ದೇಶ

ಮದ್ಯಪಾನ ಮಾಡಿ, ಲೈಫ್ ಜಾಕೆಟ್ ಧರಿಸದೆ ಈಜಲು ತೆರಳಿದ್ದು ಗಾಯಕ ಜುಬೀನ್ ಗಾರ್ಗ್ ಸಾವಿಗೆ ಕಾರಣ: ವದಂತಿಗಳಿಗೆ ತೆರೆ ಎಳೆದ ಸಿಂಗಾಪುರ್ ಕೋರ್ಟ್

2025ರ ಸೆಪ್ಟೆಂಬರ್‌ನಲ್ಲಿ ಜುಬೀನ್ ಗಾರ್ಗ್ ಅವರು ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಲು ಸಿಂಗಾಪುರಕ್ಕೆ ತೆರಳಿದ್ದರು. ಸೆ.19ರಂದು ತಮ್ಮ ನಿಗದಿತ ಪ್ರದರ್ಶನಕ್ಕೆ ಒಂದು ದಿನ ಮೊದಲು ಸಾವನ್ನಪ್ಪಿದ್ದರು.

ಮದ್ಯಪಾನ ಮಾಡಿ, ಲೈಫ್ ಜಾಕೆಟ್ ಧರಿಸದೆ ಈಜಲು ತೆರಳಿದ್ದು ಗಾಯಕ ಜುಬೀನ್ ಗಾರ್ಗ್ ಸಾವಿಗೆ ಕಾರಣ: ವದಂತಿಗಳಿಗೆ ತೆರೆ ಎಳೆದ ಸಿಂಗಾಪುರ್ ಕೋರ್ಟ್
ಜುಬೀನ್ ಗಾರ್ಗ್
Published On :

ಸಿಂಗಾಪುರ: ಮದ್ಯಪಾನ ಮಾಡಿ, ಲೈಫ್‌ ಜಾಕೆಟ್‌ ಧರಿಸದೇ ಈಜಲು ತೆರಳಿದ್ದೇ ಖ್ಯಾತ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ ಸಾವಿಗೆ ಕಾರಣ ಎಂದು ಸಿಂಗಾಪುರ ಕೋರ್ಟ್‌ ಹೇಳಿದೆ.

ಸಿಂಗಾಪುರ ಪೊಲೀಸ್ ಕೋಸ್ಟ್ ಗಾರ್ಡ್ ನಡೆಸಿದ ತನಿಖೆಯ ಬಳಿಕ ಈ ಸಾವು ʻದುರದೃಷ್ಟಕರ ಮುಳುಗುವಿಕೆʼಎಂದು ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ. 2025ರ ಸೆಪ್ಟೆಂಬರ್‌ನಲ್ಲಿ ಜುಬೀನ್ ಗಾರ್ಗ್ ಅವರು ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಲು ಸಿಂಗಾಪುರಕ್ಕೆ ತೆರಳಿದ್ದರು. ಸೆ.19ರಂದು ತಮ್ಮ ನಿಗದಿತ ಪ್ರದರ್ಶನಕ್ಕೆ ಒಂದು ದಿನ ಮೊದಲು ಸಾವನ್ನಪ್ಪಿದ್ದರು.

ಗಾರ್ಗ್ ಬೋಟ್‌ನಲ್ಲಿ ಲಾಜರಸ್ ದ್ವೀಪಕ್ಕೆ ವಿಹಾರಕ್ಕೆ ತೆರಳಿದ್ದರು. ಈ ವೇಳೆ ಅವರು ಮದ್ಯ ಸೇವಿಸಿದ್ದರು. ನಂತರ ಬೋಟ್‌ನಿಂದ ನೀರಿಗಿಳಿದು ಈಜುವಾಗ ಲೈಫ್ ಜಾಕೆಟ್ ಧರಿಸಿದ್ದರು. ನಂತರ ಅವರು ದ್ವೀಪದ ಕಡೆಗೆ ಈಜುವಾಗ ಲೈಫ್ ಜಾಕೆಟ್ ಧರಿಸಲು ನಿರಾಕರಿಸಿದ್ದರು ಎಂದು ಸಾಕ್ಷಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸ್ನೇಹಿತರು ದೋಣಿಗೆ ಹಿಂತಿರುಗಲು ಪದೇ ಪದೇ ವಿನಂತಿಸಿದ್ದರು. ದುರದೃಷ್ಟವಶಾತ್‌ ಅವರು ಸಾವನ್ನಪ್ಪಿದರು ಎಂದು ವರದಿಯಾಗಿದೆ.

ವರದಿಯ ಪ್ರಕಾರ 100 ಮಿಲಿಗೆ 333 ಮಿಗ್ರಾಂ ರಕ್ತ ಆಲ್ಕೋಹಾಲ್ ಸಾಂದ್ರತೆಯನ್ನು ಬಹಿರಂಗಪಡಿಸಿದೆ. ಇದು ಈಜಲು ತೆರಳುವಾಗ ಆಲ್ಕೋಹಾಲ್ ಸೇವನೆ ಮಾಡಿರುವುದನ್ನು ದೃಢಿಕರಿಸುತ್ತದೆ ಎಂದು ವಿಚಾರಣೆ ಸಮಯದಲ್ಲಿ ತಿಳಿಸಲಾಗಿದೆ. ಈ ಮೂಲಕ ಅವರ ಸಾವಿನ ಹಿಂದಿನ ಪಿತೂರಿ ಅನುಮಾನವನ್ನು ನ್ಯಾಯಾಲಯ ತಳ್ಳಿ ಹಾಕಿದೆ. ಜೊತೆಗೆ ಹಲವು ತಿಂಗಳುಗಳಿಂದ ಚರ್ಚೆಯಲ್ಲಿದ್ದ ವದಂತಿಗಳಿಗೆ ಕೋರ್ಟ್‌ ಬ್ರೇಕ್‌ ಹಾಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.