ದೇಶ

ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧೆ: ಭಾರತ್ ಸೇವಾಶ್ರಮ ಸಂಘದಿಂದ ಸ್ವಾಮಿ ಉತ್ಪಲ್ ಮಹಾರಾಜ್ ಉಚ್ಚಾಟನೆ

"ಪಕ್ಷಪಾತ ರಾಜಕೀಯದಲ್ಲಿ ಸಕ್ರಿಯ ಭಾಗವಹಿಸುವಿಕೆಯು ಸಂಘ ಎತ್ತಿಹಿಡಿಯುವ ಆದರ್ಶಗಳಿಗೆ ವಿರುದ್ಧವಾಗಿದೆ" ಎಂದು ಬಿಎಸ್ಎಸ್ ಪ್ರತಿಪಾದಿಸಿದೆ.

ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧೆ: ಭಾರತ್ ಸೇವಾಶ್ರಮ ಸಂಘದಿಂದ ಸ್ವಾಮಿ ಉತ್ಪಲ್ ಮಹಾರಾಜ್ ಉಚ್ಚಾಟನೆ
ಉತ್ಪಲ್ ಮಹಾರಾಜ್
Published On :

ಕೋಲ್ಕತ್ತಾ: ಭಾರತೀಯ ಜನತಾ ಪಕ್ಷ(ಬಿಜೆಪಿ)ದಿಂದ ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಸ್ವಾಮೀಜಿಯೊಬ್ಬರನ್ನು ಭಾರತ್ ಸೇವಾಶ್ರಮ ಸಂಘ(ಬಿಎಸ್‌ಎಸ್) ಶನಿವಾರ ಉಚ್ಚಾಟನೆ ಮಾಡಿದೆ.

ಆಂತರಿಕ ಟಿಪ್ಪಣಿಯಲ್ಲಿ, ಬಿಎಸ್‌ಎಸ್, ಸ್ವಾಮೀಜಿ ನಡೆಯನ್ನು ತನ್ನ ತತ್ವಗಳಿಗೆ ವಿರುದ್ಧವಾಗಿದೆ ಮತ್ತು ಇದು "ರಾಜಕೀಯ" ನಡೆ ಎಂದು ಟೀಕಿಸಿದೆ.

ಬಿಎಸ್‌ಎಸ್ ಉನ್ನತ ಮಟ್ಟದ ಸಭೆಯ ನಂತರ ಹೊರಡಿಸಲಾದ ಆಂತರಿಕ ಸುತ್ತೋಲೆಯ ಪ್ರಕಾರ, ಸಂಘವು ಉತ್ತರ ದಿನಾಜ್‌ಪುರ ಜಿಲ್ಲೆಯ ಕಲಿಯಗಂಜ್ ಕ್ಷೇತ್ರದಿಂದ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಉತ್ಪಲ್ ಮಹಾರಾಜ್ ಎಂದೂ ಕರೆಯಲ್ಪಡುವ ಸ್ವಾಮಿ ಜ್ಯೋತಿರ್ಮಯಾನಂದ ಅವರನ್ನು ಉಚ್ಚಾಟಿಸಲಾಗಿದೆ ಎಂದು ಬಿಎಸ್‌ಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ, ಈ ಸನ್ಯಾಸಿಯು, ಬಿಎಸ್ಎಸ್ ನಿರೀಕ್ಷಿಸುತ್ತಿದ್ದ ತ್ಯಾಗ ಮತ್ತು ಶಿಸ್ತಿನ ಮಾರ್ಗದಿಂದ ವಿಮುಖರಾಗಿದ್ದಾರೆ ಎಂದು ಸಂವಹನದಲ್ಲಿ ತಿಳಿಸಲಾಗಿದೆ.

"ಪಕ್ಷಪಾತ ರಾಜಕೀಯದಲ್ಲಿ ಸಕ್ರಿಯ ಭಾಗವಹಿಸುವಿಕೆಯು ಸಂಘ ಎತ್ತಿಹಿಡಿಯುವ ಆದರ್ಶಗಳಿಗೆ ವಿರುದ್ಧವಾಗಿದೆ" ಎಂದು ಬಿಎಸ್ಎಸ್ ಪ್ರತಿಪಾದಿಸಿದೆ.

ತನ್ನ ಸಾಂಸ್ಥಿಕ ನಿಲುವನ್ನು ಪುನರುಚ್ಚರಿಸುತ್ತಾ, ಸಂಘಟನೆಯು ರಾಜಕೀಯ ವಿಷಯಗಳಲ್ಲಿ ಕಟ್ಟುನಿಟ್ಟಾದ ತಟಸ್ಥತೆಯನ್ನು ಕಾಯ್ದುಕೊಳ್ಳುತ್ತದೆ ಮತ್ತು ಅದರ ಸನ್ಯಾಸಿಗಳು, ಬ್ರಹ್ಮಚಾರಿಗಳು ಮತ್ತು ಸಹಚರರು ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದನ್ನು ಅಥವಾ ಅನುಮೋದಿಸುವುದನ್ನು ನಿಷೇಧಿಸುತ್ತದೆ ಎಂದು ಬಿಎಸ್ಎಸ್ ಹೇಳಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಉತ್ಪಲ್ ಮಹಾರಾಜ್, ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲು ಒಪ್ಪಿಕೊಳ್ಳುವ ಮೊದಲು ಬಿಎಸ್‌ಎಸ್ ಪ್ರಧಾನ ಕಚೇರಿಗೆ ರಾಜೀನಾಮೆ ಪತ್ರವನ್ನು ಈಗಾಗಲೇ ಸಲ್ಲಿಸಿದ್ದೇನೆ ಮತ್ತು ಬಿಎಸ್‌ಎಸ್ ನನ್ನ ರಾಜೀನಾಮೆಯನ್ನು "ಅಂಗೀಕರಿಸಿದೆ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.