ದೇಶ

ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್​​ಗೆ ಬಿಗ್​ ಶಾಕ್: ಎಲ್ಲಾ ಹುದ್ದೆಗಳಿಗೆ PCC ಮಾಜಿ ಅಧ್ಯಕ್ಷ ಸುಬ್ರಮಣಿಯನ್ ರಾಜಿನಾಮೆ!

ವೈಥಿಲಿಂಗಂ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಪಕ್ಷದ 16 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಸುಬ್ರಮಣಿಯನ್ ಅವರ ರಾಜೀನಾಮೆ ನಿರ್ಧಾರ ಹೊರಬಿದ್ದಿದೆ.

ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್​​ಗೆ ಬಿಗ್​ ಶಾಕ್: ಎಲ್ಲಾ ಹುದ್ದೆಗಳಿಗೆ PCC ಮಾಜಿ ಅಧ್ಯಕ್ಷ ಸುಬ್ರಮಣಿಯನ್ ರಾಜಿನಾಮೆ!
ಸುಬ್ರಮಣಿಯನ್
Published On :

ಪುದುಚೇರಿ: ಪುದುಚೇರಿ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಪ್ರದೇಶ ಕಾಂಗ್ರೆಸ್ ಸಮಿತಿಯ (ಪಿಸಿಸಿ) ಮಾಜಿ ಅಧ್ಯಕ್ಷ ಎ.ವಿ. ಸುಬ್ರಮಣಿಯನ್ ಅವರು ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಶುಕ್ರವಾರ ಪುದುಚೇರಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ. ವೈತಿಲಿಂಗಂ ಅವರಿಗೆ ಪತ್ರ ಬರೆದು ಎ.ವಿ. ಸುಬ್ರಮಣಿಯನ್ ರಾಜೀನಾಮೆ ಸಲ್ಲಿಸಿದ್ದಾರೆ. ಆ ಪತ್ರದಲ್ಲಿ ಸುಬ್ರಮಣಿಯನ್ ವೈಯಕ್ತಿಕ ಕಾರಣಗಳು ಮತ್ತು ಅನಿವಾರ್ಯ ಸಂದರ್ಭಗಳು ಎಂದು ತಿಳಿಸಿ ರಾಜೀನಾಮೆ ನೀಡಿದ್ದಾರೆ. ಆದರೆ ಇದರ ಹಿಂದೆ ಬೇರೆ ಕಾರಣಗಳಿರಬಹುದು ಎಂದು ಜೋರು ಚರ್ಚೆಯಾಗುತ್ತಿದೆ.

ವೈಥಿಲಿಂಗಂ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಪಕ್ಷದ 16 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಸುಬ್ರಮಣಿಯನ್ ಅವರ ರಾಜೀನಾಮೆ ನಿರ್ಧಾರ ಹೊರಬಿದ್ದಿದೆ.

ಮನ್ನಾಡಿಪಟ್ಟುದಿಂದ ಡಿಪಿಆರ್ ಸೆಲ್ವಂ, ಊಸುಡುದಿಂದ ಪಿ. ಕಾರ್ತಿಕೇಯನ್, ಇಂದಿರಾನಗರದಿಂದ ಎನ್. ರಾಜಕುಮಾರ್, ತಟ್ಟಂಚವಾಡಿಯಿಂದ ವಿ. ವೈಥಿಲಿಂಗಂ, ಕಾಮರಾಜನಗರದಿಂದ ಪಿ.ಕೆ. ದೇವದಾಸ್, ಲಾಸ್‌ಪೇಟ್‌ನಿಂದ ಎಂ. ವೈದ್ಯನಾಥನ್, ಮುತ್ಯಾಲಪೇಟೆಯಿಂದ ಜಿ. ರಾಜೇಂದ್ರನ್, ಅರಿಯಂಕುಪ್ಪಂನಿಂದ ಜೆ. ವಿಜಯಲಕ್ಷ್ಮಿ, ಮನವೇಲಿಯಿಂದ ಆರ್‌ಕೆಆರ್ ಆನಂದರಾಮನ್ ಸ್ಪರ್ಧಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.