ದೇಶ

ಜಯಲಲಿತಾರ ಹೈದರಾಬಾದ್ ಮನೆ ಮುಟ್ಟುಗೋಲು; ಕಾರಣವೇನು ಗೊತ್ತಾ?

ಶ್ರೀನಗರ ಕಾಲೋನಿಯಲ್ಲಿರುವ G+4(ನೆಲಮಹಡಿ ಮತ್ತು ನಾಲ್ಕು ಮಹಡಿ) ಕಟ್ಟಡವನ್ನು ಸೋಮವಾರ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್(GHMC) ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಜಯಲಲಿತಾರ ಹೈದರಾಬಾದ್ ಮನೆ ಮುಟ್ಟುಗೋಲು; ಕಾರಣವೇನು ಗೊತ್ತಾ?
ಜಯಲಲಿತಾರ ಹೈದರಾಬಾದ್ ಮನೆ
Published On :

ಹೈದರಾಬಾದ್‌: ಹೈದರಾಬಾದ್‌ನಲ್ಲಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಒಡೆತನದ ವಸತಿ ಕಟ್ಟಡವನ್ನು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ತಾತ್ಕಾಲಿಕವಾಗಿ ವಶಪಡಿಸಿಕೊಂಡಿದ್ದು, ತೆರಿಗೆ ಬಾಕಿ ಪಾವತಿಸುವುದಾಗಿ ವಾರಸುದಾರರು ಭರವಸೆ ನೀಡಿದ ನಂತರ ಮಂಗಳವಾರ ಬಿಡುಗಡೆ ಮಾಡಿದೆ.

ಶ್ರೀನಗರ ಕಾಲೋನಿಯಲ್ಲಿರುವ G+4(ನೆಲಮಹಡಿ ಮತ್ತು ನಾಲ್ಕು ಮಹಡಿ) ಕಟ್ಟಡವನ್ನು ಸೋಮವಾರ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್(GHMC) ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಕಾರಣ 2017 ರಿಂದ ಬಾಕಿ ಇರುವ ತೆರಿಗೆ ಪಾವತಿಸುವಂತೆ ಅದರ ವಾರಸುದಾರರಿಗೆ ಹಲವು ನೋಟಿಸ್‌ಗಳನ್ನು ನೀಡಿದರೂ ಪ್ರತಿಕ್ರಿಯಿಸಲು ವಿಫಲರಾಗಿದ್ದರು ಎಂದು GHMC ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಆಸ್ತಿ ತೆರಿಗೆ ಬಾಕಿ ಪಾವತಿಸಲು ನಾವು ನೋಟಿಸ್‌ಗಳನ್ನು ನೀಡಿದ್ದೇವೆ. ತೆರಿಗೆ ಸಂಗ್ರಹಿಸಲು ಹಲವಾರು ಬಾರಿ ಅವರ ಮನೆಗೆ ಭೇಟಿ ನೀಡಿದ್ದೇವೆ. ಆದರೆ ಯಾವುದಕ್ಕೂ ಸ್ಪಂದಿಸದಿದ್ದಾಗ ನಾವು ಅದನ್ನು ನಿಯಮಗಳ ಪ್ರಕಾರ ವಶಪಡಿಸಿಕೊಳ್ಳಬೇಕಾಯಿತು" ಎಂದು ಅವರು ಹೇಳಿದ್ದಾರೆ.

ಬಾಕಿ ಇರುವ ಆಸ್ತಿ ತೆರಿಗೆಯ ಮೇಲೆ GHMC ಶೇಕಡಾ 90 ರಷ್ಟು ಬಡ್ಡಿಯನ್ನು ಮನ್ನಾ ಮಾಡಿದ ನಂತರವೂ 82 ಲಕ್ಷಕ್ಕೂ ಹೆಚ್ಚು ಆಸ್ತಿ ತೆರಿಯನ್ನು ಜಯಲಲಿತಾ ಅವರ ಮನೆ ವಾರಸುದಾರರು ಪಾವತಿಸಬೇಕಾಗಿತ್ತು.

ಜಯಲಲಿತಾ ಅವರ ಮರಣದ ನಂತರ (2016 ರಲ್ಲಿ) ಕಟ್ಟಡವು ಖಾಲಿ ಉಳಿದಿರುವುದರಿಂದ ವಾರಸುದಾರರು ಖಾಲಿ ಜಾಗದ ವಿನಾಯಿತಿಯನ್ನು ಕೋರಿದ್ದಾರೆ. ವಿನಾಯಿತಿ ಕೋರಿಕೆಯನ್ನು ಅಂಗೀಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕಟ್ಟಡವು ಜಯಲಲಿತಾ ಅವರ ಹೆಸರಿನಲ್ಲಿದ್ದು, ಹಕ್ಕುದಾರರು ಅಗತ್ಯ ಪುರಾವೆಗಳನ್ನು ಸಲ್ಲಿಸಿದ ನಂತರ ಅದರ ಮಾಲೀಕತ್ವವನ್ನು ವರ್ಗಾಯಿಸಲಾಗುವುದು.

ಆಸ್ತಿಯ ಉತ್ತರಾಧಿಕಾರಕ್ಕೆ ಸಂಬಂಧಿಸಿದ ಕಾನೂನು ಕ್ರಮಗಳು ನಡೆಯುತ್ತಿವೆ.

ಇದು ವಸತಿ ಕಟ್ಟಡವಾಗಿದ್ದರೂ, ಹಿಂದೆ ಉದ್ಯಮಿ ವಿಜಯ್ ಮಲ್ಯ ಅವರ ಕಂಪನಿಗೆ ಬಾಡಿಗೆಗೆ ನೀಡಲಾಗಿದ್ದರಿಂದ ಈಗ ವಾಣಿಜ್ಯ ವರ್ಗದಲ್ಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.