ಗುಜರಾತ್: ಸೀರೆ ಪ್ಯಾಕ್ ಮಾಡುವಾಗ ಬೆಂಕಿ ಅವಘಡ; ಮಗು ಸೇರಿ ಐವರು ಸಾವು; ಅಗ್ನಿ ನಂದಿಸಲು ಸ್ಥಳೀಯರ ಹರಸಾಹಸ, Video!
ಗುಜರಾತ್‌ನ ಸೂರತ್‌ನಲ್ಲಿ ಒಂದು ದೊಡ್ಡ ಅವಘಡ ಸಂಭವಿಸಿದೆ. ಲಿಂಬಾಯತ್ ಪ್ರದೇಶದ ಮೂರು ಅಂತಸ್ತಿನ ಮನೆಯಲ್ಲಿ ಸಂಭವಿಸಿದ ಬೆಂಕಿಯಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು ಒಂದು ಪುಟ್ಟ ಮಗು ಸೇರಿದೆ.

ಗುಜರಾತ್‌ನ ಸೂರತ್‌ನಲ್ಲಿ ಒಂದು ದೊಡ್ಡ ಅವಘಡ ಸಂಭವಿಸಿದೆ. ಲಿಂಬಾಯತ್ ಪ್ರದೇಶದ ಮೂರು ಅಂತಸ್ತಿನ ಮನೆಯಲ್ಲಿ ಸಂಭವಿಸಿದ ಬೆಂಕಿಯಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು ಒಂದು ಪುಟ್ಟ ಮಗು ಸೇರಿದೆ. ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮಿಥಿ ಖಾದಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಮನೆ ಸೀರೆ ಪ್ಯಾಕಿಂಗ್ ಮಾಡಲಾಗುತ್ತಿದ್ದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು. ಕುಟುಂಬ ಸದಸ್ಯರು ಫೋಮ್ ಶೀಟ್‌ಗಳನ್ನು ಬಳಸಿ ಸೀರೆಗಳನ್ನು ಪ್ಯಾಕ್ ಮಾಡುತ್ತಿದ್ದರು. ರಜಾದಿನವಾಗಿದ್ದರಿಂದ, ಮನೆಯಲ್ಲಿ ಹೆಚ್ಚಿನ ಪ್ರಮಾಣದ ಪ್ಯಾಕಿಂಗ್ ಸಾಮಗ್ರಿಗಳು ಮತ್ತು ಫೋಮ್ ಸಂಗ್ರಹಿಸಲಾಗಿತ್ತು. ಇದ್ದಕ್ಕಿದ್ದಂತೆ, ಬೆಂಕಿ ಕಾಣಿಸಿಕೊಂಡಿದ್ದು ಇಡೀ ಕೋಣೆ ಕಪ್ಪು ಹೊಗೆಯಿಂದ ತುಂಬಿತ್ತು. ಅಗ್ನಿ ಅವಘಡದ ಮಾಹಿತಿ ಪಡೆದ ಪೊಲೀಸರು, ಅಗ್ನಿಶಾಮಕ ದಳ ಮತ್ತು 108 ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಬಂದವು ಎಂದು ಉಪ ಪೊಲೀಸ್ ಆಯುಕ್ತ ಕಾನನ್ ದೇಸಾಯಿ ಹೇಳಿದರು. ಕೊಠಡಿಯಲ್ಲಿ ದಟ್ಟ ಹೊಗೆ ಆವರಿಸಿತ್ತು. ಒಳಗೆ ಸಿಲುಕಿದ್ದ ಜನರು ಉಸಿರುಗಟ್ಟಿ ಅಸ್ವಸ್ಥಗೊಂಡಿದ್ದು. ಎಲ್ಲರನ್ನೂ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದರು.
ವಿದ್ಯುತ್ ಬೋರ್ಡ್‌ನಲ್ಲಿನ ಕಿಡಿಯಿಂದ ಬೆಂಕಿ ಉಂಟಾಗಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ರಾಸಾಯನಿಕಗಳನ್ನು ಹೊಂದಿರುವ ಫೋಮ್ ಶೀಟ್ ಅನ್ನು ಬೋರ್ಡ್ ಬಳಿ ಇರಿಸಲಾಗಿತ್ತು. ಬೆಂಕಿ ಹೊತ್ತಿಕೊಂಡ ತಕ್ಷಣ, ಫೋಮ್ ವಿಷಕಾರಿ ಅನಿಲ ಮತ್ತು ಭಾರೀ ಹೊಗೆಯನ್ನು ಹೊರಸೂಸಲು ಪ್ರಾರಂಭಿಸಿತು. ಈ ವಿಷಕಾರಿ ಹೊಗೆಯನ್ನು ಉಸಿರಾಡಿದ ಕುಟುಂಬ ಸದಸ್ಯರು ಪ್ರಜ್ಞೆ ತಪ್ಪಿ ಸಾವನ್ನಪ್ಪಿದರು. ಮೃತರು ಉತ್ತರ ಪ್ರದೇಶದವರಾಗಿದ್ದು ಸೂರತ್‌ನಲ್ಲಿ ಸೀರೆ ಪ್ಯಾಕರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಮೃತರನ್ನು ಶಹನಾಜ್ ಬೇಗಂ ಅನ್ಸಾರಿ (65), ಹುಸಾ ಬೇಗಂ ಅನ್ಸಾರಿ (18), ಶಬಿನಾ ಅನ್ಸಾರಿ (28), ಪರ್ವೀನ್ ಅಬ್ದುಲ್ ಅನ್ಸಾರಿ (19), ಮತ್ತು ಸುಭಾನ್ ಅಲಿ ಅನ್ಸಾರಿ (4) ಎಂದು ಗುರುತಿಸಲಾಗಿದೆ. ಘಟನೆಯ ಸಮಯದಲ್ಲಿ ಮನೆಯ ಪುರುಷರು ಕೆಲಸಕ್ಕೆ ಹೋಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



