ಭಾರತದ ಬತ್ತಳಿಕೆ ಸೇರಲಿದೆ ರಷ್ಯಾದ ಮತ್ತೊಂದು ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ; 445 ಕೋಟಿ ರೂ ಒಪ್ಪಂದ!
ಭಾರತೀಯ ಸೇನೆಗೆ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ರಷ್ಯಾದ ರೋಸೊಬೊರೊನೆಕ್ಸ್‌ಪೋರ್ಟ್ ಸಂಸ್ಥೆ ಜೊತೆ ಭಾರತೀಯ ರಕ್ಷಣಾ ಸಚಿವಾಲಯ ಶುಕ್ರವಾರ 445 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ.

ನವದೆಹಲಿ: ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ್ ವೇಳೆ ಭಾರತೀಯ ವಾಯು ಪ್ರದೇಶವನ್ನು ಗುರಾಣಿಯಂತೆ ಕಾದಿದ್ದ ರಷ್ಯಾದ S-400 ನಂತೆಯೇ ಇದೀಗ ಮತ್ತೊಂದು ವಾಯು ರಕ್ಷಣಾ ವ್ಯವಸ್ಥೆ ಭಾರತದ ಬತ್ತಳಿಕೆ ಸೇರುತ್ತಿದೆ.
ಹೌದು.. ಭಾರತೀಯ ಸೇನೆಗೆ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ರಷ್ಯಾದ ರೋಸೊಬೊರೊನೆಕ್ಸ್‌ಪೋರ್ಟ್ ಸಂಸ್ಥೆ ಜೊತೆ ಭಾರತೀಯ ರಕ್ಷಣಾ ಸಚಿವಾಲಯ ಶುಕ್ರವಾರ 445 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ.
ಭಾರತೀಯ ನೌಕಾಪಡೆಯ P-8I ದೀರ್ಘ-ಶ್ರೇಣಿಯ ಸಾಗರ ವಿಚಕ್ಷಣ ವಿಮಾನಗಳ ನಿರ್ವಹಣೆಗಾಗಿ ಬೋಯಿಂಗ್ ಇಂಡಿಯಾ ಡಿಫೆನ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ 413 ರೂ.ಗಳ ಪ್ರತ್ಯೇಕ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
"ಭಾರತೀಯ ಸೇನೆಗೆ 445 ಕೋಟಿ ರೂ.ಗಳ ಮೌಲ್ಯದ ಟಂಗಸ್ಕಾ (Tunguska) ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ ಖರೀದಿ ಒಪ್ಪಂದವನ್ನು ರಷ್ಯಾದ ಜೆಎಸ್‌ಸಿ ರೋಸೊಬೊರೊನೆಕ್ಸ್‌ಪೋರ್ಟ್ (JSC Rosoboronexport)ನೊಂದಿಗೆ ಸಹಿ ಮಾಡಲಾಗಿದೆ" ಎಂದು ಅದು ಹೇಳಿದೆ.
ಅಂತೆಯೇ "ಈ ಅತ್ಯಾಧುನಿಕ ಕ್ಷಿಪಣಿಗಳು ವಿಮಾನ ಡ್ರೋನ್‌ಗಳು ಮತ್ತು ಕ್ರೂಸ್ ಕ್ಷಿಪಣಿಗಳು ಸೇರಿದಂತೆ ವೈಮಾನಿಕ ಬೆದರಿಕೆಗಳ ವಿರುದ್ಧ ಭಾರತದ ಬಹುಪದರದ ವಾಯು ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುತ್ತವೆ. ಈ ಒಪ್ಪಂದವು ಇಂಡೋ-ರಷ್ಯಾದ ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ" ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಶೇ.100ರಷ್ಟು ಭಾರತದಲ್ಲೇ ನಿರ್ಮಾಣ
ಅಂತೆಯೇ ಈ ಮಹತ್ವದ ಒಪ್ಪಂದದ ಮೂಲಕ ಈ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಯನ್ನು ಶೇ.100ರಷ್ಟು ಭಾರತದಲ್ಲೇ ತಯಾರಿಸಲಾಗುತ್ತದೆ ಎನ್ನಲಾಗಿದೆ.
P8I ವಿಮಾನಗಳ ಒಪ್ಪಂದ
"100 ಪ್ರತಿಶತ ಸ್ಥಳೀಯ ವಸ್ತುಗಳನ್ನು ಹೊಂದಿರುವ ಬೈ ಇಂಡಿಯನ್ ವಿಭಾಗದ ಅಡಿಯಲ್ಲಿ P8I ವಿಮಾನಗಳ ತಪಾಸಣೆಗಾಗಿ ಒಪ್ಪಂದವು MRO (ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ) ಸೌಲಭ್ಯದಲ್ಲಿ ಫ್ಲೀಟ್‌ನ ಡಿಪೋ-ಮಟ್ಟದ ನಿರ್ವಹಣೆಯನ್ನು ಖಚಿತಪಡಿಸುತ್ತದೆ" ಎಂದು ಸಚಿವಾಲಯ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಬಹು-ಪಾತ್ರದ ದೀರ್ಘ-ಶ್ರೇಣಿಯ ಕಡಲ ವಿಚಕ್ಷಣಾ ಜಲಾಂತರ್ಗಾಮಿ ವಿರೋಧಿ ಯುದ್ಧ (LRMR ASW) ವಿಮಾನವಾದ ಬೋಯಿಂಗ್ P-8I, ಹಿಂದೂ ಮಹಾಸಾಗರದಲ್ಲಿ ಭಾರತೀಯ ನೌಕಾಪಡೆಯ ಕಡಲ ಕಣ್ಗಾವಲು ಕಾರ್ಯಾಚರಣೆಗಳಿಗೆ ಅವಿಭಾಜ್ಯವಾಗಿದೆ. ಭಾರತೀಯ ನೌಕಾಪಡೆಯು ಪ್ರಸ್ತುತ 12 P-8I ವಿಮಾನಗಳನ್ನು ನಿರ್ವಹಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



