮಂದಿ ಸೇರಿದ್ದು, ಅವರನ್ನು ಪಂಜಾಬ್ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.

ಗಡಿಪಾರುಗೊಂಡವರು 25 ರಿಂದ 45 ವರ್ಷದೊಳಗಿನವರಾಗಿದ್ದು, ಇವರಲ್ಲಿ 9 ಮಂದಿ ಪಂಜಾಬ್‌ನ ಮೋಗಾ, ಖನ್ನಾ, ಜಲಂಧರ್, ಹೋಶಿಯಾರ್‌ಪುರ, ನವನ್‌ಶಹರ್, ತರಣ್ ತರಣ್, ಗುರುದಾಸ್ಪುರ್, ರೋಪರ್ ಮತ್ತು ಫಿರೋಜ್‌ಪುರ ಜಿಲ್ಲೆಗಳಿಗೆ ಸೇರಿದವರಾಗಿದ್ದಾಕೆ. ಇದಲ್ಲದೆ, ಹರಿಯಾಣ ಮತ್ತು ಉತ್ತರಾಖಂಡದಿಂದ ತಲಾ ಒಬ್ಬರು ಮತ್ತು ತೆಲಂಗಾಣದ ಇಬ್ಬರು ಇದ್ದಾರೆಂದು ತಿಳಿದುಬಂದಿದೆ.

ಗಡಿಪಾರಿಗೊಳಗಾದ ಭಾರತೀಯರನ್ನು ಜಲಂಧರ್‌ನ ಸನ್ಸರ್‌ಪುರದ ಸತೀಂದರ್ಜಿತ್ ಸಿಂಗ್ ಶೆರ್ಗಿಲ್ (31), ಹೋಶಿಯಾರ್‌ಪುರದ ಜಸ್ವಂತ್ ಸಿಂಗ್ (34), ತರಣ್ ತರನ್‌ನ ಚೌದ್ರಿವಾಲಾದಿಂದ ಅಂಗ್ರೇಜ್ ಸಿಂಗ್ (32), ಮೊಗಾದ ದೌಧರ್‌ನಿಂದ ಹರ್‌ಪ್ರೀತ್ ಸಿಂಗ್, ಗುರುದಾಸ್ಪುರದ ದೆಹ್ರಿವಾಲ್ ನಿವಾಸಿ ಜಸ್ಪ್ರೀತ್ ಸಿಂಗ್ (37), ಜಾಗೋರಾನ್‌ನ ಚಚ್ರಾರಿಯಿಂದ ಜಗಜಿತ್ ಸಿಂಗ್ ಸಿಧು (35), ಖನ್ನಾದ ಸಮ್ರಾಲಾದಿಂದ ರಂಜಿತ್ ಸಿಂಗ್ (25), ಎಸ್‌ಬಿಎಸ್ ನಗರದ ಬಾಲಾಚೌರ್‌ನಿಂದ ಹರ್‌ಪ್ರೀತ್ ಸಿಂಗ್ ಮತ್ತು ರೋಪರ್‌ನ ಕಿರಾತ್‌ಪುರ ಸಾಹಿಬ್‌ನ ಶ್ರುತಿ ಶರ್ಮಾ (45) ಎಂದು ಗುರ್ತಿಸಲಾಗಿದೆ. ಶೃತಿ ಶರ್ಮಾ 2008ರಲ್ಲಿ ಆಸ್ಟ್ರೇಲಿಯಾಗೆ ತೆರಳಿ ವೀಸಾ ಅವಧಿ ಮೀರಿದ್ದರೂ ಅಲ್ಲಿಯೇ ಉಳಿದಿದ್ದರು ಎಂದು ತಿಳಿದುಬಂದಿದೆ.

ಇನ್ನುಳಿದಂತೆ ಹರಿಯಾಣದ ರಾಹುಲ್ (31), ಉತ್ತರಾಖಂಡದ ಕನ್ವಲ್‌ಜೀತ್ ಸಿಂಗ್ (27), ತೆಲಂಗಾಣದ ಸಮೀಉದ್ದೀನ್ ಖಾಜಾ (41) ಮತ್ತು ಅಬ್ದುಲ್ಲಾ ಸಲೇಹ್ ಬಹಾತಾಬ್ (31) ಕೂಡ ಭಾರತಕ್ಕೆ ಗಡಿಪಾರಾಗಿದ್ದಾರೆ.

ವಲಸೆ ಹಾಗೂ ಇತರೆ ಅಧಿಕಾರಿಗಳು ಐಜಿಐ ವಿಮಾನ ನಿಲ್ದಾಣದಲ್ಲಿ ಎಲ್ಲಾ ದಾಖಲೆ ಪರಿಶೀಲನೆಗಳನ್ನು ಪೂರ್ಣಗೊಳಿಸಿದ ನಂತರ, ಕೇಂದ್ರ ಸಂಸ್ಥೆಗಳು ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿ ಅವರನ್ನು ಪಂಜಾಬ್ ಪೊಲೀಸರಿಗೆ ಒಪ್ಪಿಸಿವೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಈ ಕುರಿತು ಮಾತನಾಡಿ, ಇವರಿಗೆ ದಾಖಲೆಗಳನ್ನು ಹೇಗೆ ಸಿದ್ಧಪಡಿಸಲಾಯಿತು, ಯಾರ ಸಹಾಯದಿಂದ ಅವರು ಹೊರಟರು ಎಂಬುದನ್ನು ತನಿಖೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಅಗತ್ಯವಿದ್ದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಿ ಪ್ರಕರಣವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.