ಕೇರಳ ವಿಧಾನಸಭಾ ಚುನಾವಣೆ: BJP ಎ- ಟೀಮ್ ಅಂತಾ LDF, UDF ಒಪ್ಪಿಕೊಂಡ್ರಾ? ಪ್ರಧಾನಿ ಮೋದಿ ಹೇಳಿದ್ದೇನು?
ಎಲ್‌ಡಿಎಫ್ ಮತ್ತು ಯುಡಿಎಫ್ ದಶಕಗಳ ಕಾಲ "ಹಗರಣಗಳ" ನಡುವೆ ಅಧಿಕಾರವನ್ನು ವ್ಯವಹಾರ ಮಾಡಿಕೊಂಡಿವೆ. ಆದರೂ ಪರಸ್ಪರರ ವಿರುದ್ಧ ಎಂದಿಗೂ ವರ್ತಿಸಿಲ್ಲ. ಜನರಿಗೆ ಸುಳ್ಳು ಹೇಳಿಕೆಗಳ ಮೂಲಕ ವಂಚಿಸಿವೆ ಎಂದರು.

ಪಾಲಕ್ಕಾಡ್: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎ-ಟೀಮ್ ಅಂತಾ LDF ಮತ್ತು UDF ಪಕ್ಷಗಳು ಒಪ್ಪಿಕೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪ್ರತಿಪಾದಿಸಿದರು.
ಪ್ರತಿಸ್ಪರ್ಧಿ ವಿರೋಧ ಪಕ್ಷಗಳು ಭ್ರಷ್ಟಾಚಾರ ಮತ್ತು ರಾಜಕೀಯ ಅವಕಾಶವಾದಿಗಳು ಎಂದು ಆರೋಪಿಸಿದರು. ಪಾಲಕ್ಕಾಡ್‌ನಲ್ಲಿ ಎನ್‌ಡಿಎ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕೇರಳ ರಾಜ್ಯ ಸ್ವಾರ್ಥ ರಾಜಕಾರಣದ ಎರಡು ಪಕ್ಷಗಳ ನಡುವಣ ಸಿಲುಕಿಕೊಂಡಿದೆ ಎಂದರು.
ಎಲ್‌ಡಿಎಫ್ ಮತ್ತು ಯುಡಿಎಫ್ ದಶಕಗಳ ಕಾಲ "ಹಗರಣಗಳ" ನಡುವೆ ಅಧಿಕಾರವನ್ನು ವ್ಯವಹಾರ ಮಾಡಿಕೊಂಡಿವೆ. ಆದರೂ ಪರಸ್ಪರರ ವಿರುದ್ಧ ಎಂದಿಗೂ ವರ್ತಿಸಿಲ್ಲ. ಜನರಿಗೆ ಸುಳ್ಳು ಹೇಳಿಕೆಗಳ ಮೂಲಕ ವಂಚಿಸಿವೆ. ದಶಕಗಳಿಂದ ಒಟ್ಟಾಗಿ ಕೇರಳವನ್ನು ಲೂಟಿ ಮಾಡಿದೆ. ವ್ಯವಸ್ಥೆಯಲ್ಲಿ ನಮ್ಮ ಕೇರಳ ಸಿಕ್ಕಿಬಿದ್ದಿದೆ ಎಂದು ಟೀಕಾಪ್ರಹಾರ ಮಾಡಿದರು.
ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಪರಸ್ಪರ ಸುಳ್ಳು ನಿಂದನೆ ಮಾಡುತ್ತಿವೆ... ನೀವು ಅವರಿಬ್ಬರ ಬಗ್ಗೆ ಜಾಗರೂಕರಾಗಿರಬೇಕು. ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ 'ಬಿ-ಟೀಮ್' ಎಂದು ಹೇಳಿಕೊಳ್ಳುತ್ತಾರೆ, ಆದರೆ ಕೇರಳದ ಚುನಾವಣೆಯಲ್ಲಿ ಬಿಜೆಪಿ ಮಾತ್ರ ನಿಜವಾದ ಸ್ಪರ್ಧಿ ಎಂದು ಇಬ್ಬರೂ ಒಪ್ಪಿಕೊಳ್ಳುತ್ತಾರೆ. ಎರಡೂ ಪಕ್ಷಗಳು ಬಿಜೆಪಿಯ ಬೆಳವಣಿಗೆಗೆ ಭಯಪಡುತ್ತವೆ. ಅವರ "ತಪ್ಪುಗಳು ಬಹಿರಂಗಗೊಳ್ಳುತ್ತವೆ" ಎಂದು ಎಚ್ಚರಿಸಿದರು.
ಕೇರಳದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಮುಂದಿನ ಸರ್ಕಾರ ರಚಿಸಲಿದೆ. ಕೇರಳದ ಜನತೆಯ ಆಶೀರ್ವಾದದೊಂದಿಗೆ ಇಲ್ಲಿ ಸರ್ಕಾರ ರಚಿಸುತ್ತೇವೆ ಎಂದು ಹೇಳಿದ ಪ್ರಧಾನಿ, ಈ ಹಣ ನಿಮಗೆ ಸೇರಿದ್ದು, ಆದರೆ ಅವರು ಅದನ್ನು ಲೂಟಿ ಮಾಡಿದ್ದಾರೆ ಎಂದು ಪ್ರಧಾನಿ ಆರೋಪಿಸಿದರು. ಎನ್‌ಡಿಎ ಸರ್ಕಾರ ಲೂಟಿ ಮಾಡಿದ ಹಣವನ್ನು ಮರುಪಡೆಯುತ್ತದೆ. ಕೇರಳದ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಎಂದು ಅವರು ಭರವಸೆ ನೀಡಿದರು.

ಕೇರಳ ಚುನಾವಣೆ: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಡಿಕೆಶಿಗೆ ಸ್ಥಾನ; ಸಿಎಂ ಸಿದ್ದರಾಮಯ್ಯಗೆ ಇಲ್ಲ!
"ಕೇರಳದ ಸಾಲವು 5 ಲಕ್ಷ ಕೋಟಿ ರೂ. ದಾಟಿದೆ, ಕಳೆದ ದಶಕದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಕೇರಳದ ಎನ್‌ಡಿಎ ಸರ್ಕಾರ ಭ್ರಷ್ಟರಿಂದ ಹಣವನ್ನು ವಸೂಲಿ ಮಾಡುತ್ತದೆ ಮತ್ತು ಅದನ್ನು ರಾಜ್ಯದ ಅಭಿವೃದ್ಧಿಗೆ ಬಳಸುತ್ತದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


